ಸಿನಿಮಾ

VIDEO| ಫೀಲ್ಡಿಂಗ್​ ವೇಳೆ ವಿಕೆಟ್​ ಕೀಪರ್​ ಎಡವಟ್ಟು; ಸ್ವಲ್ಪದರಲ್ಲೇ ಬಚಾವ್​ ಆದ ಬ್ಯಾಟ್ಸ್​ಮ್ಯಾನ್​

ನವದೆಹಲಿ: ಕ್ರಿಕಟ್​ ಆಟದಲ್ಲಿ ಸಾಮಾನ್ಯವಾಗಿ ಉಭಯ ತಂಡದ ಆಟಗಾರರು ಎದುರಾಳಿಯನ್ನು ಸೋಲಿಸಲು ಇನ್ನಿಲ್ಲದ ತಂತ್ರ-ಪ್ರತಿತಂತ್ರವನ್ನು ಹೂಡುವುದನ್ನು ನಾವು ನೋಡಿರುತ್ತೇವೆ.

ಕೆಲವೊಮ್ಮ ಕ್ರಿಕೆಟ್​ ಪಂದ್ಯಗಳು ಅ್ಚ್ರಿಯ ಘಟನೆಗಳಿಗೂ ಸಾಕ್ಷಿಯಾಗುತ್ತವೆ ಮತ್ತು ಈ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಸಹ ಆಗುತ್ತವೆ.

ವೈರಲ್​ ವಿಡಿಯೋ

ಸದ್ಯ ವೈರಲ್​ ಆಗಿರುವ ವಿಡಿಯೋ ಒಂದರಲ್ಲಿ ವಿಕೆಟ್​ ಕೀಪರ್​ ಒಬ್ಬನ ಎಡವಟ್ಟಿನಿಂದ ಇಡೀ ತಂಡ ಸಂಕಷ್ಟ ಸಿಲುಕುವುದನ್ನು ನೋಡಬಹುದಾಗಿದೆ.

ಸ್ಥಳೀಯ ಕ್ರಿಕೆಟ್​ ಪಂದ್ಯಾವಳಿ ಒಂದರಲ್ಲಿ ಇಬ್ಬರು ಬ್ಯಾಟ್ಸ್​​ಮ್ಯಾನ್ ನಡುವಿನ ಸಂವಹನದ ಕೊರತೆಯಿಂದಾಗಿ ಇಲ್ಲದ ರನ್​ ಕದಿಯಲು ಹೋಗಿ ರನ್​ ಔಟ್​ ಆಗುತ್ತಾರೆ.

ವಿಕೆಟ್​ ಕೀಪರ್​ ಎಡವಟ್ಟು

ಆದರೆ, ವಿಕೆಟ್​ ಕೀಪರ್​ ಬ್ಯಾಟ್ಸ್​ಮ್ಯಾನ್​ ಕ್ರೀಸ್​ನಿಂದ ದೂರ ಇರುವುದನ್ನು ಗಮನಿಸಿ ಔಟ್​ ಮಾಡುವ ರೀತಿ ಹೆದರಿಸುತ್ತಿರುತ್ತಾನೆ. ಈ ವೇಳೆ ಬ್ಯಾಟರ್​ ನಿರುತ್ಸಾಹದಿಂದ ವಾಪಸ್​ ಸ್ಟ್ರೈಕರ್​ ಎಂಡ್ ಕಡೆಗೆ ಬರುವುದನ್ನು ನೋಡಬಹುದು.

ಔಟ್​ ಮಾಡಿದ್ದೇನೆಂಬ ಜೋಶ್​ನಲ್ಲಿ ವಿಕೆಟ್​ ಕೀಪರ್​ ತಂಡದ ಸದಸ್ಯರೊಂದಿಗೆ ಸಂಭ್ರಮಿಸುತ್ತಿರುತ್ಥಾನೆ. ಆದರೆ, ಕಡೆಯಲ್ಲಿ ಅಂಪೈರ್​ ವಿಕೆಟ್​ನ ಬೇಲ್ಸ್​ ಬೀಳಿಸದೆ ಇರುವುದನ್ನು ಗಮನಿಸಿ ನಾಟ್​ ಔಟ್​ ಎಂದು ಘೋಷಿಸುತ್ತಾರೆ.

ಇದನ್ನು ಗಮನಿಸಿದ ತಂಡದ ಇತರೆ ಸದಸ್ಯರು ವಿಕೆಟ್​ ಕೀಪರ್​ನನ್ನು ಶಪಿಶುಥ ವಾಪಸ್​ ತಮ್ಮ ಸ್ಥಾನದತ್ತ ತೆರಳುತ್ತಿರುವುದನ್ನು ಗಮನಿಸಬಹುದು.

Latest Posts

ಲೈಫ್‌ಸ್ಟೈಲ್