ಆತ್ಮಹತ್ಯೆ ಯತ್ನಿಸುವಾಗ ಹಗ್ಗ ತುಂಡಾಗಿ ಮಹಿಳೆ ಮೃತ್ಯು!

Suicide
Published on

ಕಾಸರಗೋಡು: ಕುಂಬಳೆ ಸನಿಹದ ಅಡ್ಕದಲ್ಲಿ ಆತ್ಮಹತ್ಯೆಗೆ ಯತ್ನಿಸುವ ಸಂದರ್ಭ ಹಗ್ಗ ತುಂಡಾಗಿ ಬಿದ್ದು, ಗಂಭೀರ ಗಾಯಗೊಂಡಿದ್ದ ಮಹಿಳೆ ಮೃತಪಟ್ಟಿದ್ದಾರೆ.

ಮಂಜೇಶ್ವರ ಬಟ್ಟಯಪದವು ನಿವಾಸಿ ಬಶೀರ್ ಎಂಬುವರ ಪತ್ನಿ ಆಯಿಷತ್ ರಿಯಾನಾ(24) ಜುಲೈ 23ರಂದು ತಾಯಿ ಮನೆಯ ಸ್ನಾನಗೃಹದಲ್ಲಿ ನೇಣಿಗೆ ಶರಣಾಗುವ ಸಂದರ್ಭ ಹಗ್ಗ ತುಂಡಾಗಿದ್ದರಿಂದ ಕೆಳಗೆ ಬಿದ್ದು, ತಲೆಗೆ ಗಂಭೀರ ಗಾಯಗೊಂಡಿದ್ದರು. ತಕ್ಷಣ ಅವರನ್ನು ದೇರಳಕಟ್ಟೆ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದರೂ ಫಲಕಾರಿಯಾಗದೆ ಗುರುವಾರ ಮೃತಪಟ್ಟಿದ್ದಾರೆ.

ಆಯಿಷತ್ ರಿಯಾನಾ ಹಾಗೂ ಬಶೀರ್ ವಿವಾಹ ಮೂರೂವರೆ ವರ್ಷದ ಹಿಂದೆ ನಡೆದಿದ್ದು, ಈ ಸಂದರ್ಭ 15 ಪವನ್ ಚಿನ್ನ ವರದಕ್ಷಿಣೆ ರೂಪದಲ್ಲಿ ನೀಡಲಾಗಿತ್ತು. ದಂಪತಿಗೆ ಎರಡೂವರೆ ವರ್ಷ ಪ್ರಾಯದ ಮಹಮ್ಮದ್ ಬಿಲಾಲ್ ಎಂಬ ಪುತ್ರನಿದ್ದಾನೆ. ಬಿಲಾಲ್ ಜನಿಸಿದ ಆರು ತಿಂಗಳಲ್ಲಿ ರಿಯಾನಾಗೆ ಹಲ್ಲೆ ನಡೆಸಿ ತಾಯಿ ಮನೆಗೆ ಕರೆತಂದು ಬಿಡಲಾಗಿದೆ. ಪತಿಯ ಕಿರುಕುಳದಿಂದ ಆಯಿಷತ್ ಆತ್ಮಹತ್ಯೆಗೈದಿರುವುದಾಗಿ ಅವರ ಸಂಬಂಧಿಕರು ಪೊಲೀಸರಲ್ಲಿ ತಿಳಿಸಿದ್ದಾರೆ. ಕೇಸು ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net