ಮೆಹಂದಿ ಹಾಕಿಕೊಳ್ಳಲು ಬ್ಯೂಟಿಪಾರ್ಲರ್‌ಗೆ ಹೋದ ಯುವತಿ ವಿವಾಹದ ಮುನ್ನಾದಿನ ನಾಪತ್ತೆ

FIR-2
Published on

ಮಂಗಳೂರು: ನಿಶ್ಚಿತಾರ್ಥವಾಗಿದ್ದ ಯುವತಿಯೋರ್ವಳು ವಿವಾಹದ ಮುನ್ನಾ ದಿನ ನಾಪತ್ತೆಯಾಗಿರುವ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿದೆ.

ಬೋಳಾರದ ಪಲ್ಲವಿ(22) ನಾಪತ್ತೆಯಾದವರು. ಈಕೆಯ ಒಪ್ಪಿಗೆಯಂತೆ ನಿಶ್ಚಿತಾರ್ಥವಾಗಿತ್ತು. ಎ.16ರಂದು ವಿವಾಹ ನಿಗದಿಯಾಗಿತ್ತು. ಎ.15ರಂದು ಮಧ್ಯಾಹ್ನ ಆಕೆ ಮೆಹಂದಿ ಹಾಕಿಕೊಳ್ಳಲು ಬ್ಯೂಟಿಪಾರ್ಲರ್‌ಗೆ ಹೋಗಿ ಬರುವುದಾಗಿ ತಾಯಿಯಲ್ಲಿ ತಿಳಿಸಿ ಬೋಳಾರದ ಮನೆಯಿಂದ ಒಬ್ಬಳೇ ಹೋದವಳು ವಾಪಸ್ ಬಾರದೆ ನಾಪತ್ತೆಯಾಗಿದ್ದಾರೆ. ಆಕೆಯ ಮೊಬೈಲ್ ಸ್ವಿಚ್‌ಆಫ್ ಆಗಿದೆ ಎಂದು ಮಂಗಳೂರು ದಕ್ಷಿಣ ಠಾಣೆಯ ಪೊಲೀಸರಿಗೆ ದೂರು ನೀಡಲಾಗಿದೆ.

5 ಅಡಿ ಎತ್ತರ, ಬಿಳಿ ಮೈಬಣ್ಣ, ಸಾಧಾರಣ ಶರೀರ, ಕಪ್ಪು ಉದ್ದ ಕೂದಲು ಹೊಂದಿದ್ದು ಕನ್ನಡ, ತುಳು, ಇಂಗ್ಲಿಷ್ ಮತ್ತು ಹಿಂದಿ ಮಾತನಾಡುತ್ತಾಳೆ. ಬ್ಲೂ ಜೀನ್ಸ್ ಪ್ಯಾಂಟ್ ಮತ್ತು ಬ್ಲಾೃಕ್ ಟೀ ಶರ್ಟ್ ಧರಿಸಿದ್ದಳು. ಮಾಹಿತಿ ಸಿಕ್ಕಿದವರು ದಕ್ಷಿಣ ಪೊಲೀಸ್ ಠಾಣೆ (0824-2220518) ಸಂಪರ್ಕಿಸುವಂತೆ ಪೊಲೀಸರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net