ಅಡ್ಡಗಟ್ಟಿ ಖಾಸಗಿ ಲೇವಾದೇವಿದಾರನ ದರೋಡೆ, ನಾಲ್ವರನ್ನು ಬಂಧಿಸಿದ ಪೊಲೀಸರು

FB_IMG_1748023081557.jpg
Published on

ಚಿಕ್ಕಬಳ್ಳಾಪುರ: ಗೌರಿಬಿದನೂರು ತಾಲ್ಲೂಕಿನ ಮಾಚೇನಹಳ್ಳಿ ಬಳಿ ದರೋಡೆ ಮಾಡಲು ಯತ್ನಿಸುತ್ತಿದ್ದ ನಾಲ್ವರು ದರೋಡೆಕೋರರ ತಂಡವನ್ನು ಗ್ರಾಮಾಂತರ ಠಾಣೆ ಪೊಲೀಸರು ಗುರುವಾರ ಬಂಧಿಸಿದ್ದಾರೆ.

ರೋಹಿತ್ (19), ಗೌತಮ್ (19), ಧರ್ಮ ರಾಜು (25)  ಮತ್ತು ಮತ್ತೊಬ್ಬ ಅಪ್ರಾಪ್ತ ಬಾಲಕನನ್ನು ಬಂಧಿಸಲಾಗಿದೆ.

*ಪ್ರಕರಣದ ಹಿನ್ನೆಲೆ

ಸಸ್ತಾ ಫೈನಾನ್ಸ್ ಸಿಬ್ಬಂದಿ ಧನ ಶಂಕರ್ ನಾಚಕುಂಟೆ ಯಿಂದ ಹಣ ವಸೂಲಿ ಮಾಡಿಕೊಂಡು ಮಾಚೇನಹಳ್ಳಿ  ಬಳಿ ಬರುವಾಗ ರಸ್ತೆಯಲ್ಲಿ  ಆತನ ದ್ವಿಚಕ್ರ ವಾಹನವನ್ನು ಅಡ್ಡ ಗಟ್ಟಿದ್ದ ದರೋಡೆಕೋರರ ತಂಡವು, ದ್ವಿಚಕ್ರ ವಾಹನದ ಬೀಗ ಕಸಿದುಕೊಂಡು ಚಾಕು ತೋರಿಸಿ ಹಣ ನೀಡುವಂತೆ ಒತ್ತಾಯಿಸಿದೆ. ತಕ್ಷಣ ಧನ ಶಂಕರ ಜೋರಾಗಿ ಕಿರುಚಿಕೊಂಡಿದ್ದರಿಂದ, ಅಲ್ಲಿಯೇ ಇದ್ದ ಸ್ಥಳೀಯರು ನಾಲ್ಕು ಜನ ದರೋಡೆಕೊರರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಗ್ರಾಮಾಂತರ ಠಾಣೆ ಪಿಎಸ್ಐ ರಮೇಶ್  ಗುಗ್ಗರಿ ಆರೋಪಿಗಳನ್ನು ಬಂಧಿಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net