

Suicide: ಕೌಟುಂಬಿಕ ಕಲಹ, ಆರ್ಥಿಕ ತೊಂದರೆಯಿಂದಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪರ ವಾದಿಸಿದ್ದ ಹಿರಿಯ ವಕೀಲ ಮತ್ತು ಸೂರತ್ ಕಾಂಗ್ರೆಸ್ನ ಕಾನೂನು ಘಟಕದ ಸಂಚಾಲಕ ಫಿರೋಜ್ ಪಠಾಣ್ ತಾಪಿ ಸೂರತ್ನಲ್ಲಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಶನಿವಾರ(ಸೆ. 06) ವರದಿಯಾಗಿದೆ.
ಗುರುವಾರ ರಾತ್ರಿ 11 ಗಂಟೆ ಸುಮಾರಿಗೆ ಸೂರತ್ನ ಕೇಬಲ್ ಸೇತುವೆಯಿಂದ ತಾಪಿ ನದಿಗೆ ಹಾರಿ ತಾಪಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಶುಕ್ರವಾರ ಬೆಳಗಿನ ಜಾವ ಉಭಾರತ್ ಬೀಚ್‌ನಲ್ಲಿ ಅವರ ಮೃತದೇಹ ಪತ್ತೆಯಾಗಿದೆ. ಘಟನೆ ಬಗ್ಗೆ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ ಎನ್ನಲಾಗಿದೆ.
ಸಾವಿಗೆ ಕೆಲವು ಗಂಟೆಗಳ ಮೊದಲು, ಫಿರೋಜ್ ತಮ್ಮ ಕಿರಿಯ ವಕೀಲ ದೀಪಕ್ ಅವರಿಗೆ ಗೊಂದಲದ ಫೋನ್ ಕರೆ ಮಾಡಿ "ನನಗೆ ಏನಾದರೂ ಸಂಭವಿಸಿದರೆ, ನ್ಯಾಯಾಲಯದ ಬಳಿಯ ಸೇತುವೆಗೆ ಬನ್ನಿ ಎಂದು ಹೇಳಿದ್ದರು ಎನ್ನಲಾಗಿದೆ.ತಾಪಿ ಫೋನ್ ಕರೆಯಿಂದ ಗಾಬರಿಗೊಂಡಿದ್ದ ದೀಪಕ್ ಅವರನ್ನು ಸಮಾಧಾನ ಪಡಿಸಲು ಯತ್ನಿಸಿದ್ದಾರೆ. ಬಳಿಕ ಅವರ ಮಗನಿಗೆ ಕರೆ ಮಾಡಿ ಕರೆದುಕೊಂಡು ನದಿ ಸೇತುವೆ ಬಳಿ ತೆರಳಿದ್ದಾಗ ಅವರ ಆತ್ಮಹತ್ಯೆ ಮಾಡಿಕೊಂಡಿದ್ದು ದೃಢಪಟ್ಟಿದೆ.
ಈ ಕುರಿತು ಮಾತನಾಡಿರುವ ತಾಪಿ ಸ್ನೇಹಿತರು, ಫಿರೋಜ್ ತಿಂಗಳುಗಳಿಂದ ಖಿನ್ನತೆಯಿಂದ ಬಳಲುತ್ತಿದ್ದರು. ಕೌಟುಂಬಿಕ ಕಲಹ, ಆರ್ಥಿಕ ಸಮಸ್ಯೆಗಳಿಂದ ಬಳಲುತ್ತಿದ್ದರು. ಇದರಿಂದ ಅವರು ಮಾನಸಿಕವಾಗಿ ಖಿನ್ನತೆಗೊಳಗಾಗಿದ್ದರು ಎಂದು ಹೇಳಿದ್ದಾರೆ. (ಏಜೆನ್ಸೀಸ್)