More

    ಕಂದಾಯ ಇಲಾಖೆ ಮರು ಸರ್ವೇ: ಅಧಿಕಾರಿಗಳು, ಗ್ರಾಮಸ್ಥರ ನಡುವೆ ಮಾತಿನ ಚಕಮಕಿ

    ಕೋಟ: ಇಲ್ಲಿನ ಸಾಲಿಗ್ರಾಮ ಪಪಂ ವ್ಯಾಪ್ತಿಯ ಕಾರ್ಕಡದ ಕಾವಡಿ ಸೇತುವೆ ಬಳಿ ಅವೈಜ್ಞಾನಿಕ ಮರಳುಗಾರಿಕೆ ಆರೋಪಿಸಿ ಪ್ರತಿಭಟನೆ ನಡೆದ ಹಿನ್ನೆೆಲೆಯಲ್ಲಿ ಬುಧವಾರ ಬ್ರಹ್ಮಾವರದ ತಹಸೀಲ್ದಾರ್ ಶ್ರೀಕಾಂತ್ ಎಸ್.ಹೆಗ್ಡೆ ನೇತೃತ್ವದಲ್ಲಿ, ಗ್ರಾಮಸ್ಥರ ಉಪಸ್ಥಿತಿಯಲ್ಲಿ ಕಂದಾಯ ಇಲಾಖೆ ಮರು ಸರ್ವೇ ನಡೆಸಿತು.

    ಅಧಿಕಾರಿಗಳು, ಗ್ರಾಮಸ್ಥರ ನಡುವೆ ಮಾತಿನ ಚಕಮಕಿ

    ಗ್ರಾಮಸ್ಥರು ಮತ್ತು ಸ್ಥಳದಲ್ಲಿದ್ದ ಗಣಿ ಇಲಾಖೆ ಅಧಿಕಾರಿಗಳ ನಡುವೆ ಮಾತಿನ ಚಕಮಕಿ ಏರ್ಪಟ್ಟಿತು. ಸಾಮಾಜಿಕ ಕಾರ್ಯಕರ್ತ ದಿನೇಶ್ ಗಾಣಿಗ, ಅಧಿಕಾರಿಗಳನ್ನು ಪ್ರಶ್ನಿಸಿ, ಸರ್ಕಾರಿ ಜಾಗದಲ್ಲಿ ಅವೈಜ್ಞಾನಿಕ ಮರಳುಗಾರಿಕೆ ನಡೆಸಲು ಅನುಮತಿ ಏಕೆ ನೀಡಿದ್ದೀರಿ?. ಇಲ್ಲಿನ ಗ್ರಾಮಸ್ಥರ ಹಾಗೂ ಕೃಷಿಕರ ಮನವಿಗೆ ಸ್ಪಂದಿಸದೆ ಕರ್ತವ್ಯಲೋಪ ಎಸಗಿದ್ದೀರಿ. ಸರ್ಕಾರಿ ಸ್ಥಳದಲ್ಲಿ ಅಕ್ರಮವಾಗಿ ಶೇಡ್, ವೇ ಬ್ರಿಜ್, ರಸ್ತೆ ನಿರ್ಮಿಸಿದ್ದು ಜತೆಗೆ ದಬ್ಬಾಳಿಕೆಯ ಮೂಲಕ ಮರಳುಗಾರಿಕೆ ನಡೆಸಿದ್ದಾರೆ. ಇಲಾಖೆ ನೇರ ಲೋಪವೆಸಗಿದೆ ಎಂದು ಆರೋಪಿಸಿದರು.

    ಗಡಿ ಗುರುತು

    ಗ್ರಾಮಸ್ಥರು ನ್ಯಾಯಯುತ ಸರ್ವೇ ನಡೆಸಲು ಮನವಿ ನೀಡಿದ ಮರು ದಿನವೇ ಸ್ಥಳಕ್ಕೆ ತಹಸೀಲ್ದಾರ್, ಗಣಿ ಇಲಾಖೆ, ಕಂದಾಯ ಇಲಾಖಾಧಿಕಾರಿಗಳ ಸಮ್ಮುಖದಲ್ಲಿ ಸರ್ವೇ ಕಾರ್ಯ ನಡೆಸಿತು. ಈ ವೇಳೆ ಸುಮಾರು ಎರಡು ಎಕರೆ ಸರ್ಕಾರಿ ಭೂಮಿಯಲ್ಲಿ ಅವೈಜ್ಞಾನಿಕ ಮರಳುಗಾರಿಕೆ ನಡೆಸಿದ್ದು ಕಂಡು ಬಂತು. ಅಲ್ಲದೆ ಸರ್ಕಾರಿ ಸ್ಥಳವನ್ನು ಗುರುತು ಹಚ್ಚಿತು. ಹೊಳೆಯಲ್ಲಿ ಮರಳುಗಾರಿಕೆ ನಡೆಸುವ ಸ್ಥಳ ಪರಿಶೀಲಿಸಿದ ತಹಸೀಲ್ದಾರ್ ಈ ಬಗ್ಗೆ ಗ್ರಾಮಸ್ಥರಿಗೆ ಲಿಖಿತ ಮನವಿ ನೀಡಲು ನಿರ್ದೇಶನ ನೀಡಿದರಲ್ಲದೆ ಜಿಲ್ಲಾಧಿಕಾರಿಗಳಿಗೆ ಈ ಬಗ್ಗೆ ಪತ್ರ ಬರೆಯಲಾಗುವುದು ಎಂದರು.

    ಕಂದಾಯ ಇಲಾಖೆ ಮರು ಸರ್ವೇ: ಅಧಿಕಾರಿಗಳು, ಗ್ರಾಮಸ್ಥರ ನಡುವೆ ಮಾತಿನ ಚಕಮಕಿ

    ದೋಣಿಗಳನ್ನು ಸೀಜ್ ಮಾಡಿ ಕೂಗು

    ತಹಸೀಲ್ದಾರ್ ಬುಧವಾರ ಭೇಟಿ ಮಾಡಿ ಪರಿಶೀಲಿಸುವ ಸಂದರ್ಭ, ಹೊಳೆಯಲ್ಲಿ ನಡೆಸುತ್ತಿದ್ದ ದೋಣಿಗಳನ್ನು ಸೀಜ್ ಮಾಡಲು ಗ್ರಾಮಸ್ಥರು ಆಗ್ರಹಿಸಿ ಸೂಕ್ತ ಕ್ರಮಕೈಗೊಳ್ಳುವಂತೆ ಮನವಿ ಮಾಡಿದರು. ಈ ಸಂದರ್ಭ ವಿವಿಧ ಇಲಾಖಾಧಿಕಾರಿಗಳು, ಗ್ರಾಮಸ್ಥರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts