

ಬಂಟ್ವಾಳ: ಪುದು ಗ್ರಾಮದ ಸುಜೀರು ಶ್ರೀರಕ್ತೇಶ್ವರಿ ಸಪರಿವಾರ ದೈವಗಳ ಸಾನ್ನಿಧ್ಯದ ಪುನಃಪ್ರತಿಷ್ಠಾಪನಾ ಬ್ರಹ್ಮಕಲಶೋತ್ಸವ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭ ಸುಜೀರುವಿನ ಶ್ರೀ ಮಂಗಳಾದೇವಿ ದೇವಸ್ಥಾನದಲ್ಲಿ ಭಾನುವಾರ ನಡೆಯಿತು.
ದೇವಸ್ಥಾನದ ಅರ್ಚಕ ಅನಂತ್ ಭಟ್, ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಸ ಐತಪ್ಪ ಆಳ್ವ ಸುಜೀರ್‌ಗುತ್ತು ಶುಭ ಹಾರೈಸಿದರು. ಅಧ್ಯಕ್ಷ ಪ್ರತಾಪ್ ಆಳ್ವ ಸುಜೀರ್‌ಗುತ್ತು, ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಅಶೋಕ್ ಶೆಟ್ಟಿ ಸುಜೀರ್‌ಗುತ್ತು, ವಿಶು ಕುಮಾರ್, ಗಣೇಶ ಭಟ್, ಚಂದ್ರಶೇಖರ ಗಾಂಭೀರ ಸುಜೀರ್‌ಗುತ್ತು, ಸತೀಶ್ ಶೆಟ್ಟಿ ಸುಜೀರ್ ಹೊಸಮನೆ, ಆಶಿತ್ ಶೆಟ್ಟಿ ಸುಜೀರ್‌ಗುತ್ತು, ಕಿಶೋರ್ ಕುಮಾರ್ ಸುಜೀರ್, ಕಾರ್ಯಾಧ್ಯಕ್ಷ ದಾಮೋದರ್ ಸಪಲ್ಯ, ಪ್ರವೀಣ್ ಶೆಟ್ಟಿ ಸುಜೀರ್ ಉಪಸ್ಥಿತರಿದ್ದರು. ಕೋಶಾಧಿಕಾರಿ ಸುರೇಂದ್ರ ಕಂಬಳಿ ಸುಜೀರ್ ಬೀಡು ಸ್ವಾಗತಿಸಿದರು. ಅಶೋಕ್ ಶೆಟ್ಟಿ ವಂದಿಸಿದರು.