More

    1,122 ಮೃತದೇಹಗಳನ್ನು ಮಾರಾಟ ಮಾಡಿ 3.66 ಕೋಟಿ ರೂ. ಸಂಪಾದಿಸಿದ ಕೇರಳ ಸರ್ಕಾರ!

    ತಿರುವನಂತಪುರಂ: ಮೃತದೇಹಗಳನ್ನು ಮಾರಿ ಹಣ ಸಂಪಾದನೆ ಮಾಡಬಹುದು ಅಂದರೆ ನೀವು ನಂಬುತ್ತೀರಾ? ಖಂಡಿತವಾಗಿ ಯಾರೂ ನಂಬುವುದಿಲ್ಲ. ಸತ್ತ ಮೇಲೆ ಅದರ ಅಂತ್ಯಕ್ರಿಯೆಗೆ ಹಣಕಾಸು ಬೇಕು, ಅಂಥದ್ದರಲ್ಲಿ ಹಣ ಸಂಪಾದನೆ ಹೇಗೆ ಸಾಧ್ಯ ಅನ್ನೋ ಪ್ರಶ್ನೆ ಮೂಡುತ್ತದೆ. ಆದರೆ, ಈ ಸ್ಟೋರಿ ಓದಿದ ನಂತರ ಮೃತದೇಹದಿಂದಲೂ ಹಣ ಸಂಪಾದಿಸಬಹುದು ಅನ್ನೋದು ಗೊತ್ತಾಗುತ್ತದೆ.

    ಹೌದು, ಕೇರಳ ಸರ್ಕಾರ ಮೃತದೇಹವನ್ನು ಮಾರಾಟ ಮಾಡಿ 3.66 ಕೋಟಿ ರೂ. ಸಂಪಾದನೆ ಮಾಡಿದೆ. ಸರ್ಕಾರಿ ಆಸ್ಪತ್ರೆಗಳ ಶವಗಾರದಲ್ಲಿರುವ ವಾರಸುದಾರರಿಲ್ಲದ ಮೃತದೇಹಗಳನ್ನು 2008ರಿಂದಲೂ ಕೇರಳ ಸರ್ಕಾರ ಮಾರಾಟ ಮಾಡುತ್ತಾ ಬರುತ್ತಿದೆ.

    ಶೈಕ್ಷಣಿಕ ಉದ್ದೇಶಗಳಿಗಾಗಿ ವಾರಸುದಾರರಿಲ್ಲದ ಮೃತ ದೇಹಗಳನ್ನು ಸ್ವಾಧೀನಪಡಿಸಿಕೊಳ್ಳಲು ಖಾಸಗಿ ವೈದ್ಯಕೀಯ ಕಾಲೇಜುಗಳಿಗೆ ವಿಶೇಷ ನಿಬಂಧನೆಯನ್ನು ಕೇರಳ ಸರ್ಕಾರ ಪರಿಚಯಿಸಿದೆ. ಇದುವರೆಗೂ ಒಟ್ಟು 1,122 ಮೃತ ದೇಹಗಳನ್ನು ಖಾಸಗಿ ವೈದ್ಯಕೀಯ ಕಾಲೇಜುಗಳಿಗೆ ಮಾರಾಟ ಮಾಡಿದೆ.

    ಕಳೆದ 11 ವರ್ಷಗಳಲ್ಲಿ ಎರ್ನಾಕುಲಂನಲ್ಲಿರುವ ಸರ್ಕಾರಿ ಮೆಡಿಕಲ್​ ಕಾಲೇಜು ಆಸ್ಪತ್ರೆಯಲ್ಲಿ 599 ಮೃತದೇಹಗಳನ್ನು ಮಾರಾಟ ಮಾಡಲಾಗಿದೆ. ಮೃತದೇಹಗಳನ್ನು ತಲಾ 40 ಸಾವಿರ ರೂ.ಗೆ ಮಾರಾಟ ಮಾಡಲಾಗುತ್ತದೆ. ಸಂಸ್ಕರಿಸದ ಮೃತದೇಹಗಳನ್ನು ತಲಾ 20 ಸಾವಿರ ರೂ.ಗೆ ಮಾರಾಟ ಮಾಡಲಾಗುತ್ತಿದ್ದು, ಇಲ್ಲಿಯವರೆಗೂ ಕೇರಳ ಸರ್ಕಾರ 3.66 ಕೋಟಿ ರೂ. ಆದಾಯ ಗಳಿಸಿದೆ ಎಂದು ತಿಳಿದುಬಂದಿದೆ. (ಏಜೆನ್ಸೀಸ್​)

    ನಾಯಿ ರೀತಿ ಇರುತ್ತೇನೆಂದರು, ರೂಮಿಗೆ ಕರೆದರು… ಹಲವು ವರ್ಷಗಳ ಬಳಿಕ ನಟಿ ಲಕ್ಷ್ಮೀ ರಹಸ್ಯ ಬಯಲು

    ಈ ಫೋಟೋದಲ್ಲಿರುವ ಪುಟ್ಟ ಬಾಲಕಿ ಇಂದು ಸ್ಯಾಂಡಲ್​ವುಡ್​ನ ಸ್ಟಾರ್​ ನಟಿ! ಯಾರೆಂದು ಪತ್ತೆ ಹಚ್ಚುವಿರಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts