Sudhanshu Trivedi | ದೇಶದ ಪ್ರಜಾಪ್ರಭುತ್ವ ದಾಳಿಗೆ ಒಳಗಾಗಿದೆ ಎಂಬ ರಾಹುಲ್ ಹೇಳಿಕೆ​; ವಿದೇಶದಲ್ಲಿ ಭಾರತವನ್ನು ಟೀಕಿಸುವುದೆ ಅವರ ಚಾಳಿ ಎಂದ ಸಂಸದ ತ್ರಿವೇದಿ

Sudhanshu Trivedi
Published on

Sudhanshu Trivedi: ಭಾರತೀಯ ಪ್ರಜಾಪ್ರಭುತ್ವ ದಾಳಿಗೆ ಒಳಗಾಗಿದೆ ಎಂಬ ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಹೇಳಿಕೆಯನ್ನು ಶುಕ್ರವಾರ (ಅ 3) ಬಿಜೆಪಿ ಸುಧಾಂಶು ತ್ರಿವೇದಿ ಟೀಕಿಸಿದ್ದು, ಪ್ರಜಾಪ್ರಭುತ್ವದ ಮುಸುಕನ್ನು ಧರಿಸಿ ಕಾಂಗ್ರೆಸ್‌ನಲ್ಲಿ ರಾಜಪ್ರಭುತ್ವವನ್ನು ಜೀವಂತವಾಗಿಟ್ಟ ಕುಟುಂಬದ ಹೊಸ ಮುಖ್ಯಸ್ಥರ ಹೇಳಿಕೆ ಹಾಸ್ಯಾಸ್ಪದ ಎಂದರು.

ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ತ್ರಿವೇದಿ, 100 ವರ್ಷಗಳ ಕಾಲ ಪ್ರಜಾಪ್ರಭುತ್ವದ ಮುಸುಕನ್ನು ಧರಿಸಿ, ಪ್ರಜಾಪ್ರಭುತ್ವದ ಕುರಿತು ಭಾಷಣ ಮಾಡಿ, ಪ್ರಜಾಪ್ರಭುತ್ವದ ಅತಿದೊಡ್ಡ ಸಂಕೇತವಾದ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ರಾಜಪ್ರಭುತ್ವವನ್ನು ಜೀವಂತವಾಗಿಟ್ಟವರಂತೆ ಮಾತನಾಡುವುದಕ್ಕಿಂತ ಹಾಸ್ಯಾಸ್ಪದ ಮತ್ತು ವಿಪರ್ಯಾಸ ಇನ್ನೊಂದಿಲ್ಲ ಎಂದು ಹೇಳಿದರು.

ಗಾಂಧಿ ಕುಟುಂಬವು ಶತಮಾನಗಳಿಂದ ಕಾಂಗ್ರೆಸ್ ಅನ್ನು ಆಳುತ್ತಿದೆ. ತನ್ನ ಸಂಘಟನೆಯ ಪತನ ಮತ್ತು ಅಧಿಕಾರ ನಷ್ಟದಿಂದ ಭಯಭೀತರಾದ ಆ ಕುಟುಂಬದ ಮುಖ್ಯಸ್ಥ, ಇಂದು ಭಾರತ ವಿರೋಧಿ ಶಕ್ತಿಗಳ ನೆರವಾಗುತ್ತಿರುವಂತೆ ಕಾಣುತ್ತಿದ್ದಾರೆ, ರಾಹುಲ್​​ ತಮ್ಮ ಅಭ್ಯಾಸದ ಪ್ರಕಾರ, ವಿದೇಶಿ ನೆಲದಿಂದ ಮತ್ತೊಂದು ಹೇಳಿಕೆ ನೀಡಿದ್ದಾರೆ, ಇದರಲ್ಲಿ ಆಶ್ಚರ್ಯ ಪಡುವಂತಹದ್ದು ಏನು ಇಲ್ಲ. ಕೆಲವು ವ್ಯಕ್ತಿಗಳಿಗೆ ಪ್ರಧಾನಿ ಮೋದಿಯನ್ನು ವಿರೋಧಿಸುವ ಮನಸ್ಥಿತಿ ಎಷ್ಟು ಪ್ರಬಲವಾಗಿದೆಯೆಂದರೆ ಅದು ಸತ್ಯ ನೋಡುವುದನ್ನೆ ನಿಲ್ಲಿಸುತ್ತದೆ ಎಂದು ಹೇಳಿದರು.

