ದಾವಣಗೆರೆಯಲ್ಲಿ ಮತ್ತೊಬ್ಬ ಉಗ್ರನ ಬಂಧನ?!

fayaz
Published on

ದಾವಣಗೆರೆ: ಒಂದೆರಡು ದಿನಗಳಿಂದ ಯಾವ ರೀತಿ ಸಿಸಿಬಿ ಪೊಲೀಸರು ಉಗ್ರರನ್ನು ಸರಿಯಾದ ಸಮಯಕ್ಕೆ ಸೆರೆ ಹಿಡಿದದ್ದು, ಬಂಧಿತ ಉಗ್ರರಿಗೆ ಯಾವ ರೀತಿಯಲ್ಲಿ ಕಾರಾಗೃಹದಲ್ಲಿದ್ದವರ ಜತೆ ಸಂಪರ್ಕವಿತ್ತು ಮುಂತಾದ ಆಘಾತಕಾರಿ ಮಾಹಿತಿಗಳು ಹೊರಬರುತ್ತಲೇ ಇವೆ. ಇದೀಗ ದಾವಣಗೆರೆಯಲ್ಲೂ ಸಿಸಿಬಿ ಪೊಲೀಸರು ಮತ್ತೋರ್ವನನ್ನು ವಶಕ್ಕೆ ಪಡೆದಿದ್ದಾರೆ.

ಫಯಾಜ್ ವುಲ್ಲಾ(30) ಎಂಬ ವ್ಯಕ್ತಿಯನ್ನು ಬೆಂಗಳೂರು ಸಿಸಿಬಿ ಪೊಲೀಸರು ವಶಕ್ಕೆ ಪಡೆದ್ದು ಈ ಸಂಶಯಕ್ಕೆ ಕಾರಣವಾಗಿದೆ. ಇಂದು ಬೆಳಿಗ್ಗೆ ದಾವಣಗೆರೆ ಆಗಮಿಸಿದ ಸಿಸಿಬಿ ಪೊಲೀಸರ ತಂಡ ದಾವಣಗೆರೆಯ ಅಜಾದ್ ನಗರದ ನಿವಾಸಿ ಫಯಾಜ್ ವುಲ್ಲಾನನ್ನು ವಶಕ್ಕೆ ಪಡೆದಿದ್ದಾರೆ. ಈತ ಮೂಲತಃ ಬೆಂಗಳೂರಿನವನಾಗಿದ್ದು ಈ ಹಿಂದೆ ಬೆಂಗಳೂರಿನಲ್ಲಿ ಡ್ರಗ್ಸ್, ಆಯುಧ ಮಾರಾಟ ವಿಚಾರವಾಗಿ ಇತನ ಮೇಲೆ ಐದು ಕೇಸ್ ದಾಖಲಾಗಿದ್ದವು.

ಈಗ ಶಂಕಿತ ಉಗ್ರರ ಬಂಧನವಾದ ಹಿನ್ನಲೆ ಫಯಾಜ್ ವುಲ್ಲಾನನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದು ನಾನಾ ಸಂಶಯಕ್ಕೆ ಕಾರಣವಾಗಿದೆ. ಫಯಾಜ್ ವುಲ್ಲಾ ವಿರುದ್ಧ ಅಕ್ರಮ ಆಯುಧ ಮಾರಾಟ ಮಾಡಿದ ಪ್ರಕರಣ ದಾಖಲಾಗಿ ಆತ ಜಾಮೀನು ಮೇಲೆ ಹೊರಗಿದ್ದ. ಆದರೆ ಈಗ ಸಿಸಿಬಿ ಪೊಲೀಸರು ಆತನನ್ನು ಮತ್ತೊಮ್ಮೆ ವಶಕ್ಕೆ ಪಡೆದು ತನಿಖೆಗೆ ಮುಂದಾಗಿದ್ದಾರೆ. ಈ ಫಯಾಜ್​, ಐವರು ಉಗ್ರರ ಫೋನ್ ಕಂಟ್ಯಾಕ್ಟ್​ನಲ್ಲಿದ್ದ ಕಾರಣ ಸಿಸಿಬಿ ಪೊಲೀಸರು ವಿಚಾರಣೆಗೆ ಕರೆದುಕೊಂಡು ಹೋಗಿದ್ದಾರೆ ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net