ನೆಟ್ಟಣಕ್ಕೆ ಸುರೇಶ್ ಕುಮಾರ್ ಭೇಟಿ

Sub_Suresh kumar
Published on

ಸುಬ್ರಹ್ಮಣ್ಯ: ರಾಜಾಜಿನಗರ ಶಾಸಕ, ಮಾಜಿ ಶಿಕ್ಷಣ ಸಚಿವ ಹಾಗೂ ದೂರು ಅರ್ಜಿ ಸಮಿತಿ ಸದಸ್ಯ ಸುರೇಶ್ ಕುಮಾರ್ ಸೋಮವಾರ ಕಡಬ ತಾಲೂಕಿನ ನೆಟ್ಟಣಕ್ಕೆ ಭೇಟಿ ನೀಡಿ ಸ್ಥಳೀಯ ಸಂಪರ್ಕ ಸೇತುವೆ, ಸಂಪರ್ಕ ರಸ್ತೆಗಳನ್ನು ಪರಿಶೀಲನೆ ನಡೆಸಿದರು.

ಬಿಳಿನೆಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನೆಟ್ಟಣ, ಮುಂಡಡ್ಕ, ವಾಟೇಕಜೆ, ಐತ್ತೂರು ಸಂಪರ್ಕ ರಸ್ತೆಗೆ ನಿರ್ಮಾಣ ಆಗಲಿರುವ ಸ್ಥಳ ಪರಿಶೀಲಿಸಿದರು. ಕೊಂಬಾರು ಗ್ರಾಮದ ಕಾಪಾರು ಸಂಪರ್ಕಿಸುವ ರಸ್ತೆಯ ದೊಡ್ಡಡ್ಕ ಎಂಬಲ್ಲಿ ಸೇತುವೆ ರಚನೆಯಾಗುವ ಸ್ಥಳ ವೀಕ್ಷಿಸಿದರು.ಇಲ್ಲಿನ ಸಮಸ್ಯೆಗಳ ಬಗ್ಗೆ ಹಾಗೂ ಬೇಡಿಕೆ ಬಗ್ಗೆ ರಾಜ್ಯ ಎಸ್‌ಡಿಎಂಸಿ ಸಮನ್ವಯ ಕೇಂದ್ರ ವೇದಿಕೆಯ ನಿರ್ದೇಶಕರಾದ ವಿನೀಶ್ ಕುಮಾರ್ ಹಾಗೂ ರಾಮಕೃಷ್ಣ ಹೊಳ್ಳಾರು ಗಮನಕ್ಕೆ ತಂದಿದ್ದರು. ಕೆಲ ತಿಂಗಳ ಹಿಂದೆ ಸುರೇಶ್ ಕುಮಾರ್ ಇಲ್ಲಿಗೆ ಭೇಟಿ ನೀಡಿ ಸ್ಥಳ ಪರಿಶೀಲಿಸಿ ಶಾಲಾ ಮಕ್ಕಳು ಹಾಗೂ ನಾಗರಿಕರೊಂದಿಗೆ ಮಾತುಕತೆ ನಡೆಸಿದ್ದರು. ಬೇಡಿಕೆ ಈಡೇರಿಸುವ ಭರವಸೆ ನೀಡಿದ್ದರು.ಇದೀಗ ಸೋಮವಾರ ಭೇಟಿ ನೀಡಿ ಪರಿಶೀಲಿಸಿದರು.

ಕರ್ನಾಟಕ ಎಸ್‌ಡಿಎಂಸಿ ಸಮನ್ವಯ ಕೇಂದ್ರ ವೇದಿಕೆ ರಾಜ್ಯ ಸಂಚಾಲಕ ಮೊಯ್ದಿನ್ ಕುಟ್ಟಿ, ರಾಜ್ಯ ನಿರ್ದೇಶಕರಾದ ಉಸ್ಮಾನ್ ನೆಕ್ಕಿಲು, ರಾಮಕೃಷ್ಣ ಹೊಳ್ಳಾರು, ಉಮ್ಮರ್ ಟೆಕ್ನಿಕ್, ವಿನೀಶ್ ಕುಮಾರ್, ಸಲಿಂ ಮಾಯಾಂಗಳ, ನವಾಜ್ ಪಲ್ಲತ್ತಾರು, ಅಶ್ರಫ್ ಕಲ್ಲೇರಿ, ಜಿಲ್ಲಾ ನಿರ್ದೇಶಕರಾದ ವೆಂಕಟರಮಣ ಪುಣಚ, ಸಲಿಕತ್ ಕೆಮ್ಮಾರ, ಪ್ರಮುಖರಾದ ಶ್ರೀಧರ ಗೌಡ ಕಾಪಾರು, ಮೊಹನ ಕಾಪಾರು, ವೆಂಕಟ್ರಮಣ ಕಾಪಾರು ಹಾಗೂ ಈ ಭಾಗದ ಸ್ಥಳೀಯರು, ಗ್ರಾಮಸ್ಥರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net