More

    ಗದರ್-2 ಬಳಿಕ ಮತ್ತೊಂದು ಗೆಲುವಿಗಾಗಿ ಸೌತ್​ನತ್ತ ಮುಖ ಮಾಡಿದ ಸನ್ನಿ ಡಿಯೋಲ್​

    ಹೈದರಾಬಾದ್: 2023ರಲ್ಲಿ ಬಿಡುಗಡೆಯಾಗಿ ಬಾಕ್ಸ್​ಅಫೀಸ್​ನಲ್ಲಿ ಧೂಳೆಬ್ಬಿಸುವ ಮೂಲಕ ಬಾಲಿವುಡ್​ಗೆ ಚೇತರಿಕೆ ನೀಡುವಲ್ಲಿ ಯಶಸ್ವಿಯಾಗಿದ್ದ ಗದರ್​-2 ಚಿತ್ರದ ಬಳಿಕ ನಟ, ರಾಜಕಾರಣಿ ಸನ್ನಿ ಡಿಯೋಲ್​ ಕಾಣೆಯಾಗಿದ್ದರು. ಗದರ್-2 ಬಳಿಕ ಇದೀಗ ತೆಲುಗು ನಿರ್ದೇಶಕನ ಜೊತೆ ಕೈ ಜೋಡಿಸಿರುವ ಸನ್ನಿ ಮತ್ತೊಮ್ಮೆ ಬಾಕ್ಸ್​ಆಫೀಸ್​ನಲ್ಲಿ ಧೂಳೆಬ್ಬಿಸಲು ಸಜ್ಜಾಗುತ್ತಿದ್ದಾರೆ.

    ಬಾಲಿವುಡ್​ನ ಆ್ಯಕ್ಷನ್​ ಹೀರೋ ಎಂದೇ ಹೆಸರುವಾಸಿಯಾಗಿರುವ ಸನ್ನಿ ಡಿಯೋಲ್​ಗೆ ಕ್ರ್ಯಾಕ್​, ವೀರ ಸಿಂಹ ರೆಡ್ಡಿ, ಬಲುಪುನಂತಹ ಸಿನಿಮಾಗಳನ್ನು ನಿರ್ದೇಶಿಸಿ ಸೈ ಎನ್ನಿಸಿಕೊಂಡಿರುವ ಗೋಪಿಚಂದ್​ ಮಲ್ಲಿನೇನಿ ಸನ್ನಿ ಡಿಯೋಲ್​ ಅವರ ಮುಂದಿನ ಚಿತ್ರಕ್ಕೆ ಆ್ಯಕ್ಷನ್​ ಕಟ್​ ಹೇಳುತ್ತಿದ್ದು, ಈ ಚಿತ್ರದಲ್ಲೂ ಭರ್ಜರಿ ಸಾಹಸವನ್ನು ನಿರೀಕ್ಷಿಸಬಹುದಾಗಿದೆ.

    ಇದನ್ನೂ ಓದಿ: ವಿರಾಟ್​ ತಂಡಕ್ಕಿಂತ ತನ್ನ ಸ್ವಾರ್ಥಕ್ಕಾಗಿ ಕ್ರಿಕೆಟ್​ ಆಡುತ್ತಾರೆ; ಕೊಹ್ಲಿ ಕುರಿತು ಮತ್ತೊಮ್ಮೆ ನಾಲಿಗೆ ಹರಿಬಿಟ್ಟ ಪಾಕ್​ ಮಾಜಿ ಆಟಗಾರ

    ಚಿತ್ರಕ್ಕೆ ಮೈತ್ರಿ ಮೂವಿ ಮೇಕರ್ಸ್​ ಬಂಡವಾಳ ಹೂಡುತ್ತಿದ್ದು, ಸನ್ನಿಗೆ ಜೊತೆಯಾಗಿ ರೆಜಿನಾ ಹಾಗೂ ಸೈಯಾಮಿ ಖೇರ್​ ನಟಿಸುತ್ತಿದ್ದಾರೆ. ಚಿತ್ರಕ್ಕೆ SDGM ಎಂದು ಅಧಿಕೃತವಾಗಿ ಟೈಟಲ್​ ಇಡಲಾಗಿದ್ದು, ಚಿತ್ರತಂಡ ಹಾಗೂ ತಾರಬಳಗದ ಬಗ್ಗೆ ಇನ್ನಷ್ಟೇ ತಿಳಿದು ಬರಬೇಕಿದೆ.

    ಇತ್ತೀಚಿನ ವರ್ಷಗಳಲ್ಲಿ ಬಾಲಿವುಡ್​ ಸ್ಟಾರ್ಸ್​​ ಗೆಲುವಿಗಾಗಿ ಸೌತ್‌ನತ್ತ ಮುಖ ಮಾಡುತ್ತಿದ್ದಾರೆ. ಅದೇ ತಂತ್ರವನ್ನೇ ಸನ್ನಿ ಡಿಯೋಲ್ ಮಾಡುತ್ತಿದ್ದಾರೆ. ಪಕ್ಕಾ ಆ್ಯಕ್ಷನ್ ಕಮ್ ಲವ್ ಸ್ಟೋರಿ ಕುರಿತ ಸಿನಿಮಾ ಬರಲು ‘ಗದರ್ 2’ ನಟ ರೆಡಿಯಾಗಿದ್ದಾರೆ.

    See also  ಯೋಗದಿಂದ ಹೆಚ್ಚಲಿದೆ ಏಕಾಗ್ರತೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts