ನವದೆಹಲಿ: ಸಂಸತ್ತಿನಲ್ಲಿ ಮೋದಿ 3.0 ಸರ್ಕಾರದ ಮೊದಲ ಅಧಿವೇಶನವು ಇಂದಿನಿಂದ (ಜೂನ್ 24) ಆರಂಭವಾಗಿದೆ. ದೇಶದ ಜನತೆ ಜವಾಬ್ದಾರಿಯುತ ಪ್ರತಿಪಕ್ಷವನ್ನು ಬಯಸುತ್ತಾರೆಯೇ ಹೊರತು ತಂತ್ರ, ನಾಟಕ, ಘೋಷಣೆಗಳಲ್ಲ ಎಂದು 18ನೇ ಲೋಕಸಭೆಯ ಸಂಸತ್ ಅಧಿವೇಶನದ ಆರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಇದನ್ನು ಓದಿ: ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ಗೆ ಮತ ಚಲಾಯಿಸಿರುವುದು ಅದೊಂದೆ ಏಕೈಕ ಸಮುದಾಯ; ಸಿಎಂ ಹಿಮಂತ ಬಿಸ್ವಾ ಶರ್ಮಾ
ಅಧಿವೇಶನದ ಕಲಾಪಕ್ಕೆ ಅಡ್ಡಿಯಾಗದಂತೆ ಪ್ರಜಾಪ್ರಭುತ್ವದ ಘನತೆಯನ್ನು ಕಾಪಾಡಿಕೊಳ್ಳುವಂತೆ ಪ್ರಧಾನಿ ಮೋದಿ ಅವರು ಕಾಂಗ್ರೆಸ್ ಸೇರಿದಂತೆ ಪ್ರತಿಪಕ್ಷಗಳಿಗೆ ಕರೆ ನೀಡಿದರು. ದೇಶದ ಜನರು ಸಂಸತ್ತಿನ ಸದಸ್ಯರಿಂದ ಚರ್ಚೆ ಮತ್ತು ಪರಿಶ್ರಮವನ್ನು ನಿರೀಕ್ಷಿಸುತ್ತಾರೆಯೇ ಹೊರತು ಗೊಂದಲ ಮತ್ತು ಅಶಾಂತಿಯನಲ್ಲ. ಸಂಸದರಿಂದ ಕೆಲಸಗಳನ್ನು ಬಯಸುತ್ತಾರೆಯೇ ಹೊರತು ಘೋಷಣೆಗಳನ್ನಲ್ಲ. ಸಂಸದರು ಸಾಮಾನ್ಯ ಜನರ ನಿರೀಕ್ಷೆಗಳನ್ನು ಪೂರೈಸುತ್ತಾರೆ ಎಂಬ ವಿಶ್ವಾಸವಿದೆ ಎಂದು ಹೇಳಿದರು.
ಭಾರತಕ್ಕೆ ಜವಾಬ್ದಾರಿಯುತ ವಿರೋಧ ಪಕ್ಷದ ಅಗತ್ಯವಿದೆ. ಜನರಿಗೆ ಘೋಷಣೆಗಳು ಬೇಡ, ಚರ್ಚೆ ಬೇಕು, ಕಠಿಣ ಪರಿಶ್ರಮ ಬೇಕು, ಸಂಸತ್ತಿನಲ್ಲಿ ಅಶಾಂತಿ ಬೇಡ. ಪ್ರತಿಪಕ್ಷಗಳಿಂದ ಜನರು ಒಳ್ಳೆಯ ಹೆಜ್ಜೆಗಳನ್ನು ನಿರೀಕ್ಷಿಸುತ್ತಾರೆ. ಇದು ಇಲ್ಲಿಯವರೆಗೆ ನಿರಾಶಾದಾಯಕವಾಗಿದೆ, ಆದರೆ ಅದು ತನ್ನ ಪಾತ್ರವನ್ನು ನಿರ್ವಹಿಸಿ ಪ್ರಜಾಪ್ರಭುತ್ವದ ಘನತೆಯನ್ನು ಕಾಪಾಡುತ್ತದೆ ಎಂದು ಭಾವಿಸುತ್ತೇನೆ ಎಂದಿದ್ದಾರೆ.
2024ರ ಲೋಕಸಭೆ ಚುನಾವಣೆಯ ನಂತರ ನಡೆದ ಮೊದಲ ಸಂಸತ್ ಅಧಿವೇಶನದಲ್ಲಿ ಪ್ರಧಾನಿ ಮೋದಿ ಸೇರಿದಂತೆ ಹೊಸದಾಗಿ ಚುನಾಯಿತ ಸಂಸದರು ಪ್ರಮಾಣವಚನ ಸ್ವೀಕರಿಸಿದರು. ಇದರ ನಂತರ ಜೂನ್ 26ರಂದು ಲೋಕಸಭೆಯ ಸ್ಪೀಕರ್ ಆಯ್ಕೆ ಮತ್ತು ಜೂನ್ 27ರಂದು ಉಭಯ ಸದನಗಳ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಅಧ್ಯಕ್ಷ ದ್ರೌಪದಿ ಮುರ್ಮು ಅವರ ಭಾಷಣ ನಡೆಯಲಿದೆ.(ಏಜೆನ್ಸೀಸ್)