ಆನ್​ಲೈನ್​ ಗೇಮ್​ನಲ್ಲಿ ಅಕ್ಷಯ್​ ಕುಮಾರ್​ ಮಗಳ ನಗ್ನ ಚಿತ್ರ ಕೇಳಿದ್ದ ವಂಚಕ! | Akshay Kumar

Akshay kumar
Published on

Akshay Kumar: ಮುಂಬೈನಲ್ಲಿ ನಡೆದ ಸೈಬರ್​ ಸುರಕ್ಷತಾ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದ ನಟ ಅಕ್ಷಯ್​ ಕುಮಾರ್​, ತಮ್ಮ ಮಗಳು ನಿತಾರಾ ಜೊತೆ ನಡೆದ ಒಂದು ಆತಂಕಕಾರಿ ಘಟನೆಯೊಂದನ್ನು ಹಂಚಿಕೊಂಡಿದ್ದು, ಸೈಬರ್ ಅಪರಾಧದ ವಿಷಯವು ವೇಗವಾಗಿ ಬೆಳೆಯುತ್ತಿದೆ, ಈ ವಿಷಯವಾಗಿ ಮಕ್ಕಳಿಗೆ ಶಾಲಾ ಹಂತದಲ್ಲಿಯೇ ಶಿಕ್ಷಣ ನೀಡುವ ಅವಶ್ಯಕತೆಯಿದೆ ಎಂದಿದ್ದಾರೆ.

ಮಗಳ ಮನಕಲಕುವ ಘಟನೆ ಹಂಚಿಕೊಂಡ ಅಕ್ಷಯ್

ಕಾರ್ಯಕ್ರಮವನ್ನುದ್ದೇಶಿಸಿ ಅಕ್ಷಯ್​ ಕುಮಾರ್ ಮಾತನಾಡಿದ್ದು, ಅವರು ತಮ್ಮ ಮಗಳಾದ ನಿತಾರಾ (13) ಕೆಲವು ತಿಂಗಳ ಹಿಂದೆ ಆನ್​ಲೈನ್​ ವಿಡಿಯೋ ಗೇಮ್​ ಆಡುತ್ತಿದ್ದಾಗ ಅಪರಿಚಿತ ವ್ಯಕ್ತಿಯೊಬ್ಬ ಸ್ನೇಹಪರ ಸಂದೇಶವನ್ನು ಕಳುಹಿಸುತ್ತಿದ್ದು, ಆತನನ್ನು ನನ್ನ ಮಗಳು ಹೇಗೆ ಭೇಟಿಯಾದಳು ಎಂಬುದನ್ನು ಕಾರ್ಯಕ್ರಮದಲ್ಲಿ ವಿವರಿಸಿದ್ದಾರೆ.

ಆನ್​ಲೈನ್​ ಗೇಮ್​ ಅಪರಿಚಿತ ವ್ಯಕ್ತಿಯೊಂದಿಗೆ ಆಟವಾಡಲು ಅವಕಾಶ ಮಾಡಿಕೊಟ್ಟಿತು. ಇವಳ ಪ್ರತಿಸ್ಪರ್ಧಿ ಆಕೆಗೆ ಧನ್ಯವಾದಗಳು, ಅದ್ಭುತ, ಚೆನ್ನಾಗಿ ಅಡಿದ್ದೀರಿ ಎಂಬ ಸಭ್ಯ ಸಂದೇಶಗಳನ್ನು ನೀಡುತ್ತಾ ಒಳ್ಳೆಯ ವ್ಯಕ್ತಿಯೆಂದು ಗುರುತಿಸಿಕೊಂಡಿದ್ದ. ಇದಾದ ಕೆಲವು ದಿನಗಳ ನಂತರ ಆತ ಅವಳು ಗಂಡೋ ಅಥವಾ ಹೆಣ್ಣೋ ಎಂಬ ಸಂದೇಶವನ್ನು ಕಳುಹಿಸಿದ ಇದಕ್ಕೆ ಪ್ರತಿಕ್ರಿಯಿಸಿದ ನಿತಾರಾ ಹೆಣ್ಣು ಎಂದು ತಿಳಿಸಿದಾಗ ಆತನ ಸಂಭಾಷಣೆಯಲ್ಲಿ ಸ್ವರ ಬದಲಾಯಿತು ಎಂದು ನಟ ತಿಳಿಸಿದ್ದಾರೆ.

ನಂತರ ಅಪರಿಚಿತ ವ್ಯಕ್ತಿ ಇದ್ದಕ್ಕಿಂದಂತೆಯೇ ನನ್ನ ಮಗಳ ನಗ್ನ ಚಿತ್ರಗಳನ್ನು ಕಳುಹಿಸಲು ಕೇಳಿಕೊಂಡಿದ್ದಾನೆ. ಇದಾದ ಬಳಿಕ ನನ್ನ ಮಗಳು ಆಟವನ್ನು ಅಲ್ಲಿಗೇ ನಿಲ್ಲಿಸಿ ಆಕೆಯ ತಾಯಿಯ ಬಳಿ ಮಾಹಿತಿ ನೀಡಿದ್ದಾಳೆ. ಅದೃಷ್ಟವಶಾತ್​ ಏನಾಯತು ಎಂದು ಹೇಳಿಕೊಳ್ಳಲು ಆಕೆ ಹಿಂಜರಿಯಲಿಲ್ಲ ಎಂದು ತಿಳಿಸಿದರು.

ವಿಷಯದ ಗಂಭೀರತೆಯನ್ನು ಎತ್ತಿ ತೋರಿಸಿದ ಇವರು, ಇಂತಹ ವಿಧಾನಗಳು ಸೈಬರ್ ಅಪರಾಧದ ದೊಡ್ಡ ಮಾದರಿಯ ಭಾಗವಾಗಿದ್ದು, ಅಲ್ಲಿ ಪ್ರತಿಸ್ಪರ್ಧಿಗಳು ಮೊದಲು ನಂಬಿಕೆಯನ್ನು ಗಳಿಸುತ್ತಾರೆ. ನಂತರ ಅಪ್ರಪ್ತ ವಯಸ್ಕರನ್ನು ಶೋಷಿಸಲು ಪ್ರಾರಂಭಿಸುತ್ತಾರೆ. ಇದಾದ ನಂತರ ಈ ಪ್ರಕರಣಗಳು ಸುಲಿಗೆ, ಆತ್ಮಹತ್ಯೆ ದುರಂತ ಪ್ರಕರಣಗಳಿಗೆ ಸಾಕ್ಷಿಯಾಗುತ್ತಿದೆ ಎಂದು ಅಕ್ಷಯ್​ ಹೇಳಿದರು.

ಒಂದು ತಿಂಗಳ ಅವಧಿಯ ಈ ಉಪಕ್ರಮವು ನಾಗರಿಕರಿಗೆ, ವಿಶೇಷವಾಗಿ ಮಕ್ಕಳು, ಪೋಷಕರು ಮತ್ತು ಶಾಲೆಗಳಿಗೆ ಆನ್‌ಲೈನ್ ಸುರಕ್ಷತೆ, ಡಿಜಿಟಲ್ ಜವಾಬ್ದಾರಿ ಮತ್ತು ಸೈಬರ್ ಅಪರಾಧಗಳಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳುವ ಮಾರ್ಗಗಳ ಬಗ್ಗೆ ಇದು ಶಿಕ್ಷಣವನ್ನು ನೀಡುತ್ತದೆ ಎಂದು ಮುಖ್ಯಮಂತ್ರಿ ದೇವೆಂದ್ರ ಫಡ್ನಾವೀಸ್​ ತಮ್ಮ ಭಾಷಣದಲ್ಲಿ ಡಿಜಿಟಲ್​ ಯುಗದ ಜಾಗರೂಕತೆಯ ತುರ್ತು ಅಗತ್ಯವನ್ನು ತಿಳಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net