

ಬದಿಯಡ್ಕ: ವಾಂತಿಚ್ಚಾಲು ಉಪ್ಲೇರಿ ಶ್ರೀ ಮಂತ್ರಮೂರ್ತಿ ಗುಳಿಗ ಸನ್ನಿಧಿಯಲ್ಲಿ ಪ್ರಾರ್ಥನಾ ಕೋಲ ಭಾನುವಾರ ಜರುಗಿತು.
ಬೆಳಗ್ಗೆ ದೀಪ ಪ್ರತಿಷ್ಠಾಪನೆ, ಭಂಡಾರ ಇಳಿಯುವುದು, ಗಣಪತಿ ಹೋಮ, ಕ್ಷೀರಾಭಿಷೇಕ, ಸೀಯಾಳಾಭಿಷೇಕ, ವಿಶೇಷ ಅಲಂಕಾರ, ತಂಬಿಲ ಸೇವೆ, ಪವಿತ್ ಮಂಡೆಕಾಪು ಸೇವೆಯಲ್ಲಿ ಶ್ರೀ ಮಂತ್ರಮೂರ್ತಿ ಗುಳಿಗ ದೈವದ ಕೋಲ, ಪ್ರಸಾದ ವಿತರಣೆ ಜರುಗಿತು.
ಪ್ರಧಾನ ಕರ್ಮಿ ಗೋಪಾಲಕೃಷ್ಣ ಕುಲಾಲ್ ವಾಂತಿಚ್ಚಾಲು ದೈವದ ಪ್ರಾರ್ಥನೆ ನೆರವೇರಿಸಿದರು. ದಾನಿ ಕುಳೂರು ಕನ್ಯಾನ ಸದಾಶಿವ ಶೆಟ್ಟಿ, ಉದ್ಯಮಿ ಶಿವಶಂಕರ ನೆಕ್ರಾಜೆ, ಮಹೇಶ್ ವಳಕ್ಕುಂಜ, ಡಾ.ಶ್ರೀನಿಧಿ ಸರಳಾಯ ಮೊದಲಾದವರಿದ್ದರು.