ಮುಂಬೈನ ಪ್ರತಿಷ್ಠಿತ ಪ್ರದೇಶದಲ್ಲಿ 2,100 sq ft ಜಾಗವನ್ನು ಖರೀದಿಸಿದ Sunny Leone

Sunny Leone
Published on

ಮುಂಬೈ: ತನ್ನ ಮೈಮಾಟದ ಮೂಲಕವೇ ಭಾರತ ಚಿತ್ರರಂಗದಲ್ಲಿ ಸಖತ್​ ಸೌಂಡ್​ ಮಾಡಿರುವ ನಟಿ ಸನ್ನಿ ಲಿಯೋನ್​ (Sunny Leone) ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಿದ್ದು, ನಟಿ ಆಗಿಂದಾಗೆ ಸದ್ದು ಮಾಡುತ್ತಿರುತ್ತಾರೆ. ಇದೀಗ ನಟಿ ಮುಂಬೈನಲ್ಲಿ 2,100 ಚದರ ಅಡಿ ಜಾಗವನ್ನು ಖರೀದಿಸುವ ಮೂಲಕ ಎಲ್ಲರ  ಹುಬ್ಬೇರುವಂತೆ ಮಾಡಿದ್ದಾರೆ. ಖ್ಯಾತ ರಿಯಲ್​ ಎಸ್ಟೇಟ್​ ಸಂಸ್ಥೆ ಸ್ಕ್ವೇರ್ ಯಾರ್ಡ್ಸ್ ಸಂಸ್ಥೆ ತನ್ನ ಪ್ರಕಟಣೆಯಲ್ಲಿ ಈ ಬಗ್ಗೆ ತಿಳಿಸಿದೆ. 

ಕರೆಂಜಿತ್ ಕೌರ್ ವೆಬರ್ (Sunny Leone) ಮುಂಬೈನ ಓಶಿವಾರಾ ಪ್ರದೇಶದಲ್ಲಿ 8 ಕೋಟಿ ರೂ. ಮೌಲ್ಯದ 2,100 ಚದರಿ ಅಡಿ ಜಾಗವನ್ನು ಖರೀದಿಸಿದ್ದಾರೆ. 2025ರಲ್ಲಿ ಸ್ಥಳ ನೋಂದಣಿ ಪ್ರಕ್ರಿಯೆ ನಡೆದಿದ್ದು, ಸನ್ನಿ ಲಿಯೋನ್​ ಖರೀದಿಸಿರುವ ಜಾಗವು ಗ್ರೂಪ್‌ನ ವಾಣಿಜ್ಯ ಯೋಜನೆಯಾದ ವೀರ್ ಸಿಗ್ನೇಚರ್‌ನಲ್ಲಿದೆ. 

ಸನ್ನಿ ಲಿಯೋನ್​ ಅವರು ಖರೀದಿಸಿರುವ ಕಚೇರಿಯು 176.98 ಚದರ ಮೀಟರ್ (ಸುಮಾರು 1,904.91 ಚದರ ಅಡಿ) ಕಾರ್ಪೆಟ್​ ಏರಿಯಾವನ್ನು ಹೊಂದಿದ್ದು, 194.67 ಚದರ ಮೀಟರ್ (2,095 ಚದರ ಅಡಿ) ಬಿಲ್ಟ್​ ಅಪ್​ ಏರಿಯಾದಲ್ಲಿ ನಿರ್ಮಿಸಲಾಗಿದೆ. ಸನ್ನಿ ಲಿಯೋನ್​ (Sunny Leone) ಅವರು ಈ ಜಾಗವನ್ನು ಆನಂದ್ ಕಮಲನಯನ್ ಪಂಡಿತ್ ಮತ್ತು ರೂಪಾ ಆನಂದ್ ಪಂಡಿತ್ ಅವರ ಒಡೆತನದ ಐಶ್ವರ್ಯ ಪ್ರಾಪರ್ಟಿ ಮತ್ತು ಎಸ್ಟೇಟ್‌ ಏಜೆನ್ಸಿಯಿಂದ ಖರೀದಿಸಿದ್ದಾರೆ ಎಂದು ಕಂಪನಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net