ಹೈದರಾಬಾದ್: ರೆಬೆಲ್ ಸ್ಟಾರ್ ಪ್ರಭಾಸ್ ಅಭಿನಯದ ಬಹು ನಿರೀಕ್ಷಿತ ಚಿತ್ರ ಕಲ್ಕಿ 2898 AD ಇದೇ ತಿಂಗಳ 27 ರಂದು ಬಿಡುಗಡೆಯಾಗಲಿದೆ. ಈಗಾಗಲೇ ಬಿಡುಗಡೆಯಾಗಿರುವ ಪೋಸ್ಟರ್ಗಳು ಸಿನಿಮಾದ ಬಗ್ಗೆ ಕುತೂಹಲ ಮೂಡಿಸಿದ್ದರೆ, ಇತ್ತೀಚೆಗಷ್ಟೇ ಬಿಡುಗಡೆಯಾಗಿರುವ ಎರಡು ಟ್ರೇಲರ್ ಗಳು ಸಿನಿಮಾದ ಬಗ್ಗೆ ನಿರೀಕ್ಷೆ ಹೆಚ್ಚಿಸಿವೆ. ಸಿನಿಮಾದಲ್ಲಿ ಅಮಿತಾಬ್ ಬಚ್ಚನ್, ಕಮಲ್ ಹಾಸನ್, ದೀಪಿಕಾ ಪಡುಕೋಣೆ, ದಿಶಾ ಪಟಾನಿ ಮತ್ತು ಬ್ರಹ್ಮಾನಂದಂ ಸೇರಿದಂತೆ ಬಹುತಾರಾಗಣವಿದೆ.
ಇದನ್ನು ಓದಿ: ಯಾರೀ ಕಂಗನಾ.. ಸುಂದರಿಯೇ? ಎಂಬ ಅಣ್ಣಾ ಕಪೂರ್ ಪ್ರಶ್ನೆಗೆ ‘ಕ್ವೀನ್’ ಉತ್ತರಿಸಿದ್ದು ಹೀಗೆ..
ಇತ್ತೀಚೆಗೆ ಚಿತ್ರ ನಿರ್ಮಾಣ ಸಂಸ್ಥೆ ವೈಜಯಂತಿ ಮೂವೀಸ್ ತೆಲಂಗಾಣದಲ್ಲಿ ಇದೇ ತಿಂಗಳ 27ರಿಂದ ಮುಂದಿನ ತಿಂಗಳ 4ರವರೆಗೆ ವಿಶೇಷ ಪ್ರದರ್ಶನಗಳನ್ನು ಆಯೋಜಿಸಲು ಮತ್ತು ಟಿಕೆಟ್ ದರ ಏರಿಕೆಗೆ ಅನುಮತಿ ನೀಡುವಂತೆ ರಾಜ್ಯ ಗೃಹ ಇಲಾಖೆಗೆ ಮನವಿ ಮಾಡಿದೆ. ಮನವಿಗೆ ಸ್ಪಂಧಿಸಿದ ರಾಜ್ಯ ಗೃಹ ಸಚಿವಾಲಯವು ಕಲ್ಕಿ 2898 AD ವಿಶೇಷ ಶೋಗಳಿಗೆ ಗ್ರೀನ್ ಸಿಗ್ನಲ್ ನೀಡಿದೆ.
ರಾಜ್ಯ ಗೃಹ ಇಲಾಖೆ ಪ್ರಧಾನ ಕಾರ್ಯದರ್ಶಿ ಡಾ.ಜಿತೇಂದರ್ ಶನಿವಾರ(ಜೂನ್ 22) ಆದೇಶ ಹೊರಡಿಸಿದ್ದಾರೆ. ಈ ಆದೇಶದಲ್ಲಿ ತೆಲಂಗಾಣ ಸರ್ಕಾರ ಕಲ್ಕಿ ಸಿನಿಮಾ ಟಿಕೆಟ್ ಮೇಲೆ ಗರಿಷ್ಠ ರೂ.200 ಹೆಚ್ಚಳ ಮಾಡಲು ಅವಕಾಶ ನೀಡಿದೆ. ಸಿಂಗಲ್ ಸ್ಕ್ರೀನ್ ಥಿಯೇಟರ್‌ಗಳಲ್ಲಿ 75 ರೂಪಾಯಿವರೆಗೆ ಮತ್ತು ಮಲ್ಟಿಪ್ಲೆಕ್ಸ್‌ಗಳಲ್ಲಿ 100 ರೂಪಾಯಿವರೆಗೆ ಹೆಚ್ಚಿಸಬಹುದು ಎಂದು ಹೇಳಿದೆ.
ಇದಲ್ಲದೇ ಇದೇ ತಿಂಗಳ 27ರಂದು ಬೆಳಗ್ಗೆ 5.30ರ ಶೋಗೆ ತೆಲಂಗಾಣ ಸರ್ಕಾರ ಅನುಮತಿ ನೀಡಿದೆ. ಒಂದು ವಾರಕ್ಕೆ ಐದು ಶೋಗಳನ್ನು ಆಯೋಜಿಸಲು ಆದೇಶ ಹೊರಡಿಸಿದೆ. ಆದೇಶದ ಪ್ರಕಾರ, ಬೆನಿಫಿಟ್ ಶೋಗೆ ಒಂದು ಟಿಕೆಟ್ ಸಿಂಗಲ್ ಸ್ಕ್ರೀನ್ ಥಿಯೇಟರ್‌ನಲ್ಲಿ 377 ರೂ. ಮತ್ತು ಮಲ್ಟಿಪ್ಲೆಕ್ಸ್‌ಗಳಲ್ಲಿ 495 ರೂ. ಆಗಲಿದೆಯಂತೆ. ಇನ್ನುಳಿದ ದಿನಗಳಲ್ಲಿ ಸಿಂಗಲ್ ಸ್ಕ್ರೀನ್ ಥಿಯೇಟರ್‌ಗಳಲ್ಲಿ 265 ರೂ ಹಾಗೂ ಮಲ್ಟಿಪ್ಲೆಕ್ಸ್‌ಗಳಲ್ಲಿ 413 ರೂ. ಇದಲ್ಲದೆ, ಆನ್‌ಲೈನ್ ಬುಕಿಂಗ್ ಮತ್ತು 3D ಗ್ಲಾಸ್ ಶುಲ್ಕಗಳು ಹೆಚ್ಚುವರಿ ದರ ಆಗಲಿದೆ. ಇದನ್ನು ನೋಡಿದರೆ ತೆಲಂಗಾಣದಲ್ಲಿ ಕಲ್ಕಿ ಚಿತ್ರದ ಟಿಕೆಟ್ ದರ 500 ರೂ.ಗಿಂತ ಹೆಚ್ಚಾಗಿರುತ್ತದೆ ಎನ್ನಲಾಗಿದೆ. ಇನ್ನು ಒಂದೆಡೆ ಸಿನಿಮಾ ರಿಲೀಸ್ ಬಗ್ಗೆ ಅಭಿಮಾನಿಗಳು ಆನಂದ ವ್ಯಕ್ತಪಡಿಸುತ್ತಿದ್ದರೆ. ಇನ್ನೊಂದೆಡೆ ಕೆಲವರು ಟಿಕೆಟ್ ದರ ಏರಿಕೆಗೆ ಬೇಸರ ವ್ಯಕ್ತಪಡಿಸಿದ್ದಾರೆ. (ಏಜೆನ್ಸೀಸ್)
ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ಗೆ ಮತ ಚಲಾಯಿಸಿರುವುದು ಅದೊಂದೆ ಏಕೈಕ ಸಮುದಾಯ; ಸಿಎಂ ಹಿಮಂತ ಬಿಸ್ವಾ ಶರ್ಮಾ