More

    ಟ್ವಿಟರ್​ನಲ್ಲಿ ಅತ್ಯಧಿಕ ಫಾಲೋವರ್ಸ್ ಹೊಂದಿರುವ ಭಾರತೀಯ, ಪ್ರಧಾನಿ ಮೋದಿ!

    ಬೆಂಗಳೂರು: ಸೋಷಿಯಲ್ ಮೀಡಿಯಾವನ್ನು ಸಮರ್ಥವಾಗಿ ಬಳಸಿಕೊಂಡ ವ್ಯಕ್ತಿಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಕೂಡ ಪ್ರಮುಖರು. ಇದೀಗ ಅವರು ಟ್ವಿಟರ್​​ನಲ್ಲಿ ಅತ್ಯಧಿಕ ಫಾಲೋವರ್ಸ್ ಹೊಂದಿರುವ ಭಾರತೀಯ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.

    ಪ್ರಧಾನಿ ಮೋದಿ ತಮ್ಮ ವೈಯಕ್ತಿಕ ಖಾತೆಯಲ್ಲಿ ಇದೀಗ 90 ಮಿಲಿಯನ್​ ಅಂದರೆ 9 ಕೋಟಿಗೂ ಅಧಿಕ ಫಾಲೋವರ್ಸ್ ಹೊಂದಿದ್ದಾರೆ. ಆ ಮೂಲಕ ಟ್ವಿಟರ್​​ನ ಅತ್ಯಧಿಕ ಫಾಲೋವರ್ಸ್ ಹೊಂದಿರುವ ಖಾತೆಗಳ ಟಾಪ್​-10 ಪಟ್ಟಿಯಲ್ಲೂ ಅವರು ಸ್ಥಾನ ಹೊಂದಿದ್ದಾರೆ.

    ಇದನ್ನೂ ಓದಿ: ವೇದಗಳನ್ನು ಓದಿದವರು ದೊಡ್ಡವರಲ್ಲ, ವೇದನೆಯನ್ನು ಅರಿತವರು ದೊಡ್ಡವರು: ವಿಧಾನಪರಿಷತ್ ಸದಸ್ಯ ಯು.ಬಿ.ವೆಂಕಟೇಶ್

    ಟ್ವಿಟರ್​ನ ಟಾಪ್​-10 ಅತ್ಯಧಿಕ ಫಾಲೋವರ್ಸ್ ಪಟ್ಟಿಯಲ್ಲಿ ಮೋದಿ ಎಂಟನೇ ಸ್ಥಾನದಲ್ಲಿದ್ದು, ಟಾಪ್​-10 ಪಟ್ಟಿಯಲ್ಲಿರುವ ಏಕೈಕ ಭಾರತೀಯ ಎಂದೆನಿಸಿಕೊಂಡಿದ್ದಾರೆ. ಮಾತ್ರವಲ್ಲ, ಟ್ವಿಟರ್​ನಲ್ಲಿ ಅತ್ಯಧಿಕ ಫಾಲೋವರ್ಸ್ ಹೊಂದಿರುವ ಭಾರತೀಯ ಕೂಡ ಅವರೇ ಆಗಿದ್ದಾರೆ.
    ಟ್ವಿಟರ್​ನಲ್ಲಿ ಅತ್ಯಧಿಕ ಫಾಲೋವರ್ಸ್ ಹೊಂದಿರುವವರ ಪೈಕಿ ಟ್ವಿಟರ್​ ಮುಖ್ಯಸ್ಥ ಎಲಾನ್ ಮಸ್ಕ್(14.7 ಕೋಟಿ ಫಾಲೋವರ್ಸ್) ಅಗ್ರಸ್ಥಾನದಲ್ಲಿದ್ದು, ಎರಡನೇ ಸ್ಥಾನದಲ್ಲಿ ಬರಾಕ್ ಒಬಾಮ (13.2 ಕೋಟಿ ಫಾಲೋವರ್ಸ್) ಇದ್ದಾರೆ.

    ಅವರನ್ನು ಟೆರರಿಸ್ಟ್ ಅಂತ ಈಗಲೇ ಹೇಳಲು ಸಾಧ್ಯವಿಲ್ಲ: ಗೃಹಸಚಿವ ಪರಮೇಶ್ವರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts