

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಸದನ ಶುರುವಾಗುವ ಮುನ್ನ ನೂತನ ಸಂಸತ್ತು ಇಂದು ಅಪರೂಪದ ಘಟನೆಗೆ ಸಾಕ್ಷಿ ಆಗಿದೆ.
ಇಂದು ಸದನ ಶುರುವಾಗುವ ಮುನ್ನ, ಪ್ರಧಾನಿ ನರೇಂದ್ರ ಮೋದಿ ಲೋಕಸಭೆಯ ಸಭಾಂಗಣದಲ್ಲಿ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರೊಂದಿಗೆ ಸಂಕ್ಷಿಪ್ತ ಸಂವಾದ ನಡೆಸಿದರು. ಮಂಗಳವಾರ ಬೆಂಗಳೂರಿನಿಂದ ವಿಮಾನ ತುರ್ತು ಭೂಸ್ಪರ್ಶ ಮಾಡಿದ ನಂತರ ಪ್ರಧಾನಿ ಮೋದಿ ಅವರ ಯೋಗಕ್ಷೇಮವನ್ನು ಕೇಳಿದ್ದಾರೆ ಎಂದು ವರದಿಯಾಗಿದೆ.
ಸದನದ ದಿನದ ಸಭೆಗೆ ಮುನ್ನವೇ ಮೋದಿ ವಿವಿಧ ನಾಯಕರಿಗೆ ಶುಭಾಶಯ ಕೋರಿದ್ದು, ಪ್ರತಿಪಕ್ಷ ನಾಯಕರ ಪೀಠವನ್ನು ತಲುಪಿದ ಅವರು, ಗಾಂಧಿಯವರೊಂದಿಗೆ ಕೆಲಕಾಲ ಮಾತುಕತೆ ನಡೆಸಿದರು. ಸಂಸತ್ತಿನ ಅಧಿವೇಶನದ ಮೊದಲ ದಿನದಂದು ನಾಯಕರು ಪರಸ್ಪರ ಶುಭಾಶಯ ಕೋರುವುದು ವಾಡಿಕೆ ಎಂದು ಸುದ್ದಿ ಸಂಸ್ಥೆ ಪಿಟಿಐ ಹೇಳಿದೆ.
ಮಂಗಳವಾರ, ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರಿದ್ದ ವಿಮಾನ, ನವದೆಹಲಿಗೆ ಹೊರಟಿದ್ದ ಚಾರ್ಟಡ್ ವಿಮಾನವು ಭೋಪಾಲ್ ವಿಮಾನ ನಿಲ್ದಾಣದಲ್ಲಿ "ತುರ್ತು" ಭೂಸ್ಪರ್ಷ ಮಾಡಿತು, ಆದರೆ ವಿಮಾನ ನಿಲ್ದಾಣದ ನಿರ್ದೇಶಕ ರಾಮ್‌ಜಿ ಅವಸ್ಥಿ ಇದು ಪ್ರಯಾರಿಟಿ ಲ್ಯಾಂಡಿಂಗ್ ಆಗಿದ್ದು, ತುರ್ತು ಲ್ಯಾಂಡಿಂಗ್ ಅಲ್ಲ ಎಂದು ಹೇಳಿದ್ದಾರೆ.
ವಿಮಾನವು ರಾಜಾ ಭೋಜ್ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದೆ ಎಂದು ಭೋಪಾಲ್ ಪೊಲೀಸ್ ಕಮಿಷನರ್ ಹರಿನಾರಾಯಣ್ ಚಾರಿ ಮಿಶ್ರಾ ತಿಳಿಸಿದ್ದು ಹೆಚ್ಚಿನ ವಿವರಗಳನ್ನು ನೀಡಿಲ್ಲ. ಆದರೆ ಕಾಂಗ್ರೆಸ್ ನಾಯಕರೊಬ್ಬರು ತಾಂತ್ರಿಕ ದೋಷವು ಅನಿರೀಕ್ಷಿತ ಸ್ಪರ್ಶಕ್ಕೆ ಕಾರಣವಾಯಿತು ಎಂದು ಹೇಳಿದ್ದಾರೆ.
ಹಿರಿಯ ಕಾಂಗ್ರೆಸ್ ನಾಯಕಿ ಮತ್ತು ಮಧ್ಯಪ್ರದೇಶ ಮಹಿಳಾ ಆಯೋಗದ ಮಾಜಿ ಅಧ್ಯಕ್ಷೆ ಶೋಬಾ ಓಜಾ, "ಸೋನಿಯಾ ಜಿ ಮತ್ತು ರಾಹುಲ್ ಜಿ ಅವರನ್ನು ಹೊತ್ತೊಯ್ಯುವ ಚಾರ್ಟರ್ಡ್ ವಿಮಾನವು ಕೆಲವು ತಾಂತ್ರಿಕ ದೋಷದಿಂದಾಗಿ ತುರ್ತು ಭೂಸ್ಪರ್ಶ ಮಾಡಿದೆ" ಎಂದು ಹೇಳಿದ್ದಾರೆ.
ಚಾರ್ಟರ್ಡ್ ವಿಮಾನವು ಬೆಂಗಳೂರಿನಿಂದ ನವದೆಹಲಿಗೆ ತೆರಳುತ್ತಿತ್ತು, ಅಲ್ಲಿ ರಾಹುಲ್ ಮತ್ತು ಸೋನಿಯಾ ಗಾಂಧಿ ಅವರು ಹಿಂದಿನ ದಿನ ವಿಪಕ್ಷಗಳ ಸಭೆಯಲ್ಲಿ ಭಾಗವಹಿಸಿದ್ದರು ಎಂದು ಓಜಾ ಹೇಳಿದರು. "ಇಬ್ಬರೂ ರಾತ್ರಿ 9.30ರ ಸುಮಾರಿಗೆ ಇಂಡಿಗೋ ವಿಮಾನದ ಮೂಲಕ ನವದೆಹಲಿಗೆ ತೆರಳಿದರು" ಎಂದು ಅವರು ಹೇಳಿದರು.(ಏಜೆನ್ಸೀಸ್)