ಕುಲ್ಕುಂದ ದೈವಸ್ಥಾನ ಕೊಳ್ಳಿ ಮುಹೂರ್ತ

Sub_Kolli Muhurta
Published on

ಸುಬ್ರಹ್ಮಣ್ಯ: ಇತಿಹಾಸ ಪ್ರಸಿದ್ಧ ಕುಲ್ಕುಂದ ಶ್ರೀ ಮಹಾವಿಷ್ಣುಮೂರ್ತಿ ದೈವಸ್ಥಾನದಲ್ಲಿ ಮಾ.3 ಮತ್ತು 4 ರಂದು ಮಹಾವಿಷ್ಣುಮೂರ್ತಿ ದೈವದ ಒತ್ತೆಕೋಲ ನಡೆಯಲಿದೆ. ಈ ನಿಮಿತ್ತ ದೈವಸ್ಥಾನದಲ್ಲಿ ಕೊಳ್ಳಿ ಮುಹೂರ್ತ ನೆರವೇರಿತು.ದೈವಸ್ಥಾನದ ಮುಖ್ಯ ಪೂಜಾರಿ ರಾಮಚಂದ್ರ ಮಣಿಯಾಣಿ ಮುಹೂರ್ತದ ವಿಧಿವಿಧಾನ ನೆರವೇರಿಸಿ ಪ್ರಸಾದ ವಿತರಿಸಿದರು.

ದೈವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ರವೀಂದ್ರ ಕುಮಾರ್ ರುದ್ರಪಾದ, ಗೌರವಾಧ್ಯಕ್ಷ ಎಂ.ಚಂದ್ರಹಾಸ ಭಟ್, ಕಾರ್ಯಾಧ್ಯಕ್ಷ ಹರೀಶ್ ಎಸ್.ಇಂಜಾಡಿ, ಕಾರ್ಯದರ್ಶಿ ರಾಜೇಶ್ ಎನ್.ಎಸ್, ಆಡಳಿತ ಮಂಡಳಿ ಸದಸ್ಯರಾದ ಗೋಪಾಲ್ ಮಲೆ, ರಾಜೇಶ್ ಕಾಶಿಕಟ್ಟೆ, ರಾಜೇಶ್ ಕುಲ್ಕುಂದ, ರವಿ ಕಕ್ಕೆಪದವು, ಮಹಾಬಲ ರೈ, ನವೀನ್ ಮಣಿ, ಕೃಷ್ಣ ಮಣಿಯಾಣಿ, ಜಯಪ್ರಕಾಶ್ ಜಾಡಿಮನೆ, ಬಸವನಮೂಲೆ ಬಸವೇಶ್ವರ ದೇವಸ್ಥಾನ ಆಡಳಿತ ಮಂಡಳಿ ಅಧ್ಯಕ್ಷ ಗಿರಿಧರ ಸ್ಕಂದ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net