"ಮೋದಿ-ಎ-ಬಿಂದು' ಎಂಬ ಪದವನ್ನು ಕಣ್ಣಿಗೆ ಕಟ್ಟಿಕೊಂಡವರಿಗೆ ದೇಶದಲ್ಲಿ ನಡೆಯುತ್ತಿರುವ ಬೇರೆ ಯಾವ ಉತ್ಪಾದನೆಗಳು ಕಾಣುವುದಿಲ್ಲ, ತಮ್ಮ ಒಕ್ಕೂಟದ ಹೆಸರಿನಲ್ಲಿ ಭಾರತವಿದ್ದರು, ಹೃದಯದಲ್ಲಿ ಅದರ ಬಗ್ಗೆ ಯಾವ ಭಾವನೆಗಳು ಇಲ್ಲದ INDI ಮೈತ್ರಿಕೂಟವು 'ಮೋದಿ-ಎ-ಬಿಂದು' ಎಂಬ ಪದವನ್ನೆ ಹಿಡಿದು ರಾಜಕಾರಣ ಮಾಡುತ್ತಿದೆ ಎಂದರು.

ರಾಹುಲ್​​ ವಿವಾದವೇನು..?

ಕೊಲಂಬಿಯಾದ ಇಐಎ ವಿಶ್ವವಿದ್ಯಾಲಯದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ರಾಹುಲ್ ಗಾಂಧಿ, ನರೇಂದ್ರ ಮೋದಿ ನೇತೃತ್ವದ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಾ, ಭಾರತ ಎದುರಿಸುತ್ತಿರುವ ದೊಡ್ಡ ಸವಾಲು ಅದರ ಪ್ರಜಾಪ್ರಭುತ್ವದ ಮೇಲಿನ ದಾಳಿ ಎಂದಿದ್ದರು. ಭಾರತವು ಎಂಜಿನಿಯರಿಂಗ್ ಮತ್ತು ಆರೋಗ್ಯ ರಕ್ಷಣೆಯಂತಹ ಕ್ಷೇತ್ರಗಳಲ್ಲಿ ಬಲವಾದ ಸಾಮರ್ಥ್ಯಗಳನ್ನು ಹೊಂದಿದೆ, ಆದ್ದರಿಂದ ನಾನು ದೇಶದ ಬಗ್ಗೆ ತುಂಬಾ ಆಶಾವಾದಿಯಾಗಿದ್ದೇನೆ. ಆದರೆ ಇಂತಹ ಸಮಯದಲ್ಲಿ ಭಾರತದಲ್ಲಿ ನಡೆಯುತ್ತಿರುವ ಪ್ರಜಾಪ್ರಭುತ್ವದ ಮೇಲಿನ ದಾಳಿಯೇ ದೊಡ್ಡ ಸವಾಲಾಗಿದ ಎಂದು ಹೇಳಿದ್ದರು.

ಪ್ರಸ್ತುತ, ಈ ಪ್ರಜಾಪ್ರಭುತ್ವ ವ್ಯವಸ್ಥೆಯ ಮೇಲೆ ಸಗಟು ದಾಳಿ ನಡೆಯುತ್ತಿರುವುದು ದೊಡ್ಡ ಅಪಾಯ, ದೇಶದ ಅನೇಕ ಭಾಗಗಳಲ್ಲಿ ವಿಭಿನ್ನ ಪರಿಕಲ್ಪನೆಗಳ ನಡುವಿನ ಉದ್ವಿಗ್ನತೆ. 16-17 ಪ್ರಮುಖ ಭಾಷೆಗಳು ಮತ್ತು ಅನೇಕ ಧರ್ಮಗಳೊಂದಿಗೆ, ಈ ವೈವಿಧ್ಯಮಯ ಸಂಪ್ರದಾಯಗಳು ಅಭಿವೃದ್ಧಿ ಹೊಂದಲು ಅವಕಾಶ ನೀಡುವುದು ಮತ್ತು ಅವುಗಳಿಗೆ ಅಗತ್ಯವಿರುವ ಜಾಗವನ್ನು ನೀಡುವುದು ನಿರ್ಣಾಯಕವಾಗಿದೆ ಎಂದರು.(ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net