ಸುಶಾಂತ್​ ತಂದೆ ಕೆಕೆ ಸಿಂಗ್, ಹರಿಯಾಣ ಸಿಎಂ ಅವರನ್ನು ಭೇಟಿ ಮಾಡಿದ ಉದ್ದೇಶ ಏನಿರಬಹುದು?

Ee492cNUcAEDCBP
Published on

ಸುಶಾಂತ್​ ಸಾವಿನ ಕುರಿತು ಸಾಕಷ್ಟು ಬೆಳವಣಿಗೆಗಳಾಗುತ್ತಿವೆ. ಈಗಾಗಲೇ ಮುಂಬೈನಲ್ಲಿ ಜಾರಿ ನಿರ್ದೇಶನಾಲಯ ರಿಯಾ ಚಕ್ರವರ್ತಿ ಅವರನ್ನು ಬರೋಬ್ಬರಿ 8 ಗಂಟೆಗಳ ಕಾಲ ವಿಚಾರಣೆ ನಡೆಸಿದೆ. ಪ್ರಕರಣ ಸಿಬಿಐಗೆ ರವಾನೆಯಾಗುತ್ತಿದ್ದಂತೆ, ಸುಶಾಂತ್​ ಮಾಜಿ ಮ್ಯಾನೇಜರ್​ ಸೇರಿ ಆರು ಮಂದಿ ವಿರುದ್ಧ ಎಫ್​ಐಆರ್ ದಾಖಲಾಗಿದೆ. ಇದೀಗ ಈ ನಡುವೆ ಸುಶಾಂತ್​ ತಂದೆ ಕೆಕೆ ಸಿಂಗ್​ ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್​ ಖಟ್ಟರ್ ಅವರನ್ನು ಭೇಟಿಯಾಗಿದ್ದಾರೆ.

ಈ ನಡುವೆ ಹರಿಯಾಣದ ಫರಿದಾಬಾದ್​ಗೆ ತೆರಳಿದ ಕೆಕೆ ಸಿಂಗ್​, ಸಿಎಂ ಮನೋಹರ್ ಲಾಲ್​ ಖಟ್ಟರ್ ಅವರನ್ನು ಭೇಟಿಯಾಗಿ ಪ್ರಕರಣದ ಆಗುಹೋಗುಗಳ ಬಗ್ಗೆ ಚರ್ಚೆ ಮಾಡಿದ್ದಾರೆ. ಅಂದಹಾಗೆ ಕೆಕೆ ಸಿಂಗ್​ ಸಂಬಂಧಿ, ಒ.ಪಿ. ಸಿಂಗ್​ ಫರಿದಾಬಾದ್​ನ ಪೊಲೀಸ್ ಕಮಿಷನರ್ ಆಗೆ ಸೇವೆಯಲ್ಲಿದ್ದಾರೆ.

ಈವರೆಗೂ ಮುಂಬೈ ಪೊಲೀಸ್ ಪ್ರಕರಣದ ವಿಚಾರವಾಗಿ ​56ಕ್ಕೂ ಅಧಿಕ ಮಂದಿಯನ್ನು ವಿಚಾರಣೆ ನಡೆಸಿದ್ದಾರೆ. ಅದರಲ್ಲೂ ಕೆಕೆ ಸಿಂಗ್​ ದೂರು ನೀಡಿದ ಬಳಿಕ ರಿಯಾ ಹೆಸರೇ ಹೆಚ್ಚು ಸುದ್ದಿಯಲ್ಲಿರುವುದರಿಂದ, ಸಿಬಿಐ ಸಹ ಅವರ ವಿರುದ್ಧ ಎಫ್​ಐಆರ್ ದಾಖಲಿಸಿ ವಿಚಾರಣೆಗೆ ಆಹ್ವಾನಿಸಿದೆ. (ಏಜೆನ್ಸಿಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net