More

    ಕರೊನಾದಿಂದ ಸಂಕಷ್ಟದಲ್ಲಿರುವವರಿಗೆ ಪಠಾಣ್​ ಕ್ರಿಕೆಟ್​ ಅಕಾಡೆಮಿಯಿಂದ ನೆರವು

    ನವದೆಹಲಿ: ದಕ್ಷಿಣ ದೆಹಲಿಯಲ್ಲಿ ಕೋವಿಡ್​-19 ಸಾಂಕ್ರಾಮಿಕ ಪಿಡುಗಿನಿಂದ ಸಂಕಷ್ಟಕ್ಕೆ ಸಿಲುಕಿರುವವರಿಗೆ ಟೀಮ್​ ಇಂಡಿಯಾದ ಮಾಜಿ ಆಲ್ರೌಂಡರ್​ ಇರ್ಫಾನ್​ ಪಠಾಣ್​ ಅವರ ಕ್ರಿಕೆಟ್​ ಅಕಾಡೆಮಿಯಿಂದ ಉಚಿತ ಊಟದ ವ್ಯವಸ್ಥೆ ಮಾಡಲಾಗಿದೆ.

    ಕೋವಿಡ್​-19 ಎರಡನೇ ಅಲೆಗೆ ದೇಶ ತತ್ತರಿಸಿರುವ ಸಮಯದಲ್ಲಿ ಒಟ್ಟಾಗಿ ನಿಲ್ಲುವುದು ಮತ್ತು ಸಂಕಷ್ಟದಲ್ಲಿರುವ ಜನರಿಗೆ ನೆರವಾಗುವುದು ನಮ್ಮ ಜವಾಬ್ದಾರಿಯಾಗಿದೆ. ಹೀಗಾಗಿ ಪಠಾಣ್ಸ್​ ಕ್ರಿಕೆಟ್​ ಅಕಾಡೆಮಿಯಿಂದ (ಸಿಎಪಿ) ದಕ್ಷಿಣ ದೆಹಲಿಯಲ್ಲಿ ಕೋವಿಡ್​-19ರಿಂದ ತೊಂದರೆಗೆ ಒಳಗಾಗಿರುವವರಿಗೆ ಉಚಿತ ಊಟದ ವ್ಯವಸ್ಥೆ ಮಾಡಲಾಗಿದೆ ಎಂದು ಇರ್ಫಾನ್​ ಪಠಾಣ್​ ಟ್ವೀಟಿಸಿದ್ದಾರೆ.

    ಇದನ್ನೂ ಓದಿ: ಕ್ರಿಕೆಟ್‌ನಲ್ಲಿ ಮ್ಯಾಚ್ ಫಿಕ್ಸಿಂಗ್‌ಗೆ ಬಿಟ್ ಕಾಯಿನ್ ಹೊಸ ಅಸ್ತ್ರ!

    ಭಾರತ ಪರ 29 ಟೆಸ್ಟ್​ ಮತ್ತು 120 ಏಕದಿನ ಪಂದ್ಯಗಳನ್ನು ಆಡಿರುವ 36 ವರ್ಷದ ಇರ್ಫಾನ್​ ಪಠಾಣ್​ ಕಳೆದ ಮಾರ್ಚ್​ನಲ್ಲಿ ಕರೊನಾ ಸೋಂಕಿತರಾಗಿದ್ದರು. ರಾಯ್​ಪುರದಲ್ಲಿ ರಸ್ತೆ ಸುರಕ್ಷತಾ ವಿಶ್ವ ಸರಣಿಯಲ್ಲಿ ಆಡಿದ ಬಳಿಕ ಪಾಸಿಟಿವ್​ ಆಗಿದ್ದ ಅವರು ಬಳಿಕ ಗುಣಮುಖರಾಗಿ ಐಪಿಎಲ್​ನಲ್ಲಿ ವೀಕ್ಷಕವಿವರಣೆಕಾರರಾಗಿ ಕಾರ್ಯನಿರ್ವಹಿಸಿದ್ದರು. ಕಳೆದ ವರ್ಷ ಕರೊನಾ ಹಾವಳಿಯ ಸಮಯದಲ್ಲಿ ಇರ್ಫಾನ್​ ಮತ್ತು ಯೂಸುಫ್​ ಪಠಾಣ್​ ಸಹೋದರರು ಸುಮಾರು 4 ಸಾವಿರ ಮಾಸ್ಕ್​ ಕೊಡುಗೆ ನೀಡಿದ್ದರು.

    ಕ್ರಿಕೆಟಿಗನನ್ನು ಅಪಹರಿಸಿದ ದುಷ್ಕರ್ಮಿಗಳು! ಥಳಿಸಿದರು, ಗನ್​ ಹಿಡಿದು ಬೆದರಿಸಿದರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts