ಭಾರೀ ಚರ್ಚೆಗೀಡಾದ ಒಂದು ಮೇಕೆಯ ಕಥೆ! ಬೆಂಗಳೂರು ಯುವಕನ ಟ್ವೀಟ್​ ವೈರಲ್​...Bengaluru

untitled-design-2025-10-03t172605117-68dfb9f1aa2f2
Published on

Bengaluru: ಬೆಂಗಳೂರಿನ ಟ್ರಾಫಿಕ್​ ಅಂದರೆ ಸಾಕು ನೆನಪಾಗುವುದೇ ಜನದಟ್ಟಣೆ ಇರುವಂತಹ ಪ್ರದೇಶಗಳು, ವಾಹನಗಳ ಸಾಲು ಹಾಗೇ ಅವುಗಳ ಹಾರ್ನ್ ಶಬ್ಧ. ಆದರೆ ಅಲ್ಲೊಬ್ಬ ವ್ಯಕ್ತಿ ಅದೇ ಜನದಟ್ಟಣೆ ಇರುವಂತಹ ಟ್ರಾಫಿಕ್​ನಲ್ಲಿ  ಕ್ಯಾಬ್​ನಲ್ಲಿ ಚಲಿಸುತ್ತಾ ಮೇಕೆಯನ್ನು ಕಂಡುಕೊಂಡಿದ್ದು, ಅವನು ತೆಗೆದುಕೊಂಡ ಸೆಲ್ಫಿ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​ ಆಗಿದೆ.

ಶೇರ್ ಕ್ಯಾಬ್ ಬುಕ್ ಮಾಡಿದ್ದ ಪ್ರಯಾಣಿಕನೊಬ್ಬ, ಬೆಂಗಳೂರಿನ ರಸ್ತೆಯಲ್ಲಿ ಪ್ರಯಾಣಿಸುವ ವೇಳೆ ಆತ ಕುಳಿತಿದ್ದ ಸೀಟಿನ ಹಿಂದೆ ಇರುವಂತಹ ಮೇಕೆಯನ್ನು ನೋಡಿ ಹರ್ಷ ವ್ಯಕ್ತಪಡಿಸಿ, ಅದರೊಂದಿಗೆ ಫೋಟೋ ತೆಗೆದುಕೊಂಡು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್​ ಮಾಡಿದ್ದಾನೆ.

ತನ್ನ X (ಎಕ್ಸ್​) ಖಾತೆಯಲ್ಲಿ ಪೋಸ್ಟ್​ ಮಾಡಿದಾಗ ಘಟನೆ ಕಂಡುಬಂದಿದೆ. ಪ್ರಯಾಣಿಕ ತನ್ನ ಸೀಟಿನ ಹಿಂದೆ ಇರುವಂತಹ ಮೇಕೆಯನ್ನು ನೋಡಿ ನಗುತ್ತಿದ್ದಾನೆ. ಹಾಗೆಯೇ ಅದರೊಂದಿಗೆ ಫೋಟೋ ತೆಗೆದುಕೊಂಡು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್​ ಮಾಡಿದ್ದಾನೆ. ಚಿತ್ರವು ತ್ವರಿತವಾಗಿ ವೈರಲ್ ಆಗಿ, ಸುಮಾರು ಅರ್ಧ ಮಿಲಿಯನ್ ವೀಕ್ಷಣೆಗಳು, ಸಾವಿರಾರು ಶೇರ್‌ಗಳು, ಲೈಕ್‌ಗಳು ಮತ್ತು ಮೀಮ್‌ಗಳು ಸಾಮಾಜಿಕ ಮಾಧ್ಯಮಗಳಲ್ಲಿ ತುಂಬಿ ತುಳುಕುತ್ತಿದ್ದವು.

ಪ್ರಯಾಣಿಕನ ಪ್ರಕಾರ, ಆ ಪ್ರಾಣಿ ವಾಹನದೊಳಗೆ ಇದೆ ಎಂದು ಮೊದಲು ಅವನು ತಿಳಿದಿಲ್ಲ. ನಂತರ ಆತ ಕ್ಯಾಬ್​ನಲ್ಲಿ ಕುಳಿತ ನಂತರ ಮೇಕೆ ಇರುವುದನ್ನು ಅರಿತುಕೊಂಡಿದ್ದಾನೆ. ಭಯಪಡುವ ಬದಲು ಆತ ಖುಷಿಪಟ್ಟು ಆ ಕ್ಷಣವನ್ನು ಸೆಲ್ಫಿಯೊಂದಿಗೆ ಸೆರೆಹಿಡಿಯಲು ಮುಂದಾಗಿದ್ದಾನೆ.

@Basi_cally ಎಂಬ ಪ್ರಯಾಣಿಕ ತನ್ನ ಅಧೀಕೃತ X (ಎಕ್ಸ್​) ಖಾತೆಯಲ್ಲಿ ನಾನು ಇಂದು ಶೇರ್ಡ್​ ಕ್ಯಾಬ್​ನಲ್ಲಿ ಹತ್ತಿದೆ. ಕ್ಯಾಬ್​ ಒಳಗೆ ಒಂದು ರೀತಿಯ ಮುಸುಕು ವಾಸನೆ ಬರುತ್ತಿತ್ತು. ಆದನ್ನು ನಾನು ಕಾರಿನ ಸೀಟಿನ ವಾಸನೆ ಎಂದು ಭಾವಿಸಿಕೊಂಡೆ. ಆದರೆ ಅದು ಒಂದು ಜೀವಂತ ಇರುವ ಮೇಕೆ ಕಾರಿನ ಹಿಂಬದಿ ಇರುವುದನ್ನು ಅರಿತುಕೊಂಡೆ ಎಂದು ಬರೆದು ಪೋಸ್ಟ್ ಮಾಡಿದ್ದಾನೆ. ಪೋಸ್ಟ್​ ಮಾಡಿ ಕೆಲವು ಸಮಯಗಳ ನಂತರ ಪ್ರಯಾಣಿಕ ಚಿತ್ರವನ್ನು ಡಿಲೀಟ್​ ಮಾಡಿದ್ದು, ಕಾರಣ ಏನೆಂಬುದು ತಿಳಿದಿಲ್ಲ.

ನೆಟ್ಟಿಗರ ಪ್ರತಿಕ್ರಿಯೆ ಏನು?

ಈ ವಿಚಿತ್ರ ದೃಶ್ಯವು ಅಂತರ್ಜಾಲದಲ್ಲಿ ಬೇಗನೆ ಬಿರುಗಾಳಿ ಎಬ್ಬಿಸಿತು. ಸಾವಿರಾರು ಲೈಕ್‌ಗಳನ್ನು ಗಳಿಸಿತು ಮತ್ತು ಹಾಸ್ಯಮಯ ಪ್ರತಿಕ್ರಿಯೆಗಳಿಗೆ ವೇದಿಕೆಯಾಯಿತು. ಕೆಲವು ಬಳಕೆದಾರರು X ಬಳಕೆದಾರ @Basi_callyರನ್ನು ಗೇಲಿ ಮಾಡಿದ್ದು, ಈ ಚಿತ್ರದಲ್ಲಿ ಎರಡು ಮೇಕೆಗಳನ್ನು ನೋಡಬಹುದು ಎಂದು ಬರೆದುಕೊಂಡಿದ್ದಾರೆ. ಹಾಗೆಯೇ, ನಿಮ್ಮ ಸಹ ಪ್ರಯಾಣಿಕನಿಗೆ ಬೇಕಾದಷ್ಟು ಹುಲ್ಲು ಸಿಗಲಿ ಎಂದು ಇನ್ನೊಬ್ಬ ಬಳಕೆದಾರ ಬರೆದಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net