ಸುರೇಶ್ ರೈನಾ ಮಾಡಿದ ಮನವಿಗೆ ಹತ್ತೇ ನಿಮಿಷದಲ್ಲಿ ಸ್ಪಂದಿಸಿದ ಬಾಲಿವುಡ್ ನಟ ಸೋನು ಸೂದ್..!

suresh rain and sonu sood
Published on

ಮೀರತ್: ಕೋವಿಡ್-19ರಿಂದ ಸಂಕಷ್ಟದಲ್ಲಿ ಸಿಲುಕಿರುವವರಿಗೆ ಮೊದಲು ಸ್ಪಂದಿಸುವುದೇ ಬಾಲಿವುಡ್ ನಟ ಸೋನು ಸೂದ್. ಇಡೀ ದೇಶ ಮೊದಲ ಬಾರಿ ಲಾಕ್‌ಡೌನ್ ಆದ ಸಂದರ್ಭದಿಂದಲೂ ಸಂಕಷ್ಟದಲ್ಲಿ ಇರುವವರೆಗೆ ನೆರವಾಗುತ್ತಾ ಬಂದಿದ್ದಾರೆ. ಕ್ರಿಕೆಟಿಗ ಸುರೇಶ್ ರೈನಾ ಮಾಡಿದ ಮನವಿ 10ನೇ ನಿಮಿಷದಲ್ಲಿ ಪರಿಹಾರ ನೀಡಿ ಮಾನವೀಯತೆ ಮೆರೆದಿದ್ದಾರೆ. ಸುರೇಶ್ ರೈನಾ ಸಂಬಂಧಿಕಯೊಬ್ಬರಿಗೆ ಆಕ್ಸಿಜನ್ ಸಿಲಿಂಡರ್ ಬೇಕೆಂದು ಸಾಮಾಜಿಕ ಜಾಲಾತಾಣಗಳಲ್ಲಿ ಮನವಿ ಮಾಡಿದ್ದರು. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೂ ಮನವಿ ಸಲ್ಲಿಸಿದ್ದರು. ಕೇವಲ 10 ನಿಮಿಷ ನೀಡಿ ಭಾಯ್ ನಿಮಗೆ ಅಕ್ಸಜನ್ ಸಿಡಿಲಿಂಡರ್ ಸಿಗುತ್ತದೆ ಎಂದು ಹೇಳಿದ ಸಮಯಕ್ಕೆ ನೆರವಾಗಿದ್ದಾರೆ.

ಮೀರತ್‌ನಲ್ಲಿರುವ ಸಂಬಂಧಿಗೆ ಯಾರಾದರೂ ಸಹಾಯ ಮಾಡಿ ಎಂದು ರೈನಾ ಮಾಡಿದ ಟ್ವೀಟ್ ಗಮನಿಸಿದ ಸೋನು ಸೂದ್ ಸೂಕ್ತ ರೀತಿಯಲ್ಲಿ ಸ್ಪಂದಿಸಿದ್ದಾರೆ. ಇದೇ ವರ್ಷದ ಹಿಂದೆ ಇಡೀ ಭಾರತವೇ ಲಾಡ್‌ಡೌನ್‌ನಿಂದ ನಲುಗಿತು. ಈ ವೇಳೆ ಮುಂಬೈನಲ್ಲಿದ್ದ ವಲಸೆ ಕಾರ್ಮಿಕರಿಗೆ ಸ್ವತಃ ಖರ್ಚಿನಲ್ಲಿ ಬಸ್ ವ್ಯವಸ್ಥೆ ಮಾಡಿ ಅವರ ಊರುಗಳಿಗೆ ಕಳುಹಿಸಿಕೊಟ್ಟಿದ್ದರು.

ಕೋವಿಡ್-19 ಅಬ್ಬರ ಎಲ್ಲೆಡೆ ಮೀತಿ ಮೀರಿದ್ದು, ಸರಾಸರಿ 3.5 ಲಕ್ಷ ದಂತೆ ಪ್ರಕರಣಗಳು ದಾಖಲಾಗುತ್ತಿವೆ. ಬುಧವಾರ ಒಂದೇ 4 ಲಕ್ಷ ಗಡಿ ದಾಟಿತ್ತು. ಎಲ್ಲೆಡೆ, ಆಮ್ಲಜನಕದ ಅಭಾವ ತೀವ್ರವಾಗಿ ಕಾಡುತ್ತಿದ್ದು, ಆಸ್ಪತ್ರೆಗಳಲ್ಲಿ ಸೂಕ್ತ ಹಾಸಿಗೆ ವ್ಯವಸ್ಥೆಗೂ ಪರಿತಪಿಸುವಂತಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net