More

    ಯುದ್ಧ ಟ್ಯಾಂಕ್‌ನ ಎಂಜಿನ್ ಪರೀಕ್ಷಾರ್ಥ ಪ್ರಯೋಗ ಯಶಸ್ವಿ

    ಮೈಸೂರು: ನಗರದ ಬೆಮೆಲ್ ಸಂಸ್ಥೆಯ ಆವರಣದಲ್ಲಿ ಬುಧವಾರ 1500 ಅಶ್ವಶಕ್ತಿ ಸಾಮರ್ಥ್ಯದ ಮುಖ್ಯ ಯುದ್ಧ ಟ್ಯಾಂಕ್‌ನ ಎಂಜಿನ್ ಅನ್ನು ಪರೀಕ್ಷಾರ್ಥ ಪ್ರಯೋಗಕ್ಕೆ ಒಳಪಡಿಸಲಾಯಿತು.

    ಪರೀಕ್ಷಾರ್ಥ ಪ್ರಯೋಗಕ್ಕೂ ಮೊದಲು ಇಂಜಿನ್ ಅನ್ನು ಹಲವು ಹಂತದಲ್ಲಿ ಕಠಿಣ ಪರೀಕ್ಷೆಗೆ ಒಳಪಡಿಸಲಾಗಿದೆ. ಇಂಜಿನ್ ತಯಾರಿ ಯೋಜನೆಯು ಆಗಸ್ಟ್ 2020ರಲ್ಲಿ ಪ್ರಾರಂಭವಾಯಿತು. ಈ ವರ್ಷದ ಮಧ್ಯದಲ್ಲಿ ಅಂತಿಮಗೊಳ್ಳಲಿದೆ. ಇದನ್ನು ಸ್ಥಳೀಯ ಸಂಪನ್ಮೂಲಗಳನ್ನೇ ಬಳಕೆ ಮಾಡಿಕೊಂಡು ತಯಾರು ಮಾಡಲಾಗಿದೆ.

    ರಕ್ಷಣಾ ಕಾರ್ಯದರ್ಶಿ ಗಿರಿಧರ್ ಅರ‌್ಮನೆ ಮಾತನಾಡಿ, ಈ ಪರೀಕ್ಷಾರ್ಥ ಪ್ರಯೋಗವು ಯಶಸ್ವಿಯಾಗಿದ್ದು, ನವ ಮನ್ವಂತರದಲ್ಲಿ ರಕ್ಷಣಾ ಕ್ಷೇತ್ರದಲ್ಲಿ ಕಂಡು ಬರುವ ಅಡೆತಡೆಗಳನ್ನು ನಿವಾರಿಸಿಕೊಂಡು, ನಮ್ಮ ಸಾಮರ್ಥ್ಯವನ್ನು ತೋರಿಸುವುದಲ್ಲದೇ ರಕ್ಷಣಾ ತಂತ್ರಜ್ಞಾನದಲ್ಲಿ ದೇಶಕ್ಕೆ ಇರುವ ಸ್ವಯಂ ಶಕ್ತಿ ಹಾಗೂ ಬದ್ಧತೆಯನ್ನು ಇಂದು ನಡೆಸಿದ ಪ್ರಯೋಗವು ಕನ್ನಡಿಯಂತೆ ಪ್ರದರ್ಶಿಸಿದೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts