More

    ನೆಟ್​ಫ್ಲಿಕ್ಸ್​ಗೆ ಮತ್ತೊಮ್ಮೆ ಆಘಾತ: 2ನೇ ತ್ರೈಮಾಸಿಕದಲ್ಲಿ 9,70,000 ಸಬ್​ಸ್ಕ್ರೈಬರ್ಸ್ ಕಳೆದುಕೊಂಡ ಕಂಪನಿ

    ಸ್ಯಾನ್​ ಫ್ರಾನ್ಸಿಸ್ಕೋ: ಅಮೆರಿಕದ ಸ್ಯಾನ್​ ಫ್ರಾನ್ಸಿಸ್ಕೋ ನಗರದಲ್ಲಿರುವ ಚಂದಾದಾರ ಆಧಾರಿತ ಸ್ಟ್ರೀಮಿಂಗ್​ ಸರ್ವೀಸ್​ ಮತ್ತು ಪ್ರೊಡಕ್ಷನ್​ ಕಂಪನಿ ನೆಟ್​ಫ್ಲಿಕ್ಸ್​ ಎರಡನೇ ತ್ರೈಮಾಸಿಕದಲ್ಲಿ 9,70,000 ಸಬ್​ಸ್ಕ್ರೈಬರ್ಸ್ ಕಳೆದುಕೊಳ್ಳುವ ಮೂಲಕ ಭಾರೀ ಹಿನ್ನಡೆಯನ್ನು ಅನುಭವಿಸಿದೆ. ಮೊದಲ ತ್ರೈಮಾಸಿಕದಲ್ಲಿ 2 ಲಕ್ಷ ಸಬ್​ಸ್ಕ್ರೈಬರ್ಸ್ ಕಳೆದುಕೊಂಡಿದ್ದ ನೆಟ್​ಫ್ಲಿಕ್ಸ್​ಗೆ ಎರಡನೇ ತ್ರೈಮಾಸಿಕದ ಅಂಕಿ-ಅಂಶ ಮತ್ತೆ ಆಘಾತವನ್ನು ಉಂಟುಮಾಡಿದೆ.

    ಮೂಂಚೂಣಿಯಲ್ಲಿರುವ ಸ್ಟ್ರೀಮಿಂಗ್​ ಟೆಲಿವಿಷನ್​ ಸರ್ವೀಸ್​ ಕಂಪನಿ ದಶಕದಲ್ಲೇ ಎರಡನೇ ಬಾರಿಗೆ ಭಾರೀ ಪ್ರಮಾಣದ ಚಂದಾದಾರರನ್ನು ಕಳೆದುಕೊಂಡಿದೆ. ತೀವ್ರ ಸ್ಪರ್ಧೆ ಮತ್ತು ಕುಸಿಯುತ್ತಿರುವ ಬೇಡಿಕೆಯು ಕಂಪನಿಯನ್ನು ಕಂಗಾಲಾಗಿಸಿದೆ. ಸದ್ಯ 221 ಮಿಲಿಯನ್​ ಸಬ್​​ಸ್ಕ್ರೈಬರ್ಸ್​ಗಳನ್ನು ಕಂಪನಿ ಹೊಂದಿದೆ.

    ಸದ್ಯ ನಮ್ಮ ಮುಂದಿರುವ ಸವಾಲು ಮತ್ತು ಅವಕಾಶಗಳೆಂದರೆ, ನಮ್ಮ ಆದಾಯ ಮತ್ತು ಚಂದಾದಾರರ ಬೆಳವಣಿಗೆಗೆ ವೇಗ ನೀಡುವುದು ಹಾಗೂ ನಮ್ಮ ದೊಡ್ಡ ಪ್ರೇಕ್ಷಕ ಸಮುದಾಯದಿಂದ ಉತ್ತಮವಾಗಿ ಹಣಗಳಿಸುವುದು ಎಂದು ಸಂಸ್ಥೆಯು ತನ್ನ ಗಳಿಕೆಯ ವರದಿಯಲ್ಲಿ ತಿಳಿಸಿದೆ.

    ನೆಟ್‌ಫ್ಲಿಕ್ಸ್‌ನ ಚಂದಾದಾರರ ನಷ್ಟವನ್ನು ಮೊದಲೇ ನಿರೀಕ್ಷಿಸಲಾಗಿತ್ತು. ಆದರೆ, ಗ್ರಾಹಕರಿಂದ ಸಬ್​​ಸ್ಕ್ರೈಬ್​ ಆದಾಯವನ್ನೇ ಸಂಪೂರ್ಣವಾಗಿ ಅವಲಂಬಿಸಿರುವ ಕಂಪನಿಗೆ ಇದು ನಿಜವಾಗಿಯೂ ನೋವಿನ ಅಂಶವೇ ಎಂದು ವಿಶ್ಲೇಷಕ ರಾಸ್ ಬೆನೆಸ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ಯೂಕ್ರೇನ್​ ಮೇಲೆ ರಷ್ಯಾ ಯುದ್ಧ ಸಾರಿದ್ದು, ರಷ್ಯಾದಲ್ಲಿ ತನ್ನ ಸೇವೆ ಸ್ಥಗಿತಗೊಂಡಿರುವ ಪರಿಣಾಮವನ್ನು ಈ ಕಂಪನಿ ಎದುರಿಸಿರುವುದಾಗಿ ತಿಳಿಸಿದೆ. ಕರೊನಾ ಮಹಾಮಾರಿ ಜಗತ್ತನ್ನು ಕಾಡಿದರೆ, ನೆಟ್​ಫ್ಲಿಕ್ಸ್​ ಅದು ವರವಾಗಿ ಪರಿಣಮಿಸಿತ್ತು. 2020ರಲ್ಲಿ ನೆಟ್​ಫ್ಲಿಕ್ಸ್​ ಬೆಳವಣಿಗೆ ಉತ್ತಮವಾಗಿತ್ತು. 2021ರಲ್ಲಿ ಬೆಳವಣಿಗೆ ನಿಧಾನವಾದರೂ ಕುಸಿತ ಕಂಡಿರಲಿಲ್ಲ. ಆದರೆ, ಮೊದಲ ತ್ರೈಮಾಸಿಕದಲ್ಲಿ ಕೇವಲ 100 ದಿನಗಳಲ್ಲಿ 2 ಲಕ್ಷ ಚಂದಾದಾರರನ್ನು ನೆಟ್​ಫ್ಲಿಕ್ಸ್​ ಕಳೆದುಕೊಂಡಿತು. ಇದೀಗ ಎರಡನೇ ತ್ರೈಮಾಸಿಕದಲ್ಲಿ ಹತ್ತತ್ತಿರ 10 ಲಕ್ಷ ಚಂದಾದಾರರನ್ನು ಕಳೆದುಕೊಂಡಿದೆ. (ಏಜೆನ್ಸೀಸ್​)

    ಪರೀಕ್ಷೆ ಬರೆಯಲು ಒಳಉಡುಪು ಬಿಚ್ಚಿಸಿದ ಪ್ರಕರಣ: ಇಡೀ ಘಟನೆಯನ್ನು ಮಾಧ್ಯಮ ಮುಂದೆ ಬಿಚ್ಚಿಟ್ಟ ವಿದ್ಯಾರ್ಥಿನಿ

    ಹುಟ್ಟುಹಬ್ಬದ ತಂಗಳು ಬಿರಿಯಾನಿ ತಿಂದು 25 ಮಂದಿ ಅಸ್ವಸ್ಥ: ಕೊಳ್ಳೇಗಾಲದ ಸರ್ಕಾರಿ ಆಸ್ಪತ್ರೆಗೆ ದಾಖಲು

    ಘಾಟಿ ರಸ್ತೆಗಳ ದುರಸ್ತಿಗೆ 200 ಕೋಟಿ ರೂ.; ಸಚಿವರ ನೇತೃತ್ವದಲ್ಲಿ ಸಭೆ, ಕಟ್ಟುನಿಟ್ಟಿನ ಕ್ರಮಕ್ಕೆ ನಿರ್ಧಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts