ಬಾಲಿವುಡ್ ​ಹೆಸರಾಂತ ನಟನ ಸಿನಿಮಾದಲ್ಲಿ ಸೌತ್​ ಬ್ಯೂಟಿ ಸಮಂತಾ​​​?

Untitled-design-2024-06-23T184005.295
Published on

ಮುಂಬೈ: ಸೌತ್​ ಬ್ಯೂಟಿ ಸಮಂತಾ ಮೈಯೋಸಿಟಿಸ್ ಸಮಸ್ಯೆಯಿಂದ ಚೇತರಿಸಿಕೊಳ್ಳಲು ಹಲವು ದಿನಗಳಿಂದ ಸೈಲೆಂಟ್​​ ಆಗಿದದ್ದು ಗೊತ್ತೆ ಇದೆ. ಈಗ ಮತ್ತೆ ನಟಿ ತಮ್ಮ ಇನ್ನಿಂಗ್ಸ್​​ ಸ್ಟಾರ್ಟ್​ ಮಾಡುತ್ತಿದ್ದಾರೆ. ವರುಣ್ ಧವನ್ ಅಭಿನಯದ ಸಮಂತಾ ಅವರ 'ಸಿಟಾಡೆಲ್' ಸರಣಿಯ ಚಿತ್ರೀಕರಣ ಮುಗಿದಿದ್ದು, ಶೀಘ್ರದಲ್ಲೇ ಪರದೆ ಮೇಲೆ ಬರಲಿದೆ. ಇನ್ನೊಂದೆಡೆ ಸ್ಯಾಮ್ ತಮ್ಮದೇ ಆದ ‘ಮಾ ಇಂತಿ ಬಂಗಾರಂ’ ಸಿನಿಮಾವನ್ನೂ ಅನೌನ್ಸ್ ಮಾಡಿರುವುದು ಎಲ್ಲರಿಗೂ ತಿಳಿದಿರುವ ವಿಚಾರವೇ ಆಗಿದೆ. ಇದರ ಜತೆಗೆ ಈ ಮಧ್ಯೆ ಮಲಯಾಳಂನ ಸೂಪರ್ ಸ್ಟಾರ್ ಮಮ್ಮುಟ್ಟಿ ಅವರಿಗೆ ಸಿನಿಮಾದಲ್ಲಿ ಸ್ಯಾಮ್ ಅವಕಾಶ ಸಿಕ್ಕಿದೆಯಂತೆ. ಆದರೆ, ಅದರ ಬಗ್ಗೆ ಇದುವರೆಗೂ ಯಾವುದೇ ಅಧಿಕೃತ ಘೋಷಣೆ ಹೊರಬಂದಿಲ್ಲ. ಇದೇ ವೇಳೆ ಈಗ ಬಿಟೌನ್​ನಿಂದ ಮತ್ತೊಂದು ಸುದ್ದಿ ಹೊರಬಿದ್ದಿದೆ.

ಬಾಲಿವುಡ್​ನಿಂದ ನಟಿ ಸಮಂತಾಗೆ ಕ್ರೇಜಿ ಚಾನ್ಸ್​ ಸಿಕ್ಕಿದೆಯಂತೆ. ಅದರಲ್ಲೂ ಅವರು ಇಷ್ಟಪಡುವ ನಾಯಕರಲ್ಲಿ ಒಬ್ಬರಾದ ಬಿಟೌನ್​​ ನಟನ ಜತೆ ಸ್ಕ್ರೀನ್​ ಶೇರ್​ ಮಾಡಲು ಸ್ಯಾಮ್​​ಗೆ ಅವಕಾಶ ಸಿಕ್ಕಿದೆ ಅಂತೆ. ಬಾಲಿವುಡ್​​ ಕಿಂಗ್​ಖಾನ್​​ ಜತೆ ನಟಿಸಲು ಅವಕಾಶ ಸಿಕ್ಕಿದೆ ಎಂಬ ಸುದ್ದಿ ಬಂದಿದೆ. ಶಾರೂಖ್​​ ಖಾನ್​​​ ಕಳೆದ ವರ್ಷ ನಯನತಾರಾ ಜತೆ ತೆರೆ ಹಂಚಿಕೊಂಡಿದ್ದರು. ಇದೀಗ ಅವರ ಮತ್ತೊಂದು ಪ್ರಾಜೆಕ್ಟ್​​ಗೆ ಸೌತ್​ ನಾಯಕಿ ಆಯ್ಕೆಯಾಗಿದ್ದಾರೆ. ಶಾರೂಖ್​ ಖಾನ್​ ಜತೆ ನಟಿ ಸಮಂತಾ ನಟಿಸಲಿದ್ದಾರಂತೆ ಎಂಬ ಸುದ್ದಿ ಬಿಟೌನ್​ನಲ್ಲಿ ಸದ್ದು ಮಾಡುತ್ತಿದೆ.

ಆ್ಯಕ್ಷನ್ ಅಡ್ವೆಂಚರ್ ಜತೆಗೆ ದೇಶಭಕ್ತಿಯ ಸಿನಿಮಾವನ್ನು ಬಾಲಿವುಡ್​​ನ ಟಾಪ್ ಡೈರೆಕ್ಟರ್ ರಾಜ್​​ಕುಮಾರ್​​ ಹಿರಾನಿ ನಿರ್ದೇಶನ ಮಾಡಲಿದ್ದಾರೆ ಎನ್ನಲಾಗಿದೆ. ಈ ಹಿಂದೆ ಶಾರೂಖ್-ರಾಜ್​ ಕುಮಾರ್​​ ಹಿರಾನಿ ಕಾಂಬಿನೇಷನ್​ನಲ್ಲಿ ಡುಂಕಿ ರಿಲೀಸ್ ಆಗಿದೆ. ಅಲ್ಲದೆ ಬಾಲಿವುಡ್​ ಅಂಗಳದಲ್ಲಿ ಕೇಳಿಬರುತ್ತಿರುವ ಟಾಕ್​ ಪ್ರಕಾರ ಈ ಚಿತ್ರದಲ್ಲಿ ಶಾರೂಖ್​ ಖಾನ್​ ಜತೆ ಸಮಂತಾ ನಟಿಸಲಿದ್ದಾರೆ. ಈ ಬಗ್ಗೆ ಸಂಪೂರ್ಣ ಮಾಹಿತಿ ಇನ್ನಷ್ಟೇ ತಿಳಿಯಬೇಕಿದೆ. ಆಗಸ್ಟ್ 15 ರಂದು ಈ ಚಿತ್ರದ ಬಗ್ಗೆ ಅಧಿಕೃತ ಘೋಷಣೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಈಗಾಗಲೇ ಅಮೆಜಾನ್ ವೆಬ್ ಸೀರಿಸ್ ಮೂಲಕ ಬಾಲಿವುಡ್​ಗೆ ಹತ್ತಿರವಾಗಿರುವ ಸಮಂತಾ ಶಾರೂಖ್​ ಜತೆ ರೊಮ್ಯಾನ್ಸ್ ಮಾಡಿದರೆ ಖಂಡಿತಾ ಬಾಲಿವುಡ್​​ನಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಳ್ಳುವುದರಲ್ಲಿ ಸಂದೇಹ ವಿಲ್ಲ ಎನ್ನುತ್ತಿದ್ದಾರೆ ಅಭಿಮಾನಿಗಳು. ಇದರಲ್ಲಿ ನಿಜ ಏನೆಂಬುದು ತಿಳಿಯಬೇಕಿದೆ. (ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net