ಚೆನ್ನೈ:ಕಸದ ರಾಶಿಯಲ್ಲಿ 5 ಲಕ್ಷ ರೂ. ಮೌಲ್ಯದ ವಜ್ರದ ನೆಕ್ಲೇಸ್ ಅನ್ನು ಪೌರಕಾರ್ಮಿಕರು ಪತ್ತೆ ಹಚ್ಚಿರುವ ಘಟನೆ ಚೆನ್ನೈ ನಗರ ವ್ಯಾಪ್ತಿಯಲ್ಲಿ ನಡೆದಿದೆ.
ಇದನ್ನೂ ಓದಿ: ಕನ್ವರ್ ಯಾತ್ರೆ ನಾಮಫಲಕ: ಸುಪ್ರೀಂ ಕೋರ್ಟ್ ತಡೆಗೆ ಎನ್‌ಡಿಎ ಪ್ರಮುಖ ಪಾಲುದಾರ ಪಕ್ಷವೇ ಹರ್ಷ!
ದೇವರಾಜ್ ಎಂಬಾತ ತನ್ನ ಪುತ್ರಿ ಮದುವೆಗೆಂದು 5 ಲಕ್ಷ ರೂ.ಬೆಲೆಯ ವಜ್ರದ ನೆಕ್ಲೇಸ್ ಖರೀದಿಸಿದ್ದರು. ಆದರೆ ಇತ್ತೀಚೆಗೆ ಕಸ ವಿಲೇವಾರಿ ಮಾಡುವಾಗ ಆಕೆಯ ಕೈಯಲ್ಲಿದ್ದ ವಜ್ರದ ನೆಕ್ಲೇಸ್ ಅನ್ನು ಕಸದ ತೊಟ್ಟಿಗೆ ಎಸೆದಿದ್ದಾಳೆ. ತಡವಾಗಿ ವಿಷಯ ಅರಿತ ಕುಟುಂಬಸ್ಥರು ಹುಡುಕಿಕೊಡುವಂತೆ ಚೆನ್ನೈ ಕಾರ್ಪೊರೇಷನ್ ಮೊರೆ ಹೋಗಿದ್ದರು.
ಮಹಾನಗರ ಪಾಲಿಕೆ ಅಧಿಕಾರಿಗಳು ಇದಕ್ಕೆ ತಕ್ಷಣ ಸ್ಪಂದಿಸಿ, ಪೌರಕಾರ್ಮಿಕರನ್ನು ಕಸದ ಡಂಪಿಂಗ್ ಯಾರ್ಡ್‌ಗೆ ಕಳೂಹಿಸಿ ಎಲ್ಲಾ ಕಸದ ಡಬ್ಬಿಗಳನ್ನು ತೆರೆದು ಹುಡುಕಿಸಿದ್ದಾರೆ. ಆಗ ಕಸದಲ್ಲಿ ವಜ್ರದ ನೆಕ್ಲೇಸ್ ಪತ್ತೆಯಾಗಿದೆ.
ಬಳಿಕ ನೆಕ್ಲೇಸ್ ಅನ್ನು ಚೆನ್ನೈ ಕಾರ್ಪೊರೇಷನ್ ಅಧಿಕಾರಿಗಳು ದೇವರಾಜ್ಗೆ ನೀಡಿದ್ದಾರೆ. ತಮ್ಮ ಮನವಿಗೆ ತಕ್ಷಣ ಕ್ರಮ ಕೈಗೊಂಡು ಬೆಲೆಬಾಳುವ ನೆಕ್ಲೆಸ್ ಪತ್ತೆ ಹಚ್ಚಿದ ಪೌರ ಕಾರ್ಮಿಕರು ಮತ್ತು ಅಧಿಕಾರಿಗಳಿಗೆ ಅವರು ಕೃತಜ್ಞತೆ ಸಲ್ಲಿಸಿದ್ದಾರೆ.