42 ರನ್​ಗಳ ಜಯ ಸಾಧಿಸಿದ SRH: RCB ಗೆ ಸೋಲಿನ ಶಾಕ್​ ಕೊಟ್ಟ ಸನ್​ರೈಸರ್ಸ್​

10-6830bdbe43693
Published on

ಲಕ್ನೋದಲ್ಲಿ ಗುರುವಾರ ನಡೆದ IPL 2025ರ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು 42 ರನ್‌ಗಳಿಂದ ಸೋಲಿಸಿತು.

ಮೊದಲು ಬ್ಯಾಟ್​ ಮಾಡಿದ ಎಸ್​ಆರ್​ಎಚ್​ ತಂಡ ನಿಗದಿತ 20 ಓವರ್​ಗಳಲ್ಲಿ 6 ವಿಕೆಟ್‌ಗೆ 231 ರನ್‌ಗಳ ಬೃಹತ್ ಮೊತ್ತವನ್ನುಗಳಿಸಿತು. ತಂಡದ ಪರ ಇಶಾನ್ ಕಿಶನ್ 48 ಎಸೆತಗಳಲ್ಲಿ ಔಟಾಗದೆ 94 ರನ್ ಗಳಿಸಿದರು.

ಬೃಹತ್​ ಮೊತ್ತ ಬೆನ್ನಟ್ಟಿದ ಆರ್​ಸಿಬಿ 19.5 ಓವರ್​ನಲ್ಲಿ ತನ್ನ ಎಲ್ಲಾ ವಿಕೆಟ್​ ಕಳೆದುಕೊಂಡು 189 ರನ್​ ಗಳಿಸಲಷ್ಟೇ ಸಾಧ್ಯವಾಗಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net