ನರೇಂದ್ರ ಮೋದಿ ಮೂರನೇ ಬಾರಿ ಪ್ರಧಾನಿಯಾಗುವುದನ್ನು ತಪ್ಪಿಸಲಾಗದು: ಬಿ.ವೈ.ವಿಜಯೇಂದ್ರ

CTD 29 B.Y.VIJAYENDRA-01
Published on

ಬೆಂಗಳೂರು: ಪ್ರತಿಪಕ್ಷಗಳಿಗೆ ದೇಶ ಕಟ್ಟುವುದಕ್ಕಿಂತ ಅಧಿಕಾರಕ್ಕೆ ಬರುವುದೇ ಏಕೈಕ ಕಾರ್ಯಸೂಚಿಯಾಗಿದೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ, ಶಾಸಕ ಬಿ.ವೈ.ವಿಜಯೇಂದ್ರ ಅಣಕವಾಡಿದರು.

ವಿಧಾನಸೌಧದಲ್ಲಿ ಸುದ್ದಿಗಾರರಿಗೆ ಸೋಮವಾರ ಪ್ರತಿಕ್ರಿಯಿಸಿದ ಅವರು, ಎತ್ತು ಏರಿಗೆ ಎಳೆದರೆ ಕೋಣ ನೀರಿಗೆ ಎಂಬ ಸ್ಥಿತಿ ವಿಪಕ್ಷಗಳದ್ದಾಗಿದೆ. ವಿಪಕ್ಷಗಳ ಒಕ್ಕೂಟ ಬೆಂಗಳೂರಿನಲ್ಲಿ ಎರಡನೇ ಸಭೆ ನಡೆಸುತ್ತಿವೆ. ಸಭೆ ಫಲಶೃತಿ ಏನೇ ಆಗಿರಲಿ, ನರೇಂದ್ರ ಮೋದಿ ಮೂರನೇ ಬಾರಿ ಪ್ರಧಾನಿಯಾಗುವುದನ್ನು ತಪ್ಪಿಸಲಾಗದು ಎಂದರು.

ಮೋದಿಯವರಿಗೆ ಪ್ರಪಂಚದ 20 ದೇಶಗಳು ಅತ್ಯುನ್ನತ ನಾಗರಿಕ ಗೌರವ ನೀಡಿವೆ. ಅವರ ನಾಯಕತ್ವ, ಅಭಿವೃದ್ಧಿಯ ದೂರದೃಷ್ಟಿ ಜನರ ವಿಶ್ವಾಸ ಗಳಿಸಿದ್ದು ನಿಸ್ವಾರ್ಥ, ಸಮರ್ಥ ನಾಯಕರು ಎಂದು ಅರ್ಥ ಮಾಡಿಕೊಂಡಿದ್ದಾರೆ.

ನಿರ್ಲಕ್ಷ್ಯ
ಮಳೆ ವಿಳಂಬದಿಂದ ಬರಗಾಲದ ಭೀತಿ ತಲೆದೋರಿದೆ. ಜನ ಸಮುದಾಯ ಕುಡಿಯುವ‌ ನೀರಿನ ಸಮಸ್ಯೆ ಎದುರಿಸುತ್ತಿದ್ದು, ಸರ್ಕಾರ ತುರ್ತಾಗಿ ಗಮನಹರಿಸಬೇಕು ಎಂದು ಬಿ.ವೈ.ವಿಜಯೇಂದ್ರ ಆಗ್ರಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net