ಮಾದರಿ ಜೀವನಾದರ್ಶ ಪಾಲನೆ : ಸಾಮಾಜಿಕ ಕಾರ್ಯಕರ್ತ ಹರಿರಾಮಚಂದ್ರ ಕರೆ

31
Published on

ಉಪ್ಪಿನಂಗಡಿ: ಅಶ್ಪ ೃಶ್ಯತೆ ಎಂಬ ಮಹಾ ಪಾಪ ಕೃತ್ಯವನ್ನು ವಿರೋಧಿಸಿ ಭರತ ಭೂಮಿಯನ್ನು ಸಮಾನತೆಯ ಸಾಮರಸ್ಯದ ನೆಲೆವೀಡಾಗಿಸಲು ಯತ್ನಿಸಿದ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಜೀವನಾದರ್ಶ ಪ್ರತಿಯೋರ್ವ ಭಾರತೀಯ ಪಾಲಿಸಬೇಕಾಗಿದೆ ಎಂದು ಹಿರಿಯ ಸಾವಾಜಿಕ ಕಾರ್ಯಕರ್ತ ಹರಿರಾಮಚಂದ್ರ ಹೇಳಿದರು.

ಉಪ್ಪಿನಂಗಡಿ ವೇದಶಂಕರ ನಗರದಲ್ಲಿನ ಶ್ರೀ ಮಾಧವ ಶಿಶು ಮಂದಿರದಲ್ಲಿ ಸಾಮರಸ್ಯ ದಿನಾಚರಣೆ ಹಾಗೂ ಬೇಸಿಗೆ ಶಿಬಿರ ಸಮಾರೋಪದಲ್ಲಿ ಮಾತನಾಡಿದರು.

ಶ್ರೀ ಮಾಧವ ಶಿಶು ಮಂದಿರ ಆಡಳಿತ ಮಂಡಳಿ ಸದಸ್ಯ ಕಂಗ್ವೆ ವಿಶ್ವನಾಥ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಪೋಷಕ ಸಂಘ ಸದಸ್ಯೆ ಅಶ್ವಿತಾ ಶುಭಹಾರೈಸಿದರು. ಶಿಬಿರಾರ್ಥಿಗಳಾದ ಶ್ರೀದೇವಿ ಹಾಗೂ ಆಕಾಶ್ ನಾಯಕ್ ಅನಿಸಿಕೆ ತಿಳಿಸಿದರು. ಶಿಶು ಮಂದಿರ ಮಾತಾಜಿಗಳಾದ ಚೈತ್ರಾ, ಕಾಂತಿಮಣಿ, ಚಂದ್ರಾವತಿ ಉಪಸ್ಥಿತರಿದ್ದರು. ಮೋಕ್ಷಾ ಸ್ವಾಗತಿಸಿದರು. ತನ್ಮಯಿ ಪ್ರಾರ್ಥಿಸಿದರು. ಬಾಲಗೋಕುಲದ ಸಾನಿಕಾ ನಿರೂಪಿಸಿದರು. ಶ್ರವಣ್ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net