ಮಹಿಳೆ ನೇಣು ಬಿಗಿದು ಆತ್ಮಹತ್ಯೆ

suicide
Published on

ಕಾಸರಗೋಡು: ಬಂದ್ಯೋಡು ಮುಟ್ಟಂ ಸನಿಹದ ಬೇರಿಕೆ ಬೆಂಗರೆ ನಿವಾಸಿ ಚಂದ್ರಹಾಸ ಎಂಬುವರ ಪತ್ನಿ ಭವಾನಿ(59)ಅವರ ಮೃತದೇಹ ಮನೆಯೊಳಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಬುಧವಾರ ಮನೆಯಲ್ಲಿ ಏಕಾಂಗಿಯಾಗಿದ್ದ ಸಂದರ್ಭ ಪತಿ ಚಂದ್ರಶೇಖರ ಕರೆ ಮಾಡಿದರೂ ಸ್ವೀಕರಿಸಿರಲಿಲ್ಲ. ಸಂಶಯಗೊಂಡು ಆಸುಪಾಸಿನ ಸಂಬಂಧಿಕರು ಮನೆಗೆ ಆಗಮಿಸಿ ನೋಡಿದಾಗ ಕೊಠಡಿಯೊಳಗೆ ನೇಣಿಗೆ ಶರಣಾಗಿರುವುದು ಕಂಡು ಬಂದಿತ್ತು. ತಕ್ಷಣ ಕೆಳಗಿಳಿಸಿ ಆಸ್ಪತ್ರೆಗೆ ಸಾಗಿಸಿದರೂ ಪ್ರಯೋಜನವಾಗಿರಲಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net