More

    ಒಂದೇ ತಿಂಗಳಲ್ಲಿ ಎರಡು ಬಾರಿ ಗರ್ಭಿಣಿ; ಅಚ್ಚರಿ ಎನಿಸಿದರೂ ಇದು ಸತ್ಯ..!

    ಅಮೆರಿಕ: ಮಹಿಳೆಯೊಬ್ಬರು ಒಂದೇ ತಿಂಗಳಲ್ಲಿ ಎರಡು ಬಾರಿ ಗರ್ಭಿಣಿಯಾಗಿದ್ದು, ಮುದ್ದಾದ ಮಕ್ಕಳಿಗೆ ಜನ್ಮ ನೀಡಿದ್ದಾರೆ. ಈ ಸುದ್ದಿ ಅಚ್ಚರಿ ಮೂಡಿಸುವುದರ ಜೆತೆಗೆ ಇದು ಹೇಗೆ ಸಾಧ್ಯ ಎನ್ನುವ ಪ್ರಶ್ನೆಯನ್ನು ಮೂಡಿಸಿದೆ.

    ಗರ್ಭಿಣಿ ಸೋಫಿ ಸ್ಮಾಲ್​​ಳನ್ನು ಮೊದಲ ಬಾರಿಗೆ ಪರಿಶೀಲನೆ ಮಾಡಿದ ವೈದ್ಯರು, ಹುಟ್ಟುವ ಮೊದಲು ಸ್ಕ್ಯಾನ್‌ಗಳಲ್ಲಿ ಮಕ್ಕಳು ವಿಭಿನ್ನ ಗಾತ್ರಗಳಲ್ಲಿರುವುದನ್ನು ನೋಡಿ ಗೊಂದಲಕ್ಕೊಳಗಾದರು. ಮಹಿಳೆ 28 ದಿನಗಳ ಅಂತರದಲ್ಲಿ ತನ್ನ ಮಕ್ಕಳಿಗೆ ಗರ್ಭಧರಿಸಿದಳು. ನಂತರ ಇಬ್ಬರು ಮಕ್ಕಳಿಗೆ ಜನ್ಮವನ್ನು ನೀಡದ್ದಾರೆ. ಇದನ್ನು ವೈದ್ಯರು ಸೂಪರ್‌ಫೆಟೇಶನ್ ಎಂದು ಕರೆದಿದ್ದಾರೆ.

    ಸೂಪರ್‌ಫೆಟೇಶನ್ ಎಂದರೇನು?:
    ಒಂದು ತಿಂಗಳ ಅಂತರದಲ್ಲಿ ಸೂಪರ್‌ಫೆಟೇಶನ್ ಎಂದು ಕರೆಯಲ್ಪಡುವ ಅಪರೂಪದ ವಿದ್ಯಮಾನದಿಂದಾಗಿ, ಈಗಾಗಲೇ ಗರ್ಭಿಣಿಯಾಗಿದ್ದರೂ ಹೊಸ ಗರ್ಭಧಾರಣೆಯು ಸಂಭವಿಸುತ್ತದೆ. ಮೊದಲ ಮಗುವಿಗೆ ಗರ್ಭಿಣಿಯಾದ ನಾಲ್ಕನೇ ವಾರದಲ್ಲಿ ಮಹಿಳೆ ಮತ್ತೊಮ್ಮೆ ಗರ್ಭಿಣಿಯಾಗುತ್ತಾರೆ.

    ಜಗತ್ತಿನ ಕೇವಲ 0.3% ಗರ್ಭಿಣಿಯರಲ್ಲಿ ಹೀಗಾಗುತ್ತದೆ. ಹೀಗೆ ಆದಾಗಲೂ ಎರಡೂ ಮಕ್ಕಳು ಬದುಕುಳಿಯುವ ಸಾಧ್ಯತೆ ತುಂಬಾ ಕಡಿಮೆ. ಇವು ಅವಳಿ ಮಕ್ಕಳಲ್ಲ. ಇದು ಬೇರೆ ಬೇರೆ ಗರ್ಭಧಾರಣೆಯಿಂದ ಜನಿಸಿದ ಮಕ್ಕಳು ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ.

    ಈ ಕುರಿತಾಗಿ ಮಾತನಾಡಿದ ಮಹಿಳೆ, ಮಕ್ಕಳಿಗೆ ಮಕ್ಕಳಿಗೆ ಹಾಲಿ ಮತ್ತು ಡಾರ್ಸಿ ಎಂದು ಹೆಸರಿಟ್ಟಿದ್ದೇವೆ. ನಾನು ಎರಡು ಬಾರಿ ತಾಯಿಯಾಗಿರುವುದನ್ನು ತಿಳಿದು ಅಚ್ಚರಿಪಟ್ಟೆ. ಇಬ್ಬರು ಮಕ್ಕಳಿಗೆ ಜನ್ಮ ನೀಡಿರುವುದು ಖುಷಿ ನೀಡಿದೆ ಎಂದು ಹೇಳಿದ್ದಾರೆ.

    ತಾಯಿಗಾಗಿ ಪುಟಾಣಿ ಬಾವಿ ಕೊರೆದು ನೀರುಕ್ಕಿಸಿದ 14ರ ಪೋರ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts