‘ಭೌತಶಾಸ್ತ್ರ ಪ್ರಶ್ನೆಗೆ ಸರಿಯಾದ ಉತ್ತರ ನೀಡಿ’: ಐಐಟಿ ನಿರ್ದೇಶಕರಿಗೆ ಸುಪ್ರೀಂ ಕೋರ್ಟ್ ಆದೇಶ

ನವದೆಹಲಿ: ನೀಟ್​ ಪರೀಕ್ಷೆ ಪ್ರಶ್ನೆ ಪತ್ರಿಕೆಯಲ್ಲಿ ಭೌತಶಾಸ್ತ್ರ ಪ್ರಶ್ನೆಗೆ ಸರಿಯಾದ ಉತ್ತರಕ್ಕಾಗಿ ಸುಪ್ರೀಂಕೋರ್ಟ್​ ಮುಖ್ಯ ನ್ಯಾಯಮೂರ್ತಿ ಡಿ.ವೈ ಚಂದಚೂಡ್ ನೇತೃತ್ವದ ಪೀಠವು ಐಐಟಿ-ದೆಹಲಿಯ ನಿರ್ದೇಶಕರಿಗೆ ಸೋಮವಾರ ಪ್ರಮುಖ ನಿರ್ದೇಶನ ನೀಡಿದೆ.

ಇದನ್ನೂ ಓದಿ: ಕಸದ ರಾಶಿ ಸೇರಿದ್ದ ಲಕ್ಷಾಂತರ ರೂ. ಮೌಲ್ಯದ ವಜ್ರದ ನೆಕ್ಲೇಸ್ ಪತ್ತೆಯಾಗಿದ್ದು ಹೇಗೆ?

ಗ್ರೇಸ್ ಮಾರ್ಕ್ಸ್ ಗೆ ಕಾರಣವಾದ ಈ ಪ್ರಶ್ನೆಗೆ ಸರಿಯಾದ ಉತ್ತರಕ್ಕಾಗಿ ಮೂವರು ತಜ್ಞರನ್ನು ನೇಮಿಸಿ ಜೂನ್ 23ರ ಮಧ್ಯಾಹ್ನ 12 ಗಂಟೆಯೊಳಗೆ ಉತ್ತರ ಸಲ್ಲಿಸುವಂತೆ ಸೂಚಿಸಲಾಗಿದೆ. ಮಂಗಳವಾರವೂ ವಿಚಾರಣೆ ಮುಂದುವರಿಯಲಿದೆ.

ನೀಟ್ ಪರೀಕ್ಷೆ ಪತ್ರಿಕೆ ಮತ್ತು ಸೋರಿಕೆ ಅಕ್ರಮಗಳ ಕುರಿತು ಸುಪ್ರೀಂ ಕೋರ್ಟ್ ಸೋಮವಾರ ಮರು ವಿಚಾರಣೆ ನಡೆಸಿತು. ಗ್ರೇಸ್​ಮಾರ್ಕ್ಸ್​ಗೆ ಕಾರಣವಾದ ಭೌತಶಾಸ್ತ್ರ ಪ್ರಶ್ನೆಯನ್ನು ಅರ್ಜಿದಾರರು ನ್ಯಾಯಾಲಯದ ಗಮನಕ್ಕೆ ತಂದರು. ಒಂದು ಪ್ರಶ್ನೆಗೆ ಎರಡು ಸರಿ ಉತ್ತರಗಳನ್ನು ನೀಡಲಾಗಿದ್ದು, ಒಂದಕ್ಕೆ ಮಾತ್ರ ಅಂಕಗಳನ್ನು ನಿಗದಿಪಡಿಸಲಾಗಿದ್ದು, ಗ್ರೇಸ್ ಅಂಕ ನೀಡಿದರೂ ನೀಡದಿದ್ದರೂ ಮೆರಿಟ್ ಪಟ್ಟಿ ಬದಲಾಗುವ ಸಾಧ್ಯತೆ ಇದೆ ಎಂದು ಅರ್ಜಿದಾರರು ವಾದಿಸಿದರು.

ಇದಕ್ಕೆ ತಕ್ಷಣ ಪ್ರತಿಕ್ರಿಯಿಸಿದ ಪೀಠ, ಸರಿಯಾದ ಉತ್ತರಕ್ಕಾಗಿ ಮೂವರು ತಜ್ಞರನ್ನು ನೇಮಿಸಿ ಆ ಉತ್ತರವನ್ನು ಅವರಿಗೆ ಸಲ್ಲಿಸುವಂತೆ ದೆಹಲಿ-ಐಐಟಿಯ ನಿರ್ದೇಶಕರಿಗೆ ಸೂಚಿಸಿತು.

ಹುಡುಗರಿಬ್ಬರು ಹಳಿ ಮೇಲೆ ಕುಳಿತು ಹಾಡು ಕೇಳುತ್ತಿದ್ದಾಗ ಬಂತು ರೈಲು: ಬಳಿಕ ನಡೆದಿದ್ದು..?

Share This Article

ಹದ್ದಿನ ಕಣ್ಣಿನಂಥ ದೃಷ್ಟಿ ನಿಮ್ಮದಾಗಬೇಕಾ? ಇವು ನಿಮ್ಮ ಆಹಾರದಲ್ಲಿ ಇವೆಯೇ? ಚೆಕ್​ ಮಾಡಿಕೊಳ್ಳಿ

ಬೆಂಗಳೂರು: ಮಾನವನ ಅಂಗಾಂಗಗಳಲ್ಲಿ ಎಲ್ಲವೂ ಮುಖ್ಯವೇ ಆದರೂ ಕಣ್ಣುಗಳು ಪ್ರಮುಖ ಸ್ಥಾನ ಪಡೆದುಕೊಂಡಿವೆ. ಹೀಗಾಗಿಯೇ ಕಣ್ಣುಗಳು…

ಇವುಗಳನ್ನು ತಲೆದಿಂಬಿನ ಕೆಳಗೆ ಇಟ್ಟುಕೊಂಡು ಮಲಗಿದ್ರೆ ಸಾಕು! ಚೆನ್ನಾಗಿ ನಿದ್ದೆ ಜತೆ, ಶ್ರೀಮಂತರಾಗೋದು ಪಕ್ಕಾ!

ಬೆಂಗಳೂರು: ತುರ್ತು ಸಂದರ್ಭಗಳಲ್ಲಿ ಹಣ ಅಥವಾ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.  ಈಗ ಹೇಳಿರುವ ಸರಳ ಪರಿಹಾರಗಳನ್ನು…

ಮನೆಯಲ್ಲಿ ಗುಲಾಬಿ ಗಿಡ ಬೆಳೆಸುತ್ತಿದ್ದೀರಾ? ಈ ವಾಸ್ತು ನಿಯಮಗಳು ಕಡ್ಡಾಯ!

ಬೆಂಗಳೂರು: ಸಾಮಾನ್ಯವಾಗಿ ನಮ್ಮ ಹಿತ್ತಲಿನಲ್ಲಿ ಹಲವು ಬಗೆಯ ಗಿಡಗಳನ್ನು ಬೆಳೆಸುತ್ತೇವೆ. ಗುಲಾಬಿ ಗಿಡಗಳನ್ನು ಇಷ್ಟಪಡದವರೇ ಇಲ್ಲ.…