ಆಕಾಶಕ್ಕೆ ಏರುವಂತೆ...! ಕಡೆಗೂ ನಿಜವಾಯ್ತು ಸುನಿಲ್ ಗವಾಸ್ಕರ್​ ಹೇಳಿದ್ದ ಮಾತು | Vaibhav Suryavanshi

ವಿಜಯವಾಣಿ - 2025-05-02T081647.064
Published on

Vaibhav Suryavanshi: ನಿನ್ನೆ (ಮೇ.01) ಸವಾಯಿ ಮಾನ್​ಸಿಂಗ್ ಕ್ರೀಡಾಂಗಣದಲ್ಲಿ ನಡೆದ ರಾಜಸ್ಥಾನ ರಾಯಲ್ಸ್ ಮತ್ತು ಮುಂಬೈ ಇಂಡಿಯನ್ಸ್​ ನಡುವಿನ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಪಡೆ 100 ರನ್​ಗಳ ಭರ್ಜರಿ ಜಯ ಸಾಧಿಸಿತು.

ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್ ಬರೋಬ್ಬರಿ 218 ರನ್​ಗಳ ಗುರಿಯನ್ನು ಆರ್​ಆರ್​ಗೆ ನೀಡಿತು. ಈ ಗುರಿಯನ್ನು ಬೆನ್ನತ್ತಿದ ಆರ್​ಆರ್​ ಓಪನಿಂಗ್​​ ಬ್ಯಾಟರ್​ಗಳಾದ ವೈಭವ್ ಸೂರ್ಯವಂಶಿ ಮತ್ತು ಯಶಸ್ವಿ ಜೈಸ್ವಾಲ್ ಮೊದಲೆರೆಡು ಓವರ್​ಗಳಲ್ಲೇ ತಂಡಕ್ಕೆ ದೊಡ್ಡ ಆಘಾತ ನೀಡಿದರು. ಅಪಾರ ನಿರೀಕ್ಷೆಗಳನ್ನು ಇಟ್ಟುಕೊಂಡು ವೈಭವ್​ರನ್ನು ಓಪನಿಂಗ್ ಕಳುಹಿಸಿದ್ದ ರಾಜಸ್ಥಾನಕ್ಕೆ ಅವರ ಡಕ್​ಔಟ್​ ಭಾರೀ ಅಚ್ಚರಿ ಮೂಡಿಸಿತು.

ಕಳೆದ ಪಂದ್ಯದಲ್ಲಿ ಗುಜರಾತ್ ಟೈಟನ್ಸ್​ ಎದುರು ಸ್ಫೋಟಕ ಶತಕ ದಾಖಲಿಸಿದ್ದ ವೈಭವ್​, ಇಂದಿನ ಪಂದ್ಯದಲ್ಲಿ ಅಬ್ಬರಿಸಲಿದ್ದಾರೆ ಎಂದೇ ಎಲ್ಲರೂ ಭಾವಿಸಿದ್ದರು ಹಾಗೂ ಅಪಾರ ನಿರೀಕ್ಷೆಗಳನ್ನು ಹೊಂದಿದ್ದರು. ಆದರೆ, ಅಂತಿಮವಾಗಿ ವೈಭವ್ ಡಕ್​ಔಟ್ ಆಗಿದ್ದು​ ಎಲ್ಲರ ಭರವಸೆ, ನಿರೀಕ್ಷೆಗಳನ್ನು ಹುಸಿಯಾಗಿಸಿತು. ಈ ಹಿಂದೆ ಜಿಟಿ ವಿರುದ್ಧ ಸೂರ್ಯವಂಶಿ ಶತಕ ಬಾರಿಸಿದ ಸಮಯದಲ್ಲಿ ಎಲ್ಲರೂ ಯುವ ಬ್ಯಾಟರ್​ನನ್ನು ಹಾಡಿ ಹೊಗಳಿದಾಗ ಟೀಮ್ ಇಂಡಿಯಾ ದಿಗ್ಗಜ ಸುನಿಲ್ ಗವಾಸ್ಕರ್​ ಮಾತ್ರ ಅವರನ್ನು ಮೆಚ್ಚಿ ಮಾತನಾಡಲಿಲ್ಲ. ಬದಲಿಗೆ ಒಂದು ಮಾತನ್ನು ಬಹಳ ಸೂಕ್ಷ್ಮವಾಗಿ ತಿಳಿಸಿದ್ದರು. ಅಂದು ಅವರು ಹೇಳಿದ್ದ ಮಾತು ಇಂದು ನಿಜವಾಗಿದೆ.

"ವೈಭವ್​ ಹರಾಜಿಗೆ ಲಗ್ಗೆಯಿಟ್ಟಾಗ ಆತ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್‌ನಲ್ಲಿ ಶತಕ ಗಳಿಸಿದ್ದರು. ಮತ್ತು ಅದು ಉತ್ತಮ ಇನ್ನಿಂಗ್ಸ್ ಆಗಿತ್ತು. 13 ವರ್ಷದ ಬಾಲಕನೊಬ್ಬ ಅಂತರರಾಷ್ಟ್ರೀಯ ತಂಡದ ವಿರುದ್ಧ ಶತಕ ಗಳಿಸಿದ್ದು, ಎಲ್ಲರ ಗಮನ ಸೆಳೆಯಿತು. ಆ ಹುಡುಗನಲ್ಲಿ ಏನೋ ಒಂದು ಪ್ರತಿಭೆ ಇದೆ ಎಂಬುದನ್ನು ತೋರಿಸಿತು. ಪ್ರಸ್ತುತ ಅವರು ರಾಹುಲ್​ ದ್ರಾವಿಡ್​ ಜತೆಗೆ ಇದ್ದಾರೆ ಎಂದರೆ ಆಟದಲ್ಲಿ ಕಲಿಕೆ ಹೆಚ್ಚಲಿದೆ. ದ್ರಾವಿಡ್​ ಅವರೊಂದಿಗೆ ಕುಳಿತು ಹಂತ ಹಂತವಾಗಿ ಮುಂದೋಗುತ್ತಾರೆ. ಆತನನ್ನು ಭಾರೀ ಹೊಗಳಿ, ಆಕಾಶಕ್ಕೆ ಕೂರಿಸುವ ಅಗತ್ಯವಿಲ್ಲ. ಕಲಿಕೆಗೆ ಆದ್ಯತೆ ನೀಡಿ" ಎಂದು ಕಿವಿಮಾತು ಹೇಳಿದ್ದರು,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net