ಹಾವೇರಿ: ಕಟ್ಟಡವೊಂದರ ತೆರವು ಕಾರ್ಯಾಚರಣೆ ವೇಳೆ ಅವಶೇಷಗಳಡಿ ಸಿಲುಕಿ ಗಂಭೀರವಾಗಿ ಗಾಯಗೊಂಡಿದ್ದ ನಾಗರಹಾವಿಗೆ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ಮಾಡುವ ಮೂಲಕ ರಕ್ಷಿಸಿರುವ ಘಟನೆ ಹಾವೇರಿ ಜಿಲ್ಲೆಯಲ್ಲಿ ನಡೆದಿದೆ.
ಉರಗ ತಜ್ಞ ಸ್ನೇಕ್ ನಾಗರಾಜ್ ಹಾಗೂ ಹಾವೇರಿ ಪಾಲಿಕ್ಲಿನಿಕ್ನ ಡಾ. ಸಣ್ಣಬೀರಪ್ಪ ಸಣ್ಣಪುಟ್ಟಕ್ಕನವರ ಸಕಾಲಿಕ ಕಾರ್ಯಾಚರಣೆಯಿಂದ ಪ್ರಾಣ ಸಂಕಟದಲ್ಲಿ ನರಳುತ್ತಿದ್ದ ನಾಗರಹಾವು ಬದುಕುಳಿದಿದೆ.
ಹಾವೇರಿ ನಗರದ ಹೊರವಲಯದಲ್ಲಿರುವ ಡಾಬಾವೊಂದರ ಹಳೆಯ ಕಟ್ಟಡ ತೆರವು ಕಾರ್ಯಾಚರಣೆ ವೇಳೆ ಹಾವೊಂದು ಅವಶೇಷಗಳಡಿ ಸಿಲುಕಿದೆ. ಇದನ್ನು ಗಮನಿಸಿದ ಸ್ಥಳೀಯರು ಕೂಡಲೇ ಉರಗತಜ್ಞ ಸ್ನೇಕ್ ನಾಗರಾಜ್ಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ಧಾವಿಸಿದ ನಾಗರಾಜ್ ಗಾಯಗೊಂಡಿದ್ದ ಹಾವನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಹಾವಿನ ಕೆಲಭಾಗದಲ್ಲಿ ಗಾಯವಾಗಿರುವುದನ್ನು ಗಮನಿಸಿದ ವೈದ್ಯ ಡಾ. ಸಣ್ಣಬೀರಪ್ಪ ಸಣ್ಣಪುಟ್ಟಕ್ಕನವರ ಸಕಾಲದಲ್ಲಿ ಶಸ್ತ್ರಚಿಕಿತ್ಸೆ ಮಾಡುವ ಮೂಲಕ ನೋವಿನಲ್ಲಿ ಒದಾಡುತ್ತಿದ್ದ ಮೂಕಜೀವಿಗೆ ಆಸರೆಯಾಗಿದ್ದಾರೆ. ಆಪರೇಷನ್ ಬಳಿಕ ಸ್ನೇಕ್ ನಾಗರಾಜ್ ಐದು ದಿನ ಮನೆಯಲ್ಲಿ ಆರೈಕೆ ಮಾಡಿ, ನಂತರ ಅದನ್ಉ ಕರ್ಜಗಿ ಅರಣ್ಯ ಪ್ರದೇಶದಲ್ಲಿ ಬಿಟ್ಟಿದ್ದಾರೆ.