

ಬಂಟ್ವಾಳ: ಸಾವಿರಾರು ವರುಷಗಳ ಇತಿಹಾಸ, ಭವ್ಯ ಪರಂಪರೆ ಹೊಂದಿರುವ ಹಿಂದು ಧರ್ಮ ಅನಾದಿ ಕಾಲದಿಂದಲೂ ಸಮಸ್ಯೆ, ಸವಾಲುಗಳನ್ನು ಎದುರಿಸುತ್ತ ಬಂದಿದೆ. ಪ್ರಸ್ತುತ ಕಾಲಘಟ್ಟದಲ್ಲಿ ಕೂಡ ಅನೇಕ ಸವಾಲುಗಳಿಗೆ ದಿಟ್ಟ ಉತ್ತರ ನೀಡಲು ಹಿಂದು ಸಮಾಜ ಜಾತಿ ಮತ ಪಂತವನ್ನು ಬಿಟ್ಟು ಒಗ್ಗಟ್ಟಾಗುವ ಸಂದರ್ಭ ಬಂದಿದೆ ಎಂದು ವಿಶ್ವ ಹಿಂದು ಪರಿಷತ್ ಮಂಗಳೂರು ವಿಭಾಗದ ಕಾರ್ಯದರ್ಶಿ ದೇವಿಪ್ರಸಾದ್ ಶೆಟ್ಟಿ ಕೊಡ್ಮಾಣ್ ಹೇಳಿದರು.
ಬಂಟ್ವಾಳ ಕಳ್ಳಿಗೆ ಗ್ರಾಮದ ಬೆಂಜನಪದವು ರಾಮನಗರದಲ್ಲಿ ನೂತನವಾಗಿ ನಿರ್ಮಾಣಗೊಂಡ ಅಯ್ಯಪ್ಪ ಮಂದಿರದ ಲೋಕಾರ್ಪಣೆ ಪ್ರಯುಕ್ತ ಭಾನುವಾರ ರಾತ್ರಿ ನಡೆದ ಧಾರ್ಮಿಕ ಸಭೆಯಲ್ಲಿ ಮಾತನಾಡಿದರು.
ಆರ್ಯ ಸಮಾಜ ಮಂಗಳೂರು ಅಧ್ಯಕ್ಷ ದಿನಕರ ಶೆಟ್ಟಿ ಮಾತನಾಡಿ, ಮಠ ಮಂದಿರಗಳು ಹಾಗೂ ಧಾರ್ಮಿಕ ಆಚರಣೆಗಳು ಹಿಂದು ಸಮಾಜವನ್ನು ಇನ್ನಷ್ಟು ಬಲಿಷ್ಠಗೊಳಿಸಿ, ಸಂಸ್ಕೃತಿ ಪರಂಪರೆಯನ್ನು ಮುಂದಿನ ತಲೆಮಾರಿಗೆ ಮುಟ್ಟಿಸುವ ಅಗತ್ಯ ಇದೆ ಎಂದರು.
ಸಿ.ಪಿ.ಮಾನವಿಕ್ರಮ ಗುರುಸ್ವಾಮಿ, ಸಂತೋಷ್ ಪೊಳಲಿ, ಗುರುರಾಜ್ ಬಂಟ್ವಾಳ, ಸಂದೀಪ್ ಅಂಬ್ಲಮೊಗರು, ಹರೀಶ್ ಮಟ್ಟಿ, ನಾಗೇಶ್ ತೋಕೂರು, ಉದ್ಯಮಿ ಧನರಾಜ್, ಉಷಾ ಮನೋಜ್ ಶರ್ಮ, ಭವ್ಯ ಪ್ರವೀಣ್ ಬೆಂಜನಪದವು ಉಪಸ್ಥಿತರಿದ್ದರು.
ಕಟ್ಟೆಮಾರ್ ಶ್ರೀ ಮಂತ್ರದೇವತಾ ಸಾನ್ನಿಧ್ಯದ ಧರ್ಮದರ್ಶಿ ಮನೋಜ್ ಕಟ್ಟೆಮಾರ್, ಸಿ.ಪಿ.ಮಾನವಿಕ್ರಮ ಗುರುಸ್ವಾಮಿ ಹಾಗೂ ವಕೀಲ ದಿನಕರ ಶೆಟ್ಟಿಯವರನ್ನು ಸನ್ಮಾನಿಸಲಾಯಿತು.
ಕಿಶೋರ್ ಭಂಡಾರಿ ಬೆಳ್ಳೂರು ಸ್ವಾಗತಿಸಿ, ವಂದಿಸಿದರು. ಪತ್ರಕರ್ತ ಸಂತೋಷ್ ಕುಲಾಲ್ ನೆತ್ತರಕೆರೆ ಕಾರ್ಯಕ್ರಮ ನಿರೂಪಿಸಿದರು.ಅಯ್ಯಪ್ಪ ಸೇವಾ ಟ್ರಸ್ಟ್‌ನ ಅಧ್ಯಕ್ಷ ಪ್ರವೀಣ್ ಬೆಂಜನಪದವು, ಪ್ರಧಾನ ಕಾರ್ಯದರ್ಶಿ ಸುಬ್ರಹ್ಮಣ್ಯ ಭಟ್ ಹಾಗೂ ಬ್ರಹ್ಮಕಲಶ ಸಮಿತಿಯ ಪ್ರ. ಕಾರ್ಯದರ್ಶಿ ಮನೋಜ್ ಶರ್ಮ ಸಹಕರಿಸಿದರು.