ದೆಹಲಿ ಹೈಕೋರ್ಟ್​​ ಆದೇಶದ ವಿರುದ್ಧ ಸಿಎಂ ಕೇಜ್ರಿವಾಲ್​ ಸಲ್ಲಿಸಿದ್ದ ಅರ್ಜಿ ವಿಚಾರಣೆ ಮುಂದೂಡಿದ ಸುಪ್ರೀಂಕೋರ್ಟ್​​

blank

ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ತಕ್ಷಣದ ಪರಿಹಾರ ನೀಡಲು ಸುಪ್ರೀಂಕೋರ್ಟ್ ನಿರಾಕರಿಸಿದೆ. ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ಕೆಳ ನ್ಯಾಯಾಲಯ ನೀಡಿದ್ದ ಜಾಮೀನಿಗೆ ತಡೆ ನೀಡಿರುವ ದೆಹಲಿ ಹೈಕೋರ್ಟ್ ಆದೇಶದ ವಿರುದ್ಧ ಕೇಜ್ರಿವಾಲ್ ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆಯನ್ನು ಸುಪ್ರೀಂಕೋರ್ಟ್​​ ಮುಂದೂಡಿದೆ.

ಇದನ್ನು ಓದಿ: ಪ್ರಜಾಪ್ರಭುತ್ವದ ಘನತೆಯನ್ನು ಕಾಪಾಡಿಕೊಳ್ಳುವಂತೆ ಪ್ರತಿಪಕ್ಷಗಳಿಗೆ ಪ್ರಧಾನಿ ಮೋದಿ ಸಲಹೆ

ನ್ಯಾಯಮೂರ್ತಿ ಮನೋಜ್ ಮಿಶ್ರಾ ಮತ್ತು ಎಸ್‌ವಿಎನ್ ಭಟ್ಟಿ ಅವರಿದ್ದ ರಜಾಕಾಲದ ಪೀಠವು ದೆಹಲಿ ಹೈಕೋರ್ಟ್‌ನ ತೀರ್ಪಿಗಾಗಿ ನಾವು ಕಾಯಬೇಕು ಎಂದು ಹೇಳಿದೆ. ಹೈಕೋರ್ಟ್ ತೀರ್ಪನ್ನು ಕಾಯ್ದಿರಿಸಿದ್ದರೆ ನಾವು ಅದರಲ್ಲಿ ಹಸ್ತಕ್ಷೇಪ ಮಾಡುವುದು ಸೂಕ್ತವಲ್ಲ. ಬುಧವಾರ (ಜೂನ್​ 26) ಅರ್ಜಿಯ ವಿಚಾರಣೆ ನಡೆಸುತ್ತೇವೆ ಎಂದು ಪೀಠವು ಹೇಳಿದೆ.

ಕೇಜ್ರಿವಾಲ್ ಪರವಾಗಿ ವಾದ ಮಂಡಿಸಿದ ವಕೀಲ ಅಭಿಷೇಕ್ ಸಿಂಘ್ವಿ, ಇಡಿ ಪ್ರಕರಣದಲ್ಲಿ ಜಾಮೀನು ಆದೇಶಕ್ಕೆ ಹೈಕೋರ್ಟ್ ನೀಡಿರುವ ತಡೆಯಾಜ್ಞೆಯನ್ನು ತೆಗೆದುಹಾಕುವಂತೆ ಸುಪ್ರೀಂಕೋರ್ಟ್‌ಗೆ ಮನವಿ ಮಾಡಿದ್ದಾರೆ. ಈ ಕುರಿತು ಸುಪ್ರೀಂಕೋರ್ಟ್, ಹೈಕೋರ್ಟ್ ಆದೇಶದ ವಿರುದ್ಧ ಕೇಜ್ರಿವಾಲ್ ಸಲ್ಲಿಸಿರುವ ಅರ್ಜಿಯ ಬಗ್ಗೆ ಯಾವುದೇ ಆದೇಶ ನೀಡಿದರೆ, ಅದು ಪ್ರಕರಣಕ್ಕೆ ಪೂರ್ವಾಗ್ರಹ ಪಡಿಸುತ್ತದೆ ಎಂದು ಹೇಳಿದೆ. ಇದೇ ವೇಳೆ ಜಾರಿ ನಿರ್ದೇಶನಾಲಯದ ಪರ ವಾದ ಮಂಡಿಸಿದ ಎಎಸ್‌ಜಿ ಎಸ್‌ವಿ ರಾಜು, ಹೈಕೋರ್ಟ್‌ನ ಆದೇಶ ಒಂದೆರೆಡು ದಿನದಲ್ಲಿ ಬರಲಿದೆ ಎಂದು ಸುಪ್ರೀಂ ಕೋರ್ಟ್‌ಗೆ ತಿಳಿಸಿದರು.

ಆಮ್ ಆದ್ಮಿ ಪಕ್ಷದ (ಎಎಪಿ) ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಅವರನ್ನು ಮಾರ್ಚ್ 21ರಂದು ಇಡಿ ಬಂಧಿಸಿತ್ತು. ಹೈಕೋರ್ಟ್ ಶುಕ್ರವಾರ ಇಡಿಗೆ ಮಧ್ಯಂತರ ಪರಿಹಾರ ನೀಡದಿದ್ದರೆ, ಕೇಜ್ರಿವಾಲ್ ಶುಕ್ರವಾರ ತಿಹಾರ್ ಜೈಲಿನಿಂದ ಹೊರಬರಬಹುದಿತ್ತು. ಈ ಆದೇಶದವರೆಗೆ ತಡೆಹಿಡಿದ ಆದೇಶದ ಅನುಷ್ಠಾನವನ್ನು ಮುಂದೂಡಲಾಗುವುದು ಎಂದು ಹೈಕೋರ್ಟ್‌ನ ರಜಾಕಾಲದ ಪೀಠ ಹೇಳಿತ್ತು. ಜೂನ್ 24ರೊಳಗೆ ಲಿಖಿತ ವರದಿ ಸಲ್ಲಿಸುವಂತೆ ಎರಡೂ ಪಕ್ಷಗಳಿಗೆ ಹೈಕೋರ್ಟ್ ಸೂಚಿಸಿತ್ತು. ಇಡೀ ಪ್ರಕರಣದ ದಾಖಲೆಗಳನ್ನು ಪರಿಶೀಲಿಸಲು ಬಯಸಿರುವ ಕಾರಣ ಆದೇಶವನ್ನು ಎರಡು-ಮೂರು ದಿನಕ್ಕೆ ಕಾಯ್ದಿರಿಸಲಾಗುತ್ತಿದೆ ಎಂದು ಹೇಳಲಾಗಿದೆ. (ಏಜೆನ್ಸೀಸ್​​)

ಕಲ್ಕಿ 2898 AD; ಟಿಕೆಟ್ ದರ ಏರಿಕೆ ಜತೆಗೆ ವಿಶೇಷ ಪ್ರದರ್ಶನಕ್ಕೆ ಅವಕಾಶ.. ಎಷ್ಟಿದೆ ಗೊತ್ತಾ ?

Share This Article

ನಿಮ್ಮ ಮಕ್ಕಳಿಗೆ ಪ್ರತಿನಿತ್ಯ ಟೀ ಕೊಡ್ತಿದ್ದೀರಾ? ಹೌದು ಎಂದಾದರೆ ಈ ವಿಚಾರಗಳು ನಿಮಗೆ ತಿಳಿದಿರಲೇಬೇಕು! Tea

Tea : ಜಗತ್ತಿನ ಬಹುತೇಕ ಜನರ ದಿನ ಆರಂಭವಾಗುವುದೇ ಟೀ ಅಥವಾ ಕಾಫಿಯಿಂದ. ದಿನಕ್ಕೆ ಒಂದು…

ನಿಮಗೆ ದೃಷ್ಟಿ ದೋಷವಾಗಿದ್ರೆ..ನಿಂಬೆ ಹಣ್ಣಿನಿಂದ ಹೀಗೆ ಮಾಡಿದರೆ ಸಾಕು! Drishti Dosha

Drishti Dosha: ಸಾಮಾನ್ಯವಾಗಿ ಕೆಟ್ಟ ದೃಷ್ಟಿ ಬಿದ್ದಿದೆ ಎಂಬ ಪದವನ್ನು ನಾವು ಸಾಮಾನ್ಯವಾಗಿ ಕೇಳುತ್ತಿರುತ್ತೇವೆ. ಮನೆ ವ್ಯವಹಾರ,…

ನೀವು ಈ ದಿನಾಂಕಗಳಲ್ಲಿ ಹುಟ್ಟಿದ್ದೀರಾ? ಹಾಗಾದರೆ 2025ರಲ್ಲಿ ನಿಮಗೆ ಅದೃಷ್ಟೋ ಅದೃಷ್ಟ… ಹಣದ ಸುಗ್ಗಿ ಗ್ಯಾರಂಟಿ! Numerology

Numerology : ಸಾಮಾನ್ಯವಾಗಿ ನಮ್ಮ ನಡುವೆ ಜಾತಕವನ್ನು ನಂಬುವಂತಹ ಅನೇಕ ಜನರಿದ್ದಾರೆ. ಅದೇ ರೀತಿ ನಂಬದವರು…