ನವದೆಹಲಿ: ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಮಾಜಿ ಪ್ರಾಂಶುಪಾಲ ಸಂದೀಪ್ ಘೋಷ್ ಹಣಕಾಸು ಅಕ್ರಮಗಳ ಬಗ್ಗೆ ಕೇಂದ್ರೀಯ ತನಿಖಾ ದಳ( ಸಿಬಿಐ)ದಿಂದ ತನಿಖೆ ನಡೆಸಲು ಕಲ್ಕತ್ತಾ ಹೈಕೋರ್ಟ್ ನೀಡಿದ್ದ ಆದೇಶವನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ವಜಾಗೊಳಿಸಿದೆ.
ನ್ಯಾಯಮೂರ್ತಿಗಳಾದ ಜೆ.ಬಿ. ಪರ್ದಿವಾಲಾ, ಮನೋಜ್ ಮಿಶ್ರಾ ಮತ್ತು ಸಿಜೆಐ ಡಿ.ವೈ. ಚಂದ್ರಚೂಡ್ ನೇತೃತ್ವದ ಪೀಠವು ಮಾಜಿ ಪ್ರಾಂಶುಪಾಲರ ವಿರುದ್ಧ ತನಿಖೆ ನಡೆಸುವುದನ್ನು ತಡೆಯಲಾಗದು ಎಂದು ತಿಳಿಸಿದೆ.
ಆಗಸ್ಟ್ 23 ರಂದು, ಘೋಷ್ ಪ್ರಾಂಶುಪಾಲರಾಗಿದ್ದ ಅವಧಿಯಲ್ಲಿ ಆರ್‌ಜಿ ಕರ್ ಕಾಲೇಜಿನಲ್ಲಿ ನಡೆದ ಹಣಕಾಸಿನ ಅಕ್ರಮಗಳ ತನಿಖೆಯ ಉಸ್ತುವಾರಿಯನ್ನು ಸಿಬಿಐಗೆ ವಹಿಸುವಂತೆ ಕಲ್ಕತ್ತಾ ಹೈಕೋರ್ಟ್‌ನ ನ್ಯಾಯಮೂರ್ತಿ ರಾಜರ್ಷಿ ಭಾರದ್ವಾಜ್ ಅವರ ಏಕಸದಸ್ಯ ಪೀಠವು ಆದೇಶಿಸಿತ್ತು.
ಆದರೆ ಘೋಷ್ ಏಕಸದಸ್ಯ ಪೀಠದ ಆದೇಶವನ್ನು ಪ್ರಶ್ನಿಸಿ ಹೈಕೋರ್ಟ್ ವಿಭಾಗೀಯ ಪೀಠವನ್ನು ಸಂಪರ್ಕಿಸುವ ಬದಲು ನೇರವಾಗಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಆಗಸ್ಟ್ 25 ರಂದು, ಸಿಬಿಐ ಅಧಿಕಾರಿಗಳು ಘೋಷ್ ಅವರ ನಿವಾಸ ಸೇರಿದಂತೆ ಕೋಲ್ಕತ್ತಾದ ಅನೇಕ ಸ್ಥಳಗಳಲ್ಲಿ ದಾಳಿ ಮತ್ತು ಶೋಧ ಕಾರ್ಯಾಚರಣೆ ನಡೆಸಿದ್ದರು.
ಇಬ್ಬರು ಗಂಡುಮಕ್ಕಳ ಮೃತದೇಹ ಹೊತ್ತು ಕೆಸರಲ್ಲಿ 15ಕಿಮೀ ನಡೆದ ತಂದೆ-ತಾಯಿ!