More

    ರೌಡಿಸಂ ಬಿಟ್ಟು ಟೊಮ್ಯಾಟೊ ಬೆಳೆಯಬಹುದಲ್ವಾ? ಪರೇಡ್​ ಗ್ರೌಂಡ್​ನಲ್ಲಿ ಎಎಸ್​ಪಿ ಸಲಹೆ!

    ಮಂಡ್ಯ: ಮಂಡ್ಯದಲ್ಲಿ ಇಂದು ಪೊಲೀಸರು ಅಪರಾಧ ಪ್ರಕರಣ ನಿಯಂತ್ರಿಸಲು ರೌಡಿಗಳ ಪರೇಡ್ ನಡೆಸಿದ್ದು ಈ ಸಂದರ್ಭ ಕಿಡಿಗೇಡಿಗಳ ಚಳಿ ಬಿಡಿಸಿದ್ದಾರೆ. ಈ ಸಂದರ್ಭ ಟೊಮ್ಯಾಟೊ ರೌಡಿಸಂ ಬಿಟ್ಟು ಟೊಮ್ಯಾಟೊ ಬೆಳೆಯಿರಿ ಎಂದು ಎಎಸ್​ಪಿ ಸಲಹೆ ನೀಡಿದ್ದಾರೆ.

    ಎಎಸ್​ಪಿ ಸಿ.ಈ.ತಿಮ್ಮಯ್ಯ ನೇತೃತ್ವದಲ್ಲಿ ಪರೇಡ್ ನಡೆದಿದೆ. ಪರೇಡ್​ನಲ್ಲಿ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗದಂತೆ ರೌಡಿಶೀಟರ್ ಗಳಿಗೆ ತಾಕೀತು ಮಾಡಲಾಗಿದ್ದು, ಅಪರಾಧ ಪ್ರಕರಣದಲ್ಲಿ ಮತ್ತೆ ಭಾಗಿಯಾದ್ರೆ ಗಡಿಪಾರು ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.

    ಇದನ್ನೂ ಓದಿ: ಮಾಯಮುಡಿಯಲ್ಲಿ ಗಾಂಜಾ ಬೆಳೆದಿದ್ದವನ ಬಂಧನ

    ರೌಡಿ‌ಶೀಟರ್ ಗೆ ಟಮೋಟಾ ಬೆಳೆಯಬೇಕಲ್ವ ಎಂದು ಎಎಸ್ಪಿ ಸಲಹೆ

    ರೌಡಿಶೀಟರ್​ಗಳ ಅವತಾರ ಕಂಡು ಎಎಸ್​ಪಿ ಸಿ.ಈ. ತಿಮ್ಮಯ್ಯ ಶಾಕ್ ಆಗಿದ್ದು “ನಂಗೆ ಇವರೆಲ್ಲ ರೌಡಿ ಅಂತಾ ಮಾತನಾಡಿಸೋಕೆ ಬೇಜಾರ್ ಆಗುತ್ತೆ. ಇಲ್ಲಿ ನೋಡೋಕೆ ಹೀಗಿದ್ದಾರೆ ಸರ್. ಊರಲ್ಲಿ ಹುಲಿ ಆಗಿ ಬಿಡ್ತಾರೆ” ಎಂದು ಇನ್ಸ್ಪೆಕ್ಟರ್ ಹೇಳಿದ್ದಾರೆ.

    ಇದನ್ನೂ ಓದಿ: ಕುಂಟುತ್ತಾ ಸಾಗುತ್ತಿದೆ ಮುಡಿಪು-ಮೂಳೂರು ರಸ್ತೆ ಕಾಮಗಾರಿ

    ಈ ಸಂದರ್ಭ ಎಎಸ್​ಪಿ, ಓರ್ವ ರೌಡಿಶೀಟರ್​ ಬಳಿಯಲ್ಲಿ, “ಏನ್ ಕೆಲಸ ಮಾಡ್ತಿಯಾ?” ಎಂದು ಕೇಳಿದ್ದು, ವ್ಯವಸಾಯ‌ ಎಂದು ಉತ್ತರ ಬಂದಿದೆ. ಈ ಸಂದರ್ಭ ಎಎಸ್​ಪಿ, “ಎಷ್ಟು ಎಕರೆ ಜಮೀನಿದೆ, ಏನ್ ಬೆಳೆದಿದ್ದೀಯಾ” ಎಂದು ವ್ಯವಸಾಯದ ಬಗ್ಗೆ ಪ್ರಶ್ನಿಸಿದ್ದಾರೆ. ಅದಕ್ಕೆ ರೌಡಿಶೀಟರ್, ರಾಗಿ ಬೆಳೆದಿರುವುದಾಗಿ ಹೇಳಿದ್ದು, ಎಎಸ್​ಪಿ ಈ ಸಂದರ್ಭ “ಟಮೋಟಾ ಬೆಳೆದಿದ್ದರೇ ಆರಾಮಾಗಿರ್ತಿದ್ದೆ ಅಲ್ವಾ? ಎಂದು ಎಎಸ್ಪಿ ಪ್ರಶ್ನಿಸಿದ್ದಾರೆ. ಎಎಸ್ಪಿ ಸಲಹೆಗೆ ಬೇಸಿಗೆಯಲ್ಲಿ ಟೊಮ್ಯಾಟೊ ಬೆಳೆ ನಿಲ್ಲಲ್ಲ ಸರ್ ಎಂದು ರೌಡಿಶೀಟರ್ ಹೇಳಿದ್ದಾನೆ.

    ಇದನ್ನೂ ಓದಿ: ಶುಶ್ರೂಷಕರ ಸೇವೆ ಬಡಜನರಿಗೆ ಮುಡಿಪಾಗಿರಲಿ

    ವಾರದ ಹಿಂದೆ ಕೂದಲು ಕಟ್ ಮಾಡಿಸಿ ದೇವರಿಗೆ ಮುಡಿಕೊಟ್ಟ ಮೇಲೆ ಎಲ್ಲ ಬಿಟ್ಟಿದೀನಿ ಎಂದ ರೌಡಿಶೀಟರ್!

    ಈ ಸಂದರ್ಭ ಮತ್ತೋರ್ವ ರೌಡಿ ಶೀಟರ್, “ದೇವರಿಗೆ ಮುಡಿ ಕೊಟ್ಟಾಗಿನಿಂದ ಎಲ್ಲ ಕೆಲಸ ಬಿಟ್ಬಿಟ್ಟಿದ್ದೀನಿ” ಎಂದಿದ್ದು ದೇವರಿಗೆ ಮುಡಿ ಕೊಟ್ಟಿದ್ದೀನಿ. ಅಂದಿನಿಂದ ಯಾವುದೇ ಜಗಳಕ್ಕೆ ಹೋಗ್ತಿಲ್ಲ ಸಾರ್” ಎಂದು ರೌಡಿಶೀಟರ್. ಅದಕ್ಕೆ ಉತ್ತರಿಸಿದ ಎಎಸ್​ಪಿ, “ಒಂದು ವಾರದ ಹಿಂದೆ ಮುಡಿ ಕೊಟ್ಟಿದ್ಯಾ. ಅದಕ್ಕು ಮೊದಲು ಎಲ್ಲ ಮಾಡ್ತಿದ್ದೆ ಅಲ್ವ, ಎಲ್ಲ ನಿಲ್ಲಿಸಬೇಕು” ಎಂದು ವಾರ್ನಿಂಗ್ ನೀಡಿದ್ದಾರೆ.

    ಇದನ್ನೂ ಓದಿ: ಗದ್ದೆಯಂತಾದ ಮುಡಿಪು-ಇರಾ ರಸ್ತೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts