ಪಹಲ್ಗಾಮ್​ ದಾಳಿಯಲ್ಲಿ ಮೃತಪಟ್ಟವರಿಗೆ ಲಂಡನ್​ನಲ್ಲಿ ಭಾರತೀಯ ಹೈಕಮಿಷನರ್ ನೇತೃತ್ವದಲ್ಲಿ ಸಂತಾಪ ಸೂಚನೆ |Pahalgam attack

dk-2025-05-01t230650665-6813b13b83b73
Published on

Pahalgam attack : ಲ್ಯಾಂಬೆತ್ ಬಸವೇಶ್ವರ ಪ್ರತಿಷ್ಠಾನ ಹಾಗೂ ಹಿಂದೂಸ್ ಫಾರ್ ಲೇಬರ್‌ನ ಸಹಭಾಗಿತ್ವದಲ್ಲಿ ಪಹಲ್ಗಾಮ್ ದಾಳಿಯಲ್ಲಿ ಮೃತಪಟ್ಟವರಿಗೆ ಪಾರ್ಥನೆ ಸಲ್ಲಿಸುವ ಮೂಲಕ ಲಂಡೆನ್‌ನಲ್ಲಿ ಬುಧವಾರ ಬಸವ ಜಯಂತಿ ಆಚರಿಸಲಾಯಿತು.

ಬ್ರಿಟಿಷ್ ಸಂಸತ್ ಎದುರಿನಲ್ಲಿನ ಪ್ರತಿಷ್ಠಾಪಿತ ಬಸವೇಶ್ವರ ಪ್ರತಿಮೆಯ ಪಕ್ಕದಲ್ಲಿ ನಡೆದ ಕಾರ್ಯಕ್ರಮದಲ್ಲಿ ಯುಕೆ ಭಾರತದ ಹೈಕಮಿಷನರ್ ಆಗಿರುವ ವಿಕ್ರಮ್ ದೊರೈಸ್ವಾಮಿ ಅವರ ನೇತೃತ್ವದಲ್ಲಿ ಮೌನಚರಣೆ ಸಲ್ಲಿಸಲಾಯಿತು.

ಇನ್ನು ದಾಳಿಯನ್ನು ತೀವ್ರವಾಗಿ ಖಂಡಿಸಿದ ದೊರೈಸ್ವಾಮಿ, ದಾಳಿಯಲ್ಲಿ ಮೃತಪಟ್ಟ ಕುಟುಂಬಗಳಿಗೆ ಬ್ರಿಟಿಷ್ ಭಾರತೀಯ ಸಮುದಾಯದ ಪರವಾಗಿ ಆಳವಾದ ಸಂತಾಪ ಸೂಚಿಸಿದರು.

ಈ ವರ್ಷದ ಬಸವ ಜಯಂತಿಯು ದಾಳಿಯಲ್ಲಿ ಮೃತಪಟ್ಟವರನ್ನು ಗೌರವಿಸಲು ಮಾತ್ರವಲ್ಲದೆ 12 ನೇ ಶತಮಾನದ ಮಹಾನ್ ತತ್ವಜ್ಞಾನಿ ಮತ್ತು ಸಾಮಾಜಿಕ ಸುಧಾರಕ ಭಗವಾನ್ ಬಸವೇಶ್ವರರ ಪ್ರಬಲ ಬೋಧನೆಗಳನ್ನು ಪುನರುಚ್ಚರಿಸಲು ಸಹ ಸಹಾಯ ಮಾಡಿದೆ. ಅವರ ಶಾಶ್ವತ ಪ್ರಜಾಪ್ರಭುತ್ವ, ಸಮಾನತೆ, ಸಹಿಷ್ಣುತೆ ಮತ್ತು ಮುಕ್ತತೆಯ ತತ್ವಗಳು ವಾಕ್ ಸ್ವಾತಂತ್ರ್ಯದ ತತ್ವಗಳು ಶಾಂತಿಯುತ, ಎಲ್ಲರನ್ನೂ ಒಳಗೊಂಡ ಮತ್ತು ನ್ಯಾಯಯುತ ಸಮಾಜವನ್ನು ಅನುಸರಿಸಲು ಪ್ರೇರಣೆ ನೀಡುತ್ತಲೇ ಇವೆ ಎಂದರು.

ಲ್ಯಾಂಬೆತ್ ನಗರದ ಮಾಜಿ ಮೇಯರ್ ಡಾ. ನೀರಜ್ ಪಾಟೀಲ್ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಸಂತಾಪ ಕಾರ್ಯಕ್ರಮದಲ್ಲಿ ಪ್ರಮುಖರಾದ ಬರ್ನ್ಲಿಯ ಲಾರ್ಡ್ ಖಾನ್, ಸೀಮಾ ಮಲ್ಹೋತ್ರಾ, ಗುರಿಂದರ್ ಜೋಸನ್, ಗುರಿಂದರ್ ಜೋಸನ್, ಲಾರ್ಡ್ ರಸೆಲ್ ರೂಕ್, ಸಿ.ಬಿ. ಪಟೇಲ್, ತೃಪ್ತಿ ಪಟೇಲ್, ಕೃಷ್ಣ ಭನ್, ಕಿರಿತ್ ವಾಡಿಯಾ, ಜಯಮಿನಿ ಪಟೇಲ್, ಅಭಿಜೀತ್ ಸಾಲಿಮಠ ಸೇರಿದಂತೆ ಇತರರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net