More

    ಜೈನಮುನಿ ಹತ್ಯೆ ಪ್ರಕರಣ: ಇಬ್ಬರು ಆರೋಪಿಗಳ ಪೊಲೀಸ್ ಕಸ್ಟಡಿ ಅವಧಿ ಅಂತ್ಯ, ಡೈರಿ ರಹಸ್ಯ ಪತ್ತೆ ಹಚ್ಚಲು ಕಸರತ್ತು

    ಬೆಳಗಾವಿ: ಹಿರೇಕೋಡಿ ಜೈನಮುನಿ ಕಾಮಕುಮಾರ ನಂದಿ ಮಹಾರಾಜರ ಹತ್ಯೆ ಪ್ರಕರಣದಲ್ಲಿ ಬಂಧಿತರಾಗಿದ್ದ ಇಬ್ಬರು ಆರೋಪಿಗಳ ಪೊಲೀಸ್ ಕಸ್ಟಡಿ ಅವಧಿ ಇಂದು ಅಂತ್ಯವಾಗಲಿದೆ. ಇಬ್ಬರೂ ಆರೋಪಿಗಳನ್ನೂ ಪೊಲೀಸರು ಕೋರ್ಟ್ ಮುಂದೆ ಹಾಜರುಪಡಿಸಲಿದ್ದಾರೆ.

    ಆರೋಪಿಗಳಾದ ನಾರಾಯಣ ಮಾಳಿ, ಹಸನ್ ದಲಾಯತ್ 7 ದಿನಗಳ ಪೊಲೀಸ್ ಕಸ್ಟಡಿ ಇಂದು ಮುಕ್ತಾಯವಾಗಲಿದ್ದು, ಇವರನ್ನು ಚಿಕ್ಕೋಡಿ ಪ್ರಧಾನ ದಿವಾಣಿ ನ್ಯಾಯಾಲಯಕ್ಕೆ ಪೊಲೀಸರು ಹಾಜರುಪಡಿಸಲಿದ್ದಾರೆ.

    ತನಿಖಾಧಿಕಾರಿ ಚಿಕ್ಕೋಡಿ ಡಿಎಸ್ಪಿ ಬಸವರಾಜ ಯಲಿಗಾರ ನೇತೃತ್ವದಲ್ಲಿ ಆರೋಪಿಗಳ ತೀವ್ರ ವಿಚಾರಣೆ ನಡೆದಿದ್ದು, ಎ1 ಆರೋಪಿ ನಾರಾಯಣ ಮಾಳಿ, ಎ2 ಆರೋಪಿ ಹಸನಸಾಬ್ ದಲಾಯತ್ ಪ್ರತ್ಯೇಕ ವಿಚಾರಣೆ ನಡೆಸಲಾಗಿದೆ. ಎ1 ಆರೋಪಿ ಸಹೋದರ ಸೇರಿ 20 ಕ್ಕೂ ಅಧಿಕ ಜನರನ್ನ ಪೊಲೀಸರು ವಿಚಾರಣೆ ನಡೆಸಿದ್ದು, ಹಂತಕರ ಜೊತೆ ಸಂಪರ್ಕದಲ್ಲಿದ್ದವರ ಕರೆಯಿಸಿಯೂ ವಿಚಾರಣೆ ನಡೆಸಲಾಗಿದೆ.

    ಮತ್ತೊಂದೆಡೆ ಜೈನಮುನಿಗಳ ಜೊತೆ ನಿಕಟ ಸಂಪರ್ಕದಲ್ಲಿ ಇದ್ದವರ ವಿಚಾರಣೆ ನಡೆದಿದ್ದು, ವಿಚಾರಣೆ ವೇಳೆ ಸಾಕಷ್ಟು ಸಾಕ್ಷ್ಯ, ಮಾಹಿತಿಯನ್ನು ಪೊಲೀಸರು ಕಲೆ ಹಾಕಿದ್ದಾರೆ. ಹಣಕಾಸಿನ ವ್ಯವಹಾರ ಬಗ್ಗೆ ಮಹತ್ವದ ಸಾಕ್ಷ್ಯವನ್ನು ಪೊಲೀಸರು ಸಂಗ್ರಹಿಸಿದ್ದು, ಕೃತ್ಯ ವೇಳೆ ಬಳಸಿದ್ದ ಮಾರಕಾಸ್ತ್ರ, ಶವ ಸಾಗಿಸಲು ಬಳಸಿದ್ದ ಬೈಕ್ ಜಪ್ತಿ ಮಾಡಲಾಗಿದೆ.

    ಸ್ವಾಮೀಜಿಗಳ ಪರ್ಸನಲ್ ಡೈರಿ ಸುಟ್ಟು ಹಾಕಿದ್ದ ಬೂದಿಯನ್ನುಎಫ್‌ಎಸ್‌ಎಲ್‌ಗೆ ರವಾನಿಸಿದ್ದು, ಜೈನಮುನಿಗಳ ಡೈರಿ ರಹಸ್ಯ ಪತ್ತೆ ಹಚ್ಚಲು ಕಸರತ್ತು ನಡೆಸಲಾಗಿದೆ.

    ಥೇಟ್ ಪುಷ್ಪ ಸಿನಿಮಾ ಸ್ಟೈಲಲ್ಲೇ ಗಾಂಜಾ ಸರಬರಾಜು ಮಾಡುತ್ತಿದ್ದ ಖತರ್ನಾಕ್ ಗ್ಯಾಂಗ್ ಅರೆಸ್ಟ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts