ಭೀಕರ ರಸ್ತೆ ಅಪಘಾತ; 6 ಜನ ದುರ್ಮರಣ: ಇಬ್ಬರು ಮಕ್ಕಳು ಗಂಭೀರ ಗಾಯ | Accident

dk - 2025-05-23T223315.606
Published on

Accident: ಆಂಧ್ರಪ್ರದೇಶದ ಶುಕ್ರವಾರ ಸಂಜೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಆರು ಜನರು ಮೃತಪಟ್ಟಿದ್ದು, ಇಬ್ಬರು ಮಕ್ಕಳಿಗೆ ಗಂಭೀರವಾಗಿ ಗಾಯಗೊಂಡಿದ್ದಾರೆ.

ಮೃತರನ್ನು ಐವರನ್ನು ಗಜ್ಜಲ ಅಂಕಲು (50), ಗಜ್ಜಲ ಜನಾರ್ಧನ್, ಗಜ್ಜಲ ಭವಾನಿ (20), ಗಜ್ಜಲ ನರಸಿಂಹ (20) ಮತ್ತು ಸನ್ನಿ ಎಂದು ಗುರುತಿಸಲಾಗಿದೆ.

ಪ್ರಕಾಶಂ ಜಿಲ್ಲೆಯ ಕೊಮರೋಲು ಮಂಡಲದ ಥಾಟಿಚೆರ್ಲಾ ಮೋಟು ಬಳಿ ಸಂಜೆ ಹೆದ್ದಾರಿಯಲ್ಲಿ ಈ ಅಪಘಾತ ಸಂಭವಿಸಿದೆ. ನಂದ್ಯಾಲ್ ಜಿಲ್ಲೆಯ ಮಹಾನಂದಿ ದೇವಸ್ಥಾನದಿಂದ ಹಿಂತಿರುಗುತ್ತಿದ್ದ ಕಾರಿಗೆ ಲಾರಿಯೊಂದು ಡಿಕ್ಕಿ ಹೊಡೆದಿದೆ. ಕಾರಿನಲ್ಲಿದ್ದ ಎಂಟು ಪ್ರಯಾಣಿಕರು ಪ್ರಕಾಶಂ ಮತ್ತು ಗುಂಟೂರು ಜಿಲ್ಲೆಗಳ ನಡುವೆ ಇರುವ ಬಾಪಟ್ಲಾದ ಸ್ಟುವರ್ಟ್‌ಪುರಂ ಗ್ರಾಮದವರು ಎಂದು ಪೊಲೀಸರು ತಿಳಿಸಿದ್ದಾರೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net