More

    ಈ ಓಟಿಟಿ ಪ್ಲಾಟ್​ಫಾರ್ಮ್​ ಬಳಕೆದಾರರಿಗೆ ಶಾಕ್! ಭಾರತದಲ್ಲಿ ಇನ್ನು ಪಾಸ್​ವರ್ಡ್ ಶೇರಿಂಗ್ ಮಾಡುವುದೇ ಅಸಾಧ್ಯ…

    ನವದೆಹಲಿ: ಸ್ಟ್ರೀಮಿಂಗ್‌ ದೈತ್ಯ ನೆಟ್‌ಪ್ಲಿಕ್ಸ್ ಭಾರತದಲ್ಲಿ ಇನ್ನುಮುಂದೆ ಪಾಸ್‌ವರ್ಡ್‌ಗಳನ್ನು ಹಂಚಿಕೊಳ್ಳಲು ಅನುಮತಿಸುವುವುದಿಲ್ಲ ಎಂದು ಘೋಷಿಸಿದೆ. ಪ್ರತಿ ಖಾತೆಯನ್ನು ಒಂದು ಮನೆಯವರು ಮಾತ್ರ ಬಳಸಬೇಕು ಎಂದು ಕಂಪನಿ ಹೇಳಿದೆ.

    ಇಂದಿನಿಂದ, ಭಾರತದಲ್ಲಿ ತಮ್ಮ ಮನೆಯ ಹೊರಗೆ ನೆಟ್‌ಪ್ಲಿಕ್ಸ್ ಅನ್ನು ಹಂಚಿಕೊಳ್ಳುತ್ತಿರುವ ಸದಸ್ಯರಿಗೆ Netflix ಈ ಇಮೇಲ್ ಅನ್ನು ಕಳುಹಿಸುತ್ತದೆ.

    ಈ ಓಟಿಟಿ ಪ್ಲಾಟ್​ಫಾರ್ಮ್​ ಬಳಕೆದಾರರಿಗೆ ಶಾಕ್! ಭಾರತದಲ್ಲಿ ಇನ್ನು ಪಾಸ್​ವರ್ಡ್ ಶೇರಿಂಗ್ ಮಾಡುವುದೇ ಅಸಾಧ್ಯ…

    ಇದನ್ನೂ ಓದಿ: ಕಾನೂನಿಂದ ಬೇರ್ಪಟ್ಟ ಇವರು ನೆಟ್​ಫ್ಲಿಕ್ಸ್​ನಿಂದ ಒಂದಾಗಿದ್ದಾರೆ! ಫೋಟೋ ಜತೆಗೆ ಸಚಿವರ ಶೀರ್ಷಿಕೆಯೂ ವೈರಲ್…

    “ನೆಟ್‌ಪ್ಲಿಕ್ಸ್ ಖಾತೆಯು ಒಂದು ಮನೆಯ ಬಳಕೆಗಾಗಿ ಇರುವಂತಹದ್ದು. ಆ ಮನೆಯಲ್ಲಿ ವಾಸಿಸುವ ಸದಸ್ಯರು, ಎಲ್ಲೇ ಇದ್ದರೂ ಪ್ರೊಫೈಲ್ ವರ್ಗಾಯಿಸಿ ಮತ್ತು ಪ್ರವೇಶ ಮತ್ತು ಸಾಧನಗಳನ್ನು ನಿರ್ವಹಿಸುವಂತಹ ಹೊಸ ವೈಶಿಷ್ಟ್ಯಗಳ ಲಾಭವನ್ನು ಪಡೆದುಕೊಳ್ಳಬಹುದು.

    ನಮ್ಮ ಬಳಕೆದಾರರಿಗೆ ಅನೇಕ ಮನರಂಜನಾ ಆಯ್ಕೆಗಳಿವೆ ಎಂದು ನಾವು ತಿಳಿದಿದ್ದೇವೆ. ಅದಕ್ಕಾಗಿಯೇ ನಾವು ವಿವಿಧ ರೀತಿಯ ಹೊಸ ಚಲನಚಿತ್ರಗಳು ಮತ್ತು ಟಿವಿ ಶೋಗಳಲ್ಲಿ ಹೆಚ್ಚು ಹೂಡಿಕೆ ಮಾಡುತ್ತಿದ್ದೇವೆ. ನಿಮ್ಮ ಅಭಿರುಚಿ, ಮನಸ್ಥಿತಿ, ಭಾಷೆ ಏನೇ ಇದ್ದರೂ, ನೆಟ್‌ಪ್ಲಿಕ್ಸ್‌ನಲ್ಲಿ ನಿಮಗೆ ವೀಕ್ಷಿಸಲು ಯಾವಾಗಲೂ ಏನಾದರೂ ತೃಪ್ತಿಕರ ವಿಚಾರ ಇದ್ದೇ ಇರುತ್ತದೆ” ಎಂದು ನೆಟ್‌ಪ್ಲಿಕ್ಸ್ ಹೇಳಿಕೆಯಲ್ಲಿ ತಿಳಿಸಿದೆ.

    ಈ ಓಟಿಟಿ ಪ್ಲಾಟ್​ಫಾರ್ಮ್​ ಬಳಕೆದಾರರಿಗೆ ಶಾಕ್! ಭಾರತದಲ್ಲಿ ಇನ್ನು ಪಾಸ್​ವರ್ಡ್ ಶೇರಿಂಗ್ ಮಾಡುವುದೇ ಅಸಾಧ್ಯ…

    ಇದನ್ನೂ ಓದಿ: ನೆಟ್​ಫ್ಲಿಕ್ಸ್​ಗೆ ಮತ್ತೊಮ್ಮೆ ಆಘಾತ: 2ನೇ ತ್ರೈಮಾಸಿಕದಲ್ಲಿ 9,70,000 ಸಬ್​ಸ್ಕ್ರೈಬರ್ಸ್ ಕಳೆದುಕೊಂಡ ಕಂಪನಿ

    ನೆಟ್​ಫ್ಲಿಕ್ಸ್​ ಭಾರತ ಸೇರಿದಂತೆ ಇಂಡೋನೇಷ್ಯಾ, ಪ್ರೊಯೇಷಿಯಾ ಮತ್ತು ಕೀನ್ಯಾದಂತಹ ಇತರ ದೇಶಗಳಲ್ಲಿ (ಜು.20) ಇಂದಿನಿಂದ ಪಾಸ್​ವರ್ಡ್​ ಹಂಚಿಕೆಯ ವಿರುದ್ಧ ಕ್ರಮ ತೆಗೆದುಕೊಳ್ಳಲು ಪ್ರಾರಂಭಿಸುತ್ತದೆ. (ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts