More

    ಐಸಿಸಿ ವಿಶ್ವ ಟೆಸ್ಟ್​ ಚಾಂಪಿಯನ್​ಷಿಪ್​ಗೆ ಶೀಘ್ರ ಭಾರತ ತಂಡ ಪ್ರಕಟ, ಕನ್ನಡಿಗ ಪ್ರಸಿದ್ಧಕೃಷ್ಣಗೆ ಸ್ಥಾನ ನಿರೀಕ್ಷೆ

    ನವದೆಹಲಿ: ನ್ಯೂಜಿಲೆಂಡ್​ ವಿರುದ್ಧ ಇಂಗ್ಲೆಂಡ್​ನಲ್ಲಿ ಜೂನ್​ 18ರಿಂದ ನಡೆಯಲಿರುವ ಐಸಿಸಿ ವಿಶ್ವ ಟೆಸ್ಟ್​ ಚಾಂಪಿಯನ್​ಷಿಪ್​ (ಡಬ್ಲ್ಯುಟಿಸಿ) ಫೈನಲ್​ ಪಂದ್ಯಕ್ಕೆ ಭಾರತ ತಂಡ 48 ಗಂಟೆಯೊಳಗೆ ಪ್ರಕಟಗೊಳ್ಳುವ ನಿರೀಕ್ಷೆ ಇದೆ. ಕರ್ನಾಟಕದ ಯುವ ವೇಗಿ ಪ್ರಸಿದ್ಧಕೃಷ್ಣ ಇದೇ ಮೊದಲ ಬಾರಿಗೆ ಟೆಸ್ಟ್​ ತಂಡದಲ್ಲಿ ಸ್ಥಾನ ಪಡೆಯುವ ನಿರೀಕ್ಷೆ ಇದೆ.

    ಪ್ರವಾಸಕ್ಕೆ ನಾಲ್ವರು ಆರಂಭಿಕರು, 4-5 ಮಧ್ಯಮ ಕ್ರಮಾಂಕದ ಬ್ಯಾಟ್ಸ್​ಮನ್​ಗಳು, 8-9 ವೇಗಿಗಳು, 4-5 ಸ್ಪಿನ್ನರ್​ಗಳು ಮತ್ತು 2-3 ವಿಕೆಟ್​ ಕೀಪರ್​ಗಳನ್ನು ಒಳಗೊಂಡ ಬೃಹತ್​ ತಂಡ ಪ್ರಕಟಗೊಳ್ಳುವ ಸಾಧ್ಯತೆ ಇದೆ. ಡಬ್ಲ್ಯುಟಿಸಿ ಫೈನಲ್​ ಬೆನ್ನಲ್ಲೇ ಭಾರತ ತಂಡ ಆತಿಥೇಯ ಇಂಗ್ಲೆಂಡ್​ ವಿರುದ್ಧ 5 ಪಂದ್ಯಗಳ ಟೆಸ್ಟ್​ ಸರಣಿಯನ್ನೂ ಆಡಲಿದೆ. ಅದಕ್ಕೂ ಇದೇ ತಂಡ ಮುಂದುವರಿಯುವ ನಿರೀಕ್ಷೆ ಇದೆ.

    ಇದನ್ನೂ ಓದಿ: ಕರೊನಾದಿಂದ ಸಂಕಷ್ಟದಲ್ಲಿರುವವರಿಗೆ ಪಠಾಣ್​ ಕ್ರಿಕೆಟ್​ ಅಕಾಡೆಮಿಯಿಂದ ನೆರವು 

    ಕಳೆದ ಐಪಿಎಲ್​ನಲ್ಲಿ ಬೌಲಿಂಗ್​ ಮಾಡದಿರುವ ಮತ್ತು ಬ್ಯಾಟಿಂಗ್​ನಲ್ಲೂ ಲಯ ಕಳೆದುಕೊಂಡಿರುವ ಆಲ್ರೌಂಡರ್​ ಹಾರ್ದಿಕ್​​ ಪಾಂಡ್ಯ ಸ್ಥಾನ ಪಡೆಯುವರೇ ಎಂಬ ಬಗ್ಗೆ ಸ್ಪಷ್ಟತೆ ಇಲ್ಲ. ಆರಂಭಿಕ ಪೃಥ್ವಿ ಷಾಗೆ ಮತ್ತೆ ಅವಕಾಶ ಲಭಿಸುವುದೇ ಎಂಬ ಬಗ್ಗೆಯೂ ಗೊಂದಲವಿದೆ.

    ನಾಲ್ವರು ಆರಂಭಿಕರಾಗಿ ರೋಹಿತ್​ ಶರ್ಮ, ಶುಭಮಾನ್​ ಗಿಲ್​, ಕನ್ನಡಿಗರಾದ ಕೆಎಲ್​ ರಾಹುಲ್​, ಮಯಾಂಕ್​ ಅಗರ್ವಾಲ್​ ಸ್ಥಾನ ಪಡೆಯುವುದು ಬಹುತೇಕ ಖಚಿತವೆನಿಸಿದೆ. ರವೀಂದ್ರ ಜಡೇಜಾ, ಹನುಮ ವಿಹಾರಿ ಫಿಟ್​ ಆಗಿ ತಂಡಕ್ಕೆ ಮರಳಲಿದ್ದು, ಆರ್​. ಅಶ್ವಿನ್​, ಅಕ್ಷರ್​ ಪಟೇಲ್​ಗೂ ಸ್ಥಾನ ನಿಶ್ಚಿತವೆನಿಸಿದೆ. ಮಧ್ಯಮ ಕ್ರಮಾಂಕದಲ್ಲಿ ನಾಯಕ ವಿರಾಟ್​ ಕೊಹ್ಲಿ, ಚೇತೇಶ್ವರ ಪೂಜಾರ, ಅಜಿಂಕ್ಯ ರಹಾನೆ ಖಚಿತ ಆಯ್ಕೆಯಾಗಿದ್ದರೆ, ರಿಷಭ್​ ಪಂತ್​ ಮತ್ತು ವೃದ್ಧಿಮಾನ್​ ಸಾಹ ಜತೆಗೆ ಕೆಎಸ್​ ಭರತ್​ 3ನೇ ವಿಕೆಟ್​ ಕೀಪರ್​ ಆಗಿ ಸ್ಥಾನ ಪಡೆಯಬಹುದು. ವಾಷಿಂಗ್ಟನ್​ ಸುಂದರ್​ ಕೂಡ ಸ್ಥಾನ ಉಳಿಸಿಕೊಳ್ಳುವ ನಿರೀಕ್ಷೆ ಇದ್ದು, ವೇಗ ಬೌಲಿಂಗ್​ ವಿಭಾಗದಲ್ಲಿ ಜಸ್​ಪ್ರೀತ್​ ಬುಮ್ರಾ, ಇಶಾಂತ್​ ಶರ್ಮ, ಮೊಹಮದ್​ ಶಮಿ, ಮೊಹಮದ್​ ಸಿರಾಜ್​ ಮತ್ತು ಶಾರ್ದೂಲ್​ ಠಾಕೂರ್​ ಪ್ರಮುಖರಾಗಿರುತ್ತಾರೆ.

    ಮೇ 30ರಂದು ಐಪಿಎಲ್​ ಫೈನಲ್​ ನಡೆದ ಬಳಿಕ ಜೂನ್​ 2ರಂದು ಭಾರತ ತಂಡವನ್ನು ಇಂಗ್ಲೆಂಡ್​ಗೆ ಕಳುಹಿಸುವುದು ಬಿಸಿಸಿಐನ ಈ ಹಿಂದಿನ ಯೋಜನೆಯಾಗಿತ್ತು. ಆದರೆ ಇದೀಗ ಐಪಿಎಲ್​ ಸ್ಥಗಿತಗೊಂಡಿರುವುದರಿಂದ, ಭಾರತ ತಂಡ ಬೇಗನೆ ಇಂಗ್ಲೆಂಡ್​ಗೆ ಪ್ರಯಾಣ ಬೆಳೆಸಲಿದೆ ಎನ್ನಲಾಗಿದೆ.

    ಇಂಗ್ಲೆಂಡ್​ನಲ್ಲಿ ಪೂರ್ಣಗೊಳ್ಳಲಿದೆ ಐಪಿಎಲ್​ 14ನೇ ಆವೃತ್ತಿ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts