More

    ಲಾಕ್​ಡೌನ್​ನಲ್ಲೇ ಸೂಪರ್​ಸ್ಟಾರ್​ ರಜನಿಕಾಂತ್​ ಕಡೆಯಿಂದ ಬಂತು ಸಿಹಿಸುದ್ದಿ!

    ಸೂಪರ್​ ಸ್ಟಾರ್ ರಜನಿಕಾಂತ್ ಸಿನಿಮಾ ಬಿಡುಗಡೆ ಆಗಲಿದೆ ಎಂದರೆ ಅಭಿಮಾನಿಗಳಿಗೆ ಅದು ಹಬ್ಬದ ಸಂಭ್ರಮ. ಇದೀಗ ಫ್ಯಾನ್ಸ್​ಗೆ ಕರೊನಾ ಲಾಕ್​ಡೌನ್​ ಇದ್ದರೂ ಸಿಹಿಸುದ್ದಿಯೊಂದನ್ನು ನೀಡಿದ್ದಾರೆ ರಜನಿಕಾಂತ್​. ‘ಅಣ್ಣಾಟೆ’ ಚಿತ್ರದ ಬಿಡುಗಡೆ ಬಗ್ಗೆ ಮಾಹಿತಿ ಹೊರಹಾಕಿದ್ದಾರೆ. ವಿಶ್ವಾಸಂ ಸಿನಿಮಾ ಖ್ಯಾತಿಯ ಸಿವ ನಿರ್ದೇಶನದಲ್ಲಿ ಅಣ್ಣಾಟೆ ಚಿತ್ರ ಸಿದ್ಧವಾಗಿದ್ದು, 2021ರ ಪೊಂಗಲ್​ಗೆ ಸಿನಿಮಾ ಬಿಡುಗಡೆ ಆಗಲಿದೆ. ಎಲ್ಲ ಅಂದುಕೊಂಡಂತೆ ಆಗಿದ್ದರೆ, ದೀಪಾವಳಿಗೆ ಈ ಚಿತ್ರ ತೆರೆಕಾಣಬೇಕಿತ್ತು. ಇದೀಗ ಬಿಡುಗಡೆ ಮುಂದಕ್ಕೆ ಹೋಗಿದ್ದರಿಂದ ಅಭಿಮಾನಿಗಳೂ ಒಂದು ರೀತಿ ಸಂಭ್ರಮದಲ್ಲಿದ್ದಾರೆ.

    ಇದನ್ನೂಓದಿ: ರಚಿತಾ ತುಂಬು ಹೃದಯದ ಕೃತಜ್ಞತೆ ಸಲ್ಲಿಸಿದ್ದು ಯಾಕೆ?

    ರಜನಿಕಾಂತ್​ಗೂ ಜನವರಿ ತಿಂಗಳಿಗೂ ಅವಿನಾಭಾವ ನಂಟು. ಇತ್ತೀಚಿನ ಅವರ ಎರಡು ಸಿನಿಮಾಗಳು ಪೊಂಗಲ್​ ಪ್ರಯುಕ್ತ ಬಿಡುಗಡೆಯಾಗಿವೆ. ಅದರಲ್ಲಿ ಕಾರ್ತಿಕ್​ ಸುಬ್ಬರಾಜು ನಿರ್ದೇಶನದ ಪೇಟ್ಟಾ, ಎ.ಆರ್​ ಮುರುಗದಾಸ್​ ಆ್ಯಕ್ಷನ್​ ಕಟ್ ಹೇಳಿದ್ದ ದರ್ಬಾರ್ ಸಿನಿಮಾ ಪೊಂಗಲ್​ಗೆ ಬಿಡುಗಡೆ ಆಗಿದ್ದವು. ಇದೀಗ ಅಣ್ಣಾಟೆ ಸಹ ಜನವರಿಯಲ್ಲಿ ಬಿಡುಗಡೆ ಆಗುವ ಬಗ್ಗೆ ಚಿತ್ರ ನಿರ್ಮಾಣ ಸಂಸ್ಥೆ ಸನ್ ಪಿಕ್ಚರ್ಸ್​ ​ಅಧಿಕೃತ ಮಾಹಿತಿ ನೀಡಿದೆ.

    ಇದನ್ನೂ ಓದಿ: ಶಿವರಾಜ್​ಕುಮಾರ್​, ಉಪೇಂದ್ರ ಸಂಭ್ರಮಕ್ಕೆ ಇನ್ನೊಂದು ವಾರವಷ್ಟೇ ಬಾಕಿ!!

    ಚಿತ್ರದ ಶೇ. 50 ಭಾಗ ಶೂಟಿಂಗ್​ ಮುಗಿಸಿಕೊಂಡಿರುವ ಅಣ್ಣಾಟೆ, ಬಾಕಿ ಚಿತ್ರೀಕರಣಕ್ಕೆ ಲಾಕ್​ಡೌನ್​ ತೆರವಾಗುತ್ತಿದ್ದಂತೆ ಚಾಲನೆ ಕೊಡಲಿದೆ. ಅಲ್ಲಿಯವರೆಗೂ ಪೋಸ್ಟ್ ಪ್ರೊಡಕ್ಷನ್​ ಕೆಲಸಗಳನ್ನು ಮಾಡಿಕೊಳ್ಳಲಿದೆ. ಚಿತ್ರದಲ್ಲಿ ಮೀನಾ, ನಯನತಾರಾ, ಕೀರ್ತಿ ಸುರೇಶ್​, ಖುಷ್ಬೂ, ಪ್ರಕಾಶ್​ ರೈ ಸೇರಿ ಹಲವು ಘಟಾನುಘಟಿ ಕಲಾವಿದರ ದಂಡೇ ಇದೆ. (ಏಜೆನ್ಸೀಸ್​)

    ಬಾಹುಬಲಿ ಚಿತ್ರದ ಭಲ್ಲಾಳದೇವನ ವರಿಸುತ್ತಾಳಂತೆ ಈ ಚೆಲುವೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts