More

    ಸನ್​ ರೈಸರ್ಸ್​ ಹೈದರಾಬಾದ್​ ಅತ್ಯಧಿಕ ರನ್​ ದಾಖಲೆ ಬರೆಯಲು ರಜಿನಿಕಾಂತ್​ ಕಾರಣ! ಇಲ್ಲಿದೆ ವಿಡಿಯೋ ಸಾಕ್ಷಿ

    ಹೈದರಾಬಾದ್​: ಸನ್​ ರೈಸರ್ಸ್​ ಹೈದರಾಬಾದ್​ (ಎಸ್​ಆರ್​ಎಚ್​) ತಂಡ ಐಪಿಎಲ್​ನಲ್ಲಿ ಹೊಸ ಇತಿಹಾಸ ರಚನೆ ಮಾಡಿದೆ. ಈವರೆಗೂ ರಾಯಲ್​​ ಚಾಲೆಂಜರ್ಸ್​ ಬೆಂಗಳೂರು (ಆರ್​ಸಿಬಿ) ಹೆಸರಿನಲ್ಲಿದ್ದ ಅತ್ಯಧಿಕ ರನ್​​ ದಾಖಲೆಯನ್ನು ಎಸ್​ಆರ್​ಎಚ್​ ಉಡೀಸ್​ ಮಾಡಿದೆ. ಮುಂಬೈ ಇಂಡಿಯನ್ಸ್​ ವಿರುದ್ಧ ನಡೆದ ಪಂದ್ಯದಲ್ಲಿ ಎಸ್​ಆರ್​ಎಚ್​ ತಂಡ 277 ರನ್​ ಬಾರಿಸುವ ಮೂಲಕ ಅತ್ಯಧಿಕ ರನ್​ ಗಳಿಸಿದ ತಂಡವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

    ಎಸ್​ಆರ್​​ಎಚ್​ ತಂಡದ ಈ ದಾಖಲೆಗೆ ಬ್ಯಾಟ್ಸ್​ಮನ್​ಗಳ ಅಬ್ಬರದ ಬ್ಯಾಟಿಂಗ್​ ಕಾರಣ ಎಂಬುದರಲ್ಲಿ ಎರಡು ಮಾತಿಲ್ಲ. ಹಾಗೆಯೇ ಮುಂಬೈ ಇಂಡಿಯನ್ಸ್​ ತಂಡದ ನಾಯಕ ಹಾರ್ದಿಕ್​ ಪಾಂಡ್ಯ ಅವರ ಕಳಪೆ ನಾಯಕತ್ವವನ್ನೂ ತಳ್ಳಿಹಾಕುವಂತಿಲ್ಲ. ಇದೆಲ್ಲದರ ನಡುವೆ ಮತ್ತೊಂದು ಕಾರಣ ಬಯಲಾಗಿದೆ. ಅಲ್ಲದೇ ಇದೇ ಪ್ರಮುಖ ಕಾರಣ ಎಂದೂ ಹೇಳಲಾಗುತ್ತಿದೆ. ಎಸ್​ಆರ್​ಎಚ್​ ತಂಡ ಒಂದೇ ಪಂದ್ಯದಲ್ಲಿ ಇಷ್ಟೊಂದು ರನ್​ ಕಲೆಹಾಕಲು ಪರೋಕ್ಷವಾಗಿ ಸೂಪರ್​ಸ್ಟಾರ್​ ರಜಿನಿಕಾಂತ್​ ಸಹ ಕಾರಣವಾಗಿದ್ದಾರೆ. ಇದನ್ನು ಕೇಳಿ ನಿಮಗೆ ಆಶ್ಚರ್ಯವಾಗಿರಬಹುದು, ರಜಿನಿಯಿಂದ ಹೇಗೆ ಸಾಧ್ಯ ಎಂಬ ನಿಮ್ಮ ಪ್ರಶ್ನೆಗೆ ಉತ್ತರ ಮುಂದಿದೆ ಓದಿ.

    ಅಂದಹಾಗೆ ಎಸ್​ಆರ್​ಎಚ್​ ತಂಡದ ಸಿಇಒ ಕಾವ್ಯಾ ಮಾರನ್​ ಎಂಬುದು ಎಲ್ಲರಿಗು ತಿಳಿದಿದೆ. ತಮ್ಮ ತಂಡ ಆಡುವ ಪ್ರತಿಯೊಂದು ಪಂದ್ಯದಲ್ಲೂ ಕಾವ್ಯ ಉಪಸ್ಥಿತರಿದ್ದು, ಆಟಗಾರರನ್ನು ಹುರಿದುಂಬಿಸುತ್ತಾರೆ. ಕಾವ್ಯಾ ಅವರ ಹಾವ-ಭಾವವನ್ನು ಆಗಾಗ ಕ್ಯಾಮೆರಾಮನ್​ ಸೆರೆಹಿಡಿಯುತ್ತಲೇ ಇರುತ್ತಾರೆ. ತಮ್ಮ ತಂಡ ಸೋತಾಗಲೆಲ್ಲ ಕಾವ್ಯಾ ತುಂಬಾ ಬೇಸರದಲ್ಲಿರುತ್ತಾರೆ. ಗೆದ್ದಾಗ ಕುಣಿದು ಕುಪ್ಪಳಿಸುತ್ತಾರೆ. ಆದರೆ, ಕಳೆದ ಕೆಲವು ಸೀಸನ್​ಗಳಿಂದ ಎಸ್​ಆರ್​ಎಚ್​ ಪ್ರದರ್ಶನ ಕಳಪೆಯಾಗಿದ್ದರಿಂದ ಕಾವ್ಯ ಸದಾ ಡಲ್​ ಆಗಿರುತ್ತಿದ್ದರು. ಕಾವ್ಯ ಅವರ ಸಪ್ಪೆ ಮುಖ ಕ್ಯಾಮೆರಾ ಕಣ್ಣಿಗೂ ಅನೇಕ ಬಾರಿ ಬಿದ್ದಿದ್ದು, ಇದನ್ನು ಸೂಪರ್​ ಸ್ಟಾರ್​ ರಜಿನಿಕಾಂತ್​ ಸಹ ಗಮನಿಸಿದ್ದಾರೆ.

    ಜೈಲರ್​ ಸಿನಿಮಾದ ವಿಜಯೋತ್ಸವ ಸಂದರ್ಭದಲ್ಲಿ ಸೂಪರ್​ ಸ್ಟಾರ್​ ರಜಿನಿಕಾಂತ್​ ಮಾತನಾಡುತ್ತಾ ಕಾವ್ಯಾ ಅವರ ತಂದೆ ಕಲಾನಿಧಿ ಮಾರನ್​ ಅವರಿಗೆ ಒಂದು ಸಲಹೆ ನೀಡಿದರು. ಕಾವ್ಯ ಮುಖವನ್ನು ನೋಡಲು ಆಗುತ್ತಿಲ್ಲ ಸನ್​ ರೈಸರ್ಸ್​ ಹೈದರಾಬಾದ್​ ತಂಡಕ್ಕೆ ಒಳ್ಳೆಯ ಆಟಗಾರರನ್ನು ಸೇರಿಸಿಕೊಂಡು ಕಾವ್ಯಾ ಮುಖದಲ್ಲಿ ನಗು ಅರಳಿಸಿ. ಐಪಿಎಲ್​ ಸಮಯದಲ್ಲಿ ಟಿವಿಯಲ್ಲಿ ಕಾವ್ಯಾ ಮುಖ ನೋಡಿ ತುಂಬಾ ಬೇಸರವಾಗಿದೆ ಎಂದು ರಜಿನಿಕಾಂತ್​ ಹೇಳಿದ್ದರು. ಇದನ್ನು ಕೇಳಿ ಕಾವ್ಯಾ ಮಾರನ್​ ನಕ್ಕಿದ್ದರು.

    ಅದೇ ರೀತಿ ಐಪಿಎಲ್​ ಇತಿಹಾಸದಲ್ಲೇ ಎಸ್​ಆರ್​ಎಚ್​ ತಂಡ ಹೊಸ ದಾಖಲೆಯನ್ನು ಬರೆದಿದೆ. ಈ ದಾಖಲೆ ಕಾವ್ಯಾ ಮಾರನ್​ ಮುಖದಲ್ಲಿ ನಗು ಅರಳಿಸಿದೆ. ಇದರ ಬೆನ್ನಲ್ಲೇ ರಜಿನಿಕಾಂತ್​ ಅವರು ಕಾವ್ಯಾ ತಂದೆಗೆ ಸಲಹೆ ನೀಡಿದ್ದ ಹಳೆಯ ವಿಡಿಯೋ ಇದೀಗ ಮತ್ತೆ ವೈರಲ್​ ಆಗಿದೆ.

    ಉತ್ತಮ ಆಟಗಾರರನ್ನು ನೇಮಿಸಿಕೊಳ್ಳುವಂತೆ ರಜನಿಕಾಂತ್ ನೀಡಿದ ಸಲಹೆ ಮೇರೆಗೆ ಸನ್ ರೈಸರ್ಸ್ ಹೈದರಾಬಾದ್​, ಆಸ್ಟ್ರೇಲಿಯದ ನಾಯಕ ಪ್ಯಾಟ್ ಕಮಿನ್ಸ್ ಅವರನ್ನು ಭಾರಿ ಮೊತ್ತಕ್ಕೆ ಖರೀದಿಸಿದೆ ಎಂದು ಅಭಿಮಾನಿಗಳು ಮಾತನಾಡಿಕೊಳ್ಳುತ್ತಿದ್ದಾರೆ. ಐಪಿಎಲ್ ಹರಾಜಿನಲ್ಲಿ ಪ್ಯಾಟ್ ಕಮ್ಮಿನ್ಸ್ ಅವರನ್ನು 20.50 ಕೋಟಿ ರೂ.ಗೆ ಹೈದರಾಬಾದ್​ ತಂಡ ಖರೀದಿ ಮಾಡಿತು. (ಏಜೆನ್ಸೀಸ್​)

    ಇಷ್ಟೊಂದು ಅಹಂಕಾರ ಒಳ್ಳೆಯದಲ್ಲ ಈಗಲಾದ್ರೂ ಬದಲಾಗಿ! ಹಾರ್ದಿಕ್ ದುರ್ವರ್ತನೆ ವಿಡಿಯೋ ವೈರಲ್​, ನೆಟ್ಟಿಗರ ತರಾಟೆ

    ಅಣ್ಣಾಮಲೈಗಿಂತ ಪತ್ನಿಯೇ ಶ್ರೀಮಂತೆ! ಮಾಜಿ ಐಪಿಎಸ್​ ಅಧಿಕಾರಿ ಬಳಿಯಿರುವ ಒಟ್ಟು ಆಸ್ತಿ ಎಷ್ಟು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts