More

    ಕಾಂಗ್ರೆಸ್ಸಿಗರು ನಮ್ಮ ನಿಷ್ಠಾವಂತ ಕಾರ್ಯಕರ್ತನನ್ನು ಕೊಲೆ ಮಾಡಿದ್ದಾರೆ: ಜನಾರ್ದನ ರೆಡ್ಡಿ ಆರೋಪ!

    ಬೆಂಗಳೂರು: ಇದೀಗ ಕೆಂಗಲ್​ ಗೇಟ್​ ಬಳಿ ಶಾಸಕ ಜನಾರ್ದನ ರೆಡ್ಡಿ ಹೇಳಿಕೆ ನೀಡಿದ್ದು, “ಕಾಂಗ್ರೆಸ್ ಕಾರ್ಯಕರ್ತರು, ನಮ್ಮ ಪಕ್ಷದ ಮೆಹೆಬೂಬ್ ಬಾಷಾ ಎನ್ನು ವ ನಿಷ್ಠಾವಂತ ಕಾರ್ಯಕರ್ತನನ್ನು ಕೊಲೆ ಮಾಡಿದ್ದಾರೆ” ಎಂದು ಆರೋಪಿಸಿದ್ದಾರೆ.

    ಬಳ್ಳಾರಿಯಲ್ಲಿ ಮೆಹೆಬೂಬ್ ಬಾಷಾ ಎನ್ನುವ ಯುವಕನನ್ನು ಕೋಳಿ ಅನ್ವರ್ ಹಾಗೂ ಸಹಚರರು ಸೇರಿಕೊಂಡು ಹತ್ಯೆ ಮಾಡಿದ್ದಾರೆ ಎಂದು ಮೃತರ ಕುಟುಂಬಸ್ಥರು ಆರೋಪ ಮಾಡಿದ್ದಾರೆ. ಈ ಕೊಲೆ ರಾಜಕೀಯ ದ್ವೇಷದಿಂದ ನಡೆದದ್ದು ಎನ್ನಲಾಗುತ್ತಿದ್ದು ಇದೀಗ ಖುದ್ದು ಕೆಆರ್​ಪಿಪಿ ಅಧ್ಯಕ್ಷ ಜನಾರ್ದನ ರೆಡ್ಡಿ ಕೂಡ ಆರೋಪ ಮಾಡುತ್ತಿದ್ದಾರೆ.

    ಇದನ್ನೂ ಓದಿ: ಜನಾರ್ದನ ರೆಡ್ಡಿಗೆ ಶಾಕ್​ ಕೊಟ್ಟ ನ್ಯಾಯಾಲಯ: ರೆಡ್ಡಿ ದಂಪತಿ ಒಡೆತನದ ಆಸ್ತಿಗಳ ಜಪ್ತಿಗೆ ಆದೇಶ

    ಈ ಕುರಿತಂತೆ ಮಾತನಾಡಿದ ಜನಾರ್ದನ ರೆಡ್ಡಿ, “ಈಗಾಗಲೇ ಹಂತಕರನ್ನ ಬಂಧಿಸಿದ್ದಾರೆ ಎನ್ನುವ ಮಾಹಿತಿ ಬಂದಿದೆ. ರಾಜಕೀಯ ದ್ವೇಷದಿಂದ ಕೊಲೆ ಮಾಡಲಾಗಿದೆ. 20 ವರ್ಷಗಳ ನಂತರ ಮತ್ತೆ ಬಳ್ಳಾರಿ ಯಲ್ಲಿ ಈ ರೀತಿ ಕೊಲೆಯಾಗಿದೆ. ಹಂತಕರಿಗೆ ಗಲ್ಲು ಶಿಕ್ಷೆಯಾಗಬೇಕು. ಮೃತ ಮೆಹೆಬೂಬ್ ಬಾಷಾ ನಮ್ಮ ಪಕ್ಷದ ಗೆಲುವಿಗೆ ಶ್ರಮಿಸಿದ್ದರು” ಎಂದಿದ್ದಾರೆ

    ಮೆಹೆಬೂಬ್ ಬಾಷಾ ಮಗನ ಹುಟ್ಟುಹಬ್ಬದಂದೇ ಕೊಲೆ!

    ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಜನಾರ್ದನ ರೆಡ್ಡಿ, “ಮಗನ ಹುಟ್ಟುಹಬ್ಬದ ದಿನವೇ ಕಾಂಗ್ರೆಸ್ ಕಾರ್ಯಕರ್ತರು ಕೊಲೆ ಮಾಡಿದ್ದಾರೆ ಸ್ಥಳೀಯ ಶಾಸಕನ ಹಿಂಬಾಲಕರು ಈ ಕೊಲೆ ಮಾಡಿದ್ದಾರೆ ಅನ್ನೋ ಆರೋಪ ಇದ್ದು, ಸರ್ಕಾರ ನ್ಯಾಯ ಕೊಡಿಸಬೇಕು” ಎಂದು ಹೇಳಿದ್ದಾರೆ.

    ಇದನ್ನೂ ಓದಿ: “ಜನಾರ್ದನ ರೆಡ್ಡಿ ಚಿಕ್ಕಂದಿನಿಂದಲೂ ಹಂಗೆ” ಎಂದು ವಾಗ್ದಾಳಿ ಮಾಡಿದ ಸೋಮಶೇಖರ ರೆಡ್ಡಿ!

    ಇದೇ ವೇಳೆ, ಕುಡಿಯುವ ನೀರಿನ ಕುರಿತಂತೆ ಧನ್ಯವಾದ ತಿಳಿಸಿದ ಜನಾರ್ದನ ರೆಡ್ಡಿ, “ನವಲಿ ಜಲಾಶಯ ರಾಯಚೂರು ಕೊಪ್ಪಳ ಸೇರಿದಂತೆ ನಾಲ್ಲು ಜಿಲ್ಲೆಗಳಿಗೆ ಕುಡಿಯುವ ನೀರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ. ಈ ಕೆಲಸಕ್ಕಾಗಿ ನಾನು ಮುಖ್ಯಮಂತ್ರಿಗಳಿಗೆ ಧನ್ಯವಾದ ಹೇಳುತ್ತಿದ್ದೇನೆ” ಎಂದು ಜನಾರ್ದನ ರೆಡ್ಡಿ ಹೇಳಿದ್ದಾರೆ.

    ಏನಿದು ಪ್ರಕರಣ?

    ಮೊನ್ನೆ (ಜು.18) ರಾತ್ರಿ ಬಳ್ಳಾರಿಯ ಗುಗ್ಗರಹಟ್ಟಿಯಲ್ಲಿ ಮೆಹಬೂಬ್ ಬಾಷಾ ಹತ್ಯೆ ಪ್ರಕರಣ ನಡೆದದ್ದಕ್ಕೆ ರಾಜಕೀಯ ವೈಶಮ್ಯವೇ ಕಾರಣ ಎನ್ನಲಾಗಿದೆ. ಮೃತರು, ಜನಾರ್ದನ ರೆಡ್ಡಿ ಸ್ಥಾಪಿತ KRP ಪಕ್ಷದ ಕಾರ್ಯಕರ್ತರಾಗಿ ದುಡಿದಿದ್ದರು. ಕೊಲೆಯ ಆರೋಪವನ್ನು ಕೋಳಿ ಅನ್ವರ್ ಹಾಗೂ ಅವರ ಸಹಚರರಾದ ಅಲ್ತಾಫ್, ಸಿರಾಜ್ ಎನ್ನುವ ಮೂವರ ಮೇಲೆ ಮೆಹಬೂಬ್ ಬಾಷಾ ಕುಟುಂಬಸ್ಥರು ಹೊರಿಸಿದ್ದಾರೆ.

    ಕಾಂಗ್ರೆಸ್ಸಿಗರು ನಮ್ಮ ನಿಷ್ಠಾವಂತ ಕಾರ್ಯಕರ್ತನನ್ನು ಕೊಲೆ ಮಾಡಿದ್ದಾರೆ: ಜನಾರ್ದನ ರೆಡ್ಡಿ ಆರೋಪ!
    ಆರೋಪಿ, ಕೋಳಿ ಅನ್ವರ್

    ಈ ಹಿಂದೆ ಮೆಹಬೂಬ್ ಬಾಷಾ ಕಾಂಗ್ರೆಸ್​ನಲ್ಲಿ ಇದ್ದರು. ಆದರೆ ಕಳೆದ ಚುನಾವಣೆಯಲ್ಲಿ ಜನಾರ್ದನ ರೆಡ್ಡಿ ನಾಯಕತ್ವದ KRP ಪಕ್ಷಕ್ಕೆ ಸೇರ್ಪಡೆಯಾಗಿದ್ದರು. ಬಾಷಾ, ಚುನಾವಣೆಯಲ್ಲಿ ರೆಡ್ಡಿ ಪತ್ನಿ ಅರುಣಾ ಲಕ್ಷ್ಮಿ ಪರ ಮತಯಾಚನೆ ಮಾಡಿದ್ದರು. ಈ ಕಾರಣಕ್ಕೆ, ಕೋಳಿ ಅನ್ವರ್ ಹಾಗೂ ಕೆಲ ಕಾಂಗ್ರೆಸ್ ನಾಯಕರಿಗೆ ಅಸಮಾಧಾನ ಇತ್ತು‌.

    ಕಾಂಗ್ರೆಸ್ಸಿಗರು ನಮ್ಮ ನಿಷ್ಠಾವಂತ ಕಾರ್ಯಕರ್ತನನ್ನು ಕೊಲೆ ಮಾಡಿದ್ದಾರೆ: ಜನಾರ್ದನ ರೆಡ್ಡಿ ಆರೋಪ!
    ಆರೋಪಿ ಅಲ್ತಾಫ್

    ಅದಲ್ಲದೇ, ರಿಯಲ್ ಎಸ್ಟೇಟ್ ಉದ್ಯಮದಲ್ಲೂ ಕೋಳಿ ಅನ್ವರ್, ಮೆಹಬೂಬ್ ಬಾಷಾ ಮೇಲೆ ಅಸಮಾಧಾನ ಹೊಂದಿದ್ದ ಕಾರಣ ಹತ್ಯೆ ಮಾಡಿದ್ದಾರೆ ಎನ್ನಲಾಗಿದೆ. ಸದ್ಯ ಈ ಮೂವರನ್ನು ಬಳ್ಳಾರಿ ಗ್ರಾಮೀಣ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts