More

    ಎಲ್ಲ ಕ್ಷೇತ್ರಗಳಲ್ಲೂ ಮಹಿಳೆಯರ ಸಾಧನೆ ಅವಿಸ್ಮರಣೀಯ

    ಪಿರಿಯಾಪಟ್ಟಣ: ಕಾಲ ಬದಲಾದಂತೆ ಆಧುನಿಕ ಯುಗದಲ್ಲಿ ಮಹಿಳೆಯರಿಗೂ ಸಮಾನ ಹಕ್ಕು ಮತ್ತು ಅವಕಾಶ ಲಭಿಸುವಂತಾಗಿದೆ ಎಂದು ಹೆಚ್ಚುವರಿ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶೆ ಶ್ವೇತಾ ಅಭಿಪ್ರಾಯಪಟ್ಟರು.

    ವಕೀಲರ ಸಂಘ ಮತ್ತು ನ್ಯಾಯಾಂಗ ಇಲಾಖೆಯ ನೌಕರರ ಬಳಗ ವತಿಯಿಂದ ಪಟ್ಟಣದ ವಕೀಲರ ಭವನದಲ್ಲಿ ಇತ್ತೀಚಿಗೆ ಏರ್ಪಡಿಸಿದ್ದ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸ್ವಾತಂತ್ರ್ಯ ನಂತರ ಸಂವಿಧಾನದಲ್ಲಿ ಮಹಿಳೆಯರಿಗೆ ಮತದಾನ ಹಕ್ಕು ನೀಡಲಾಗಿದ್ದು, ಆ ಸಮಯದಲ್ಲಿ ಕೆಲವು ಮುಂದುವರಿದ ದೇಶಗಳಲ್ಲಿ ಮಹಿಳೆಯರಿಗೆ ಮತದಾನದ ಹಕ್ಕು ಲಭಿಸಿರಲಿಲ್ಲ. ಈಗ ಪುರುಷರಿಗೆ ಸರಿಸಮನಾಗಿ ಬಾಹ್ಯಾಕಾಶ, ಸೇನೆ, ಪೈಲೆಟ್ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ಮಹಿಳೆಯರು ತಮ್ಮ ಸಾಧನೆಯನ್ನು ತೋರಿಸುವ ಮೂಲಕ ಪುರುಷರಿಗೆ ಸರಿ ಸಮಾನವಾಗಿದ್ದಾರೆ ಎಂದು ಶ್ಲಾಘಿಸಿದರು.

    ಹಿರಿಯ ಸಿವಿಲ್ ನ್ಯಾಯಾಧೀಶ ಸಮೀವುಲ್ಲ ಮಾತನಾಡಿ, ತಾಯಿಯನ್ನು ಪೂಜಿಸುವ, ಗೌರವಿಸುವ ಮೂಲಕ ಮಹಿಳೆಯರಿಗೆ ಅತ್ಯಂತ ಗೌರವ ಸ್ಥಾನ ನೀಡಲಾಗಿದೆ. ಹೆಣ್ಣು ಮಕ್ಕಳು ಎಂದರೆ ಮೂಗು ಮುರಿಯುವ ಕಾಲ ಈಗ ಬದಲಾಗಿದ್ದು, ಹೆಣ್ಣೆಂದರೆ ಹೆಮ್ಮೆ ಎಂದು ಹೇಳಿಕೊಳ್ಳುವ ಕಾಲ ಬಂದಿದೆ ಎಂದರು.

    ಪ್ರಧಾನ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶ ಯೋಗೇಶ್ ಮಾತನಾಡಿ, ಮಹಿಳೆ ಎಂದರೆ ಮೊದಲು ನಮಗೆ ನೆನಪಿಗೆ ಬರುವುದು ತಾಯಿ. ಅವರಿಗೆ ನಾವು ಗೌರವ ಕೊಡುವುದನ್ನು ದೇವರ ಸೇವೆಯೆಂದು ಪರಿಗಣಿಸುತ್ತೇವೆ ಎಂದರು.

    ವಿವಿಧ ಆಟೋಟ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದ ಮಹಿಳಾ ವಕೀಲರು ಮತ್ತು ನ್ಯಾಯಾಂಗ ಇಲಾಖೆ ಮಹಿಳಾ ನೌಕರರಿಗೆ ಬಹುಮಾನ ವಿತರಿಸಲಾಯಿತು. ನ್ಯಾಯಾಧೀಶೆ ಶ್ವೇತಾ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಸಮಾರಂಭದಲ್ಲಿ ವಕೀಲರ ಸಂಘದ ಅಧ್ಯಕ್ಷ ಧನಪಾಲ್, ಕಾರ್ಯದರ್ಶಿ ಶಂಕರ್, ಉಪಾಧ್ಯಕ್ಷೆ ಬೇಬಿ ಮಂಜುಳಾ, ಖಜಾಂಚಿ ಹರೀಶ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts