More

  ಯಾರೀ ಕಂಗನಾ.. ಸುಂದರಿಯೇ? ಎಂಬ ಅಣ್ಣಾ ಕಪೂರ್​​ ಪ್ರಶ್ನೆಗೆ ‘ಕ್ವೀನ್​​’ ಉತ್ತರಿಸಿದ್ದು ಹೀಗೆ..

  ಮುಂಬೈ: ನಟಿ ಕಂಗನಾ ರಣಾವತ್ ಕಪಾಳಮೋಕ್ಷ ವಿಷಯದ ಚರ್ಚೆ ಸದ್ಯ ನಿಲ್ಲುತ್ತಿಲ್ಲ. ಈ ವಿಚಾರವಾಗಿ ಎಲ್ಲರೂ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ. ಕೆಲವರು ಸಿಐಎಸ್‌ಎಫ್ ಸಿಬ್ಬಂದಿಗೆ ಬೆಂಬಲ ನೀಡಿದರೆ, ಕೆಲವರು ಕಂಗನಾ ರಣಾವತ್​​ ಅವರನ್ನು ಬೆಂಬಲಿಸಿದ್ದಾರೆ. ಈ ಹಿಂದೆ ಸಿಐಎಸ್‌ಎಫ್ ಸಿಬ್ಬಂದಿಗೆ ಬೆಂಬಲ ನೀಡಿದವರಿಗೆ ನಟಿ ತೀವ್ರವಾಗಿ ಛೀಮಾರಿ ಹಾಕಿದ್ದರು. ಇನ್ನು ಇದೇ ವಿಷಯಕ್ಕೆ ಪ್ರತಿಕ್ರಿಯಿಸಿರುವ ನಟ ಅಣ್ಣು ಕಪೂರ್​ ಹೇಳಿಕೆಗೆ ನಟಿ ಕಂಗನಾ ಪ್ರತಿಕ್ರಿಯೆ ನೀಡಿದ್ದಾರೆ.

  ಇದನ್ನು ಓದಿ: ಕೇಂದ್ರ ಸರ್ಕಾರದಿಂದ ಪರೀಕ್ಷಾ ಕಾನೂನು ಜಾರಿ; ಕಾಂಗ್ರೆಸ್​ ನಾಯಕ ಜೈರಾಮ್​​ ರಮೇಶ್​ ಹೇಳಿದ್ದೇನು?

  ಅಣ್ಣು ಕಪೂರ್​ ನಟನೆಯ ಹಮಾರೆ ಬಾರಾ ಸಿನಿಮಾ ಸುದೀರ್ಘ ವಿವಾದಗಳ ಬಳಿಕ ಅಂತಿಮವಾಗಿ ಶುಕ್ರವಾರ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. ಚಿತ್ರ ಬಿಡುಗಡೆಗೂ ಮುನ್ನ ಈ ಕುರಿತು ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ ಚಿತ್ರತಂಡಕ್ಕೆ ಹಲವು ಪ್ರಶ್ನೆಗಳನ್ನು ಕೇಳಲಾಗಿದೆ. ಈ ಸಮಯದಲ್ಲಿ ಬಾಲಿವುಡ್ ನಟ ಅಣ್ಣು ಕಪೂರ್ ಅವರಿಗೆ ಕಂಗನಾ ರಣಾವತ್‌ಗೆ ಕಪಾಳಮೋಕ್ಷ ಮಾಡಿದ ಘಟನೆಯ ಬಗ್ಗೆ ಪ್ರಶ್ನಿಸಲಾಗಿದೆ.

  ಅದಕ್ಕೆ ಅಣ್ಣು ಕಪೂರ್​ ಅವರು, ಯಾರು ಈ ಕಂಗನಾ ಜೀ? ಅವರು ಯಾರೆಂದು ದಯವಿಟ್ಟು ಹೇಳಿ? ನಿಸ್ಸಂಶಯವಾಗಿ ನೀವು ಕೇಳುತ್ತಿದ್ದೀರಿ ಎಂದರೆ ಯಾರಾದರೂ ದೊಡ್ಡ ನಾಯಕಿಯೇ ಇರಬೇಕು? ಸುಂದರವಾಗಿದ್ದಾರೆಯೇ ಎಂದು ಕೇಳಿದ್ದಾರೆ. ಅದಕ್ಕೆ ಕಂಗನಾ ಈಗ ಮಂಡಿಯಿಂದ ಹೊಸದಾಗಿ ಆಯ್ಕೆಯಾದ ಸಂಸದರಾಗಿದ್ದಾರೆ ಎಂದು ಹೇಳಿದವರಿಗೆ ಅಣ್ಣು ಕಪೂರ್​, ‘ಓಹೋ ಭೀ ಹೋ ಗಯಿ! ಅಭಿ ತೋ ಬಹುತ್ ಶಕ್ತಿಶಾಲಿ ಹೋ ಗಯಿ ಹೈ. (ಈಗ ಅವರು ಸಂಸದರೂ ಆಗಿದ್ದಾರೆಯೇ? ಈಗ ತುಂಬಾ ಶಕ್ತಿಶಾಲಿಯಾಗಿದ್ದಾರೆ) ಅವಳು ಸುಂದರವಾಗಿದ್ದಾಳೆ ಎಂದು ನಾನು ಈಗಾಗಲೇ ಅಸೂಯೆ ಹೊಂದಿದ್ದೇನೆ. ಅದರ ಮೇಲೆ ಅವಳು ಅಧಿಕಾರವನ್ನು ಹೊಂದಿದ್ದಾಳೆ ಎಂದಿದ್ದಾರೆ. ಅದಷ್ಟೆ ಅಲ್ಲದೆ ಕಪಾಳಮೋಕ್ಷ ಮಾಡಿದ ಆರೋಪಿ ವಿರುದ್ಧ ಆಕೆ ಖಂಡಿತವಾಗಿಯೂ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ನಾನು ಭಾವಿಸುತ್ತೇನೆ ಎಂದು ಹೇಳಿದ್ದಾರೆ.

  See also  ಕಾಂಡೋಮ್​ ಟೆಸ್ಟರ್​ ಪಾತ್ರದ ಬಗ್ಗೆ ಪಾಲಕರ ಪ್ರತಿಕ್ರಿಯೆ ಹೇಗಿತ್ತು? ರಾಕುಲ್​ ಹೇಳಿದ ಅಚ್ಚರಿಯ ಮಾತುಗಳಿವು..

  ನಟಿ ಕಂಗನಾ, ಅಣ್ಣು ಕಪೂರ್​ ಅವರು ಪ್ರತಿಕ್ರಿಯಿಸಿರುವ ವೀಡಿಯೊವನ್ನು ತಮ್ಮ ಇನ್​​ಸ್ಟಾಗ್ರಾಮ್​​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ವೀಡಿಯೊವನ್ನು ಹಂಚಿಕೊಳ್ಳುವಾಗ ಕಂಗನಾ ಅವರಿಗೆ ತಿರುಗೇಟು ನೀಡಿದ್ದಾರೆ. ನಾನು ಈಗಾಗಲೇ ಅಸೂಯೆ ಹೊಂದಿದ್ದೇನೆ ಎಂಬ ಅಣ್ಣು ಕಪೂರ್ ಅವರ ಮಾತನ್ನು ನೀವು ಒಪ್ಪುತ್ತೀರಾ ಎಂದು ಕೇಳಿದ್ದಾರೆ. ಅದೇ ಸಮಯದಲ್ಲಿ ಅವಳು ಸುಂದರವಾಗಿದ್ದರೆ, ಅನೇಕರು ಅವಳನ್ನು ಹೆಚ್ಚು ದ್ವೇಷಿಸುತ್ತಾರೆ ಮತ್ತು ಅವಳು ಶಕ್ತಿಶಾಲಿಯಾಗಿದ್ದರೆ, ಅನೇಕರು ಅವಳನ್ನು ಹೆಚ್ಚೆಚ್ಚು ದ್ವೇಷಿಸುತ್ತಾರೆ. ಅದು ನಿಜವೆ ಎಂದು ಹಂಚಿಕೊಂಡಿರುವ ಪೋಸ್ಟ್​ನಲ್ಲಿ ಬರೆದಿದ್ದಾರೆ.

  ಯಾರೀ ಕಂಗನಾ.. ಸುಂದರಿಯೇ? ಎಂಬ ಅಣ್ಣಾ ಕಪೂರ್​​ ಪ್ರಶ್ನೆಗೆ 'ಕ್ವೀನ್​​' ಉತ್ತರಿಸಿದ್ದು ಹೀಗೆ..

  ಕೆಲ ದಿನಗಳ ಹಿಂದೆ ಚಂಡೀಗಢ ವಿಮಾನ ನಿಲ್ದಾಣದಲ್ಲಿ ಸಿಐಎಸ್‌ಎಫ್ ಮಹಿಳಾ ಭದ್ರತಾ ಸಿಬ್ಬಂದಿ ಕಂಗನಾ ರಣಾವತ್​​ ಅವರಿಗೆ ಕಪಾಳಮೋಕ್ಷ ಮಾಡಿದ್ದರು. ಈ ಘಟನೆಯ ನಂತರ ಶಬಾನಾ ಅಜ್ಮಿ, ಕರಣ್ ಜೋಹರ್ ಸೇರಿದಂತೆ ಅನೇಕ ಗಣ್ಯರು ಇದನ್ನು ಖಂಡಿಸಿದರು. ಅದೇ ಸಮಯದಲ್ಲಿ ವಿಶಾಲ್ ದದ್ಲಾನಿ ಸೇರಿದಂತೆ ಕೆಲವರು ಸಿಐಎಸ್ಎಫ್ ಸಿಬ್ಬಂದಿಯನ್ನು ಬಹಿರಂಗವಾಗಿ ಬೆಂಬಲಿಸಿದರು.(ಏಜೆನ್ಸೀಸ್​​)

  ಸೇಡಿನ ರಾಜಕೀಯ ಎಂಬ ಜಗನ್​​ ಆರೋಪಕ್ಕೆ ಟಿಡಿಪಿ ಕೊಟ್ಟ ಉತ್ತರ ಏನು ಗೊತ್ತಾ?

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